ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಭಾರಿ ಸಮಸ್ಯೆ

ಮೈಸೂರು, ಜೂನ್ 2: ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ವ್ಯಾಪ್ತಿಯ ಕಬಿನಿ ಜಲಾಶಯದ ಹಿನ್ನೀರಿನ ಪ್ರಮಾಣ ದಿನೇ ದಿನೇ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ತೀವ್ರ ಆಹಾರದ ಕೊರತೆ ಎದುರಾಗಿದೆ. ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಹಸಿರು ಸಂಪೂರ್ಣವಾಗಿ ಮಾಯವಾಗಿದ್ದು, ತಿನ್ನಲು ಹಸಿರು ಹುಲ್ಲು ಸಿಗದೆ ಕಾಡಾನೆಗಳು ಪರದಾಡುತ್ತಿವೆ. ಅಲ್ಪ ಪ್ರಮಾಣದ ಮಳೆಯಿಂದಾಗಿ ಅಲ್ಲಲ್ಲಿ ಮಾತ್ರ ಗರಿಕೆ ಬೆಳೆದಿದ್ದು, ಆನೆಗಳು ಕಾಲಿನಿಂದ ಒಣಗಿದ ಮಣ್ಣನ್ನು ಒದ್ದು, ಹುಲ್ಲಿನ ಬೇರುಗಳನ್ನು ಬೇರ್ಪಡಿಸಿ ತಿನ್ನುತ್ತಿರುವ ದೃಶ್ಯ ಕಾಣಿಸಿದೆ. ನೀರಿಲ್ಲದ ಬಣಗುಡುತ್ತಿರುವ ನೆಲದಲ್ಲಿ ಆಹಾರಕ್ಕಾಗಿ ಕಾಡಾನೆಗಳು ಪರದಾಡುತ್ತಿರುವ ಅಪರೂಪದ ದೃಶ್ಯ ಜಿ.ಎಸ್. ರವಿಶಂಕರ್ ಎಂಬುವವರ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *