ಕಮಲ್ ಹಾಸನ್ ಸ್ವಪ್ರತಿಷ್ಠೆ ಉಳ್ಳ ಮನುಷ್ಯ: ನಟ ಆರೋಪ – Kannada News | Actor Yatin Karyekar said Kamal Haasan is self obsessed person

ಕಮಲ್ ಹಾಸನ್ (Kamal Haasan), ಭಾರತದ ಸ್ಟಾರ್ ನಟ ಮಾತ್ರವಲ್ಲ, ಅದ್ಭುತ ನಟ ಸಹ. ಸ್ಟಾರ್ ನಟರೆಲ್ಲ ತಮ್ಮನ್ನು ಕಮರ್ಶಿಯಲ್ ಸಿನಿಮಾಗಳಿಗೆ ಮಾತ್ರ ಮೀಸಲಿಟ್ಟುಕೊಂಡಿರುವಾಗ, ಈಗಲೂ ಸಹ ಕಮಲ್ ಹಾಸನ್ ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಸಂಬಂಧಿಸಿದಂತೆ ಯಾವ ತ್ಯಾಗಕ್ಕಾದರೂ ರೆಡಿ ಇರುವ ನಟ, ಸಿನಿಮಾಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ನಟ ಎಂದೆಲ್ಲ ಕಮಲ್ ಅವರನ್ನು ಕರೆಯಲಾಗುತ್ತದೆ. ಆದರೆ ಇದೀಗ ಹಿರಿಯ ನಟರೊಬ್ಬರು ಕಮಲ್ ಹಾಸನ್ ಸ್ವಪ್ರತಿಷ್ಠೆ ಉಳ್ಳ ವ್ಯಕ್ತಿ. ಅವರಿಗೆ ಸ್ಟಾರ್ ಡಮ್ ಬಹಳ ಮುಖ್ಯ ಎಂದು ಆರೋಪಿಸಿದ್ದಾರೆ.

ಯತಿನ್ ಕರ್ಯೇಕರ್ ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವವರು. ದಶಕಗಳಿಂದಲೂ ಅವರು ಚಿತ್ರರಂಗದಲ್ಲಿದ್ದಾರೆ. ಹಲವಾರು ವಿಲನ್, ಪೋಷಕ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ಕಮಲ್ ಹಾಸನ್ ಜೊತೆಗೂ ಸಹ ‘ಹೇ ರಾಮ್’ ಮತ್ತು ‘ವಸೂಲ್ ರಾಜ ಎಂಬಿಬಿಎಸ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಕಮಲ್ ಹಾಸನ್ ಅವರನ್ನು ಸ್ವಪ್ರತಿಷ್ಠೆ ಉಳ್ಳ ವ್ಯಕ್ತಿ, ಗರ್ವಿ ಎಂದೆಲ್ಲ ಕರೆದಿದ್ದಾರೆ. ಅಲ್ಲದೆ, ತಮ್ಮ ಆರೋಪಕ್ಕೆ ಸಾಕ್ಷಿಯನ್ನು ಸಹ ನೀಡಿದ್ದಾರೆ.

ಕಮಲ್ ಹಾಸನ್ ಅವರು ತಮ್ಮ ಪಾತ್ರ ಹಾಗೂ ತಮ್ಮ ಪಾತ್ರದಲ್ಲಿ ತಾವು ದುರ್ಬಲವಾಗಿ ಕಾಣಬಾರದೆಂದು ಹಲವು ಬಾರಿ ದೃಶ್ಯಗಳನ್ನು ತಮ್ಮದೇ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಿದ್ದರು ಎಂದು ಕರ್ಯೇಕರ್ ಹೇಳಿದ್ದಾರೆ. ಸಂಜಯ್ ದತ್ ಅವರ ‘ಮುನ್ನಾ ಬಾಯ್ ಎಂಬಿಬಿಎಸ್’ ಚಿತ್ರದ ತಮಿಳು ರೀಮೇಕ್ ‘ವಸೂಲ್ ರಾಜಾ ಎಂಬಿಬಿಎಸ್’ ಚಿತ್ರದ ಚಿತ್ರೀಕರಣದ ಅನುಭವವನ್ನು ಕರ್ಯೇಕರ್ ಹಂಚಿಕೊಂಡಿದ್ದಾರೆ. ‘ಕಮಲ್ ಹಾಸನ್ ತುಂಬಾ ಸ್ವಪ್ರತಿಷ್ಠೆಯುಳ್ಳವರು. ನಾವು ‘ವಸೂಲ್ ರಾಜಾ ಎಂಬಿಬಿಎಸ್’ ಚಿತ್ರದ ಶೂಟಿಂಗ್‌ನಲ್ಲಿದ್ದಾಗ, ಹಿಂದಿ ಆವೃತ್ತಿಯಲ್ಲಿ ಜಿಮ್ಮಿ ಶೆರ್ಗಿಲ್ ಅವರು ಸಂಜಯ್ ದತ್ ಅವರಿಗೆ ಕಪಾಳಕ್ಕೆ ಹೊಡೆಯುವ ದೃಶ್ಯವಿದೆ. ಆದರೆ, ತಮಿಳು ರೀಮೇಕ್‌ನಲ್ಲಿ ಕಮಲ್ ಹಾಸನ್ ಆ ದೃಶ್ಯವನ್ನು ಚಿತ್ರೀಕರಿಸಲು ಬಿಡಲಿಲ್ಲ, ಕಪಾಳಕ್ಕೆ ಹೊಡೆಯುವ ಬದಲಾಗಿ ಅದನ್ನು ತಳ್ಳುವ ದೃಶ್ಯವಾಗಿ ಬದಲಾಯಿಸಿದರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಈಗ ಸಿನಿಮಾ ಆಗಿದೆ 47 ವರ್ಷ ಹಿಂದಿನ ಕತೆ, ಕಮಲ್ ಹಾಸನ್ ನಟಿಸಬೇಕಿತ್ತು

‘ಸಂಜಯ್ ದತ್ ಅವರೇ ಆ ದೃಶ್ಯವನ್ನು ಯಾವುದೇ ಹಿಂಜರಿಕೆ ಇಲ್ಲದೆ ಮಾಡಿದ್ದಾರೆ, ಹಾಗಿದ್ದಮೇಲೆ ಈ ವ್ಯಕ್ತಿಗೆ (ಕಮಲ್ ಹಾಸನ್) ಏನು ಸಮಸ್ಯೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ‘ಮುನ್ನಾ ಬಾಯ್ ಎಂಬಿಬಿಎಸ್’ ಚಿತ್ರದಲ್ಲಿ ಸುನಿಲ್ ದತ್ ತಂದೆಯ ಪಾತ್ರಕ್ಕೆ ಇದ್ದ ಗೌರವ, ಅಧಿಕಾರ ಮನೋಭಾವವನ್ನು ಈ ರೀಮೇಕ್‌ನಲ್ಲಿ ಮರುಸೃಷ್ಟಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ‘ಕಮಲ್ ಹಾಸನ್ ಅವರ ತಂದೆಯ ಪಾತ್ರದಲ್ಲಿ ನಟಿಸಿದವರಿಗೆ ಯಾರೂ ‘ಏ, ಹೋಗು’ ಎಂದು ಹೇಳುವಂತಿರಲಿಲ್ಲ’ ಎಂದು ಕರ್ಯೇಕರ್ ತಿಳಿಸಿದರು.

ಕಮಲ್ ಹಾಸನ್ ವಿವಾದಗಳನ್ನು ಬಳಸಿಕೊಳ್ಳುವ ಹವ್ಯಾಸ ಹೊಂದಿದ್ದರು ಎಂದು ಸಹ ಯತಿನ್ ಕರ್ಯೇಕರ್ ಹೇಳಿದ್ದಾರೆ. ವಿವಾದಗಳಿಂದ ಅವರಿಗೆ ಮತ್ತು ಅವರ ಚಿತ್ರಗಳಿಗೆ ಪ್ರಚಾರ ಸಿಗಲು ಸಹಾಯ ಮಾಡುತ್ತಿತ್ತು. ‘ಹೇ ರಾಮ್’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ವಿಮಾನ ತಡವಾದಾಗ ಅವರು ವಿಮಾನದ ಮುಂದೆ ಕುಳಿತು ಪ್ರತಿಭಟಿಸಿದ್ದನ್ನು ಕರ್ಯೇಕರ್ ನೆನಪಿಸಿಕೊಂಡರು.
ಕಮಲ್ ಹಾಸನ್ ಅವರನ್ನು ಟೀಕೆ ಕರ್ಯೇಕರ್ ಟೀಕೆ ಮಾಡಿದರಾದರೂ ಅವರಲ್ಲಿರುವ ಅದ್ಭುತ ತಂತ್ರಜ್ಞ ಮತ್ತು ಚಲನಚಿತ್ರ ನಿರ್ಮಾಪಕನನ್ನು ತಾನು ಗೌರವಿಸುತ್ತೇನೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *