ಬಿಡುಗಡೆಗೆ ಸಜ್ಜಾಗಿರುವ ‘ಕರಾವಳಿ’ (Karavali) ಸಿನಿಮಾ ತಂಡದ ಕಿರಿಕ್ ಈಗ ಬೀದಿಗೆ ಬಂದಿದೆ. ಈ ಸಿನಿಮಾದ ನಿರ್ದೇಶಕ ಗುರುದತ್ ಗಾಣಿಗ ಮತ್ತು ನಟ ಪ್ರಜ್ವಲ್ ದೇವರಾಜ್ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಗೊತ್ತಾಗಿದೆ. ಈ ಸಿನಿಮಾದ ಟ್ರೇಲರ್ ಪ್ರೀಮಿಯರ್ ವೇಳೆ ಪ್ರಜ್ವಲ್ ಅಭಿಮಾನಿಗಳು ಬಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ರೇಲರ್ನಲ್ಲಿ ಪ್ರಜ್ವಲ್ ಅವರ ಧ್ವನಿ ಇಲ್ಲ ಎಂಬುದೇ ಫ್ಯಾನ್ಸ್ ಅಸಮಾಧಾನಕ್ಕೆ ಕಾರಣ ಆಗಿದೆ. ಆ ಬಗ್ಗೆ ‘ಟಿವಿ9 ಕನ್ನಡ’ ಜೊತೆ ನಿರ್ದೇಶಕ ಗುರುದತ್ ಗಾಣಿಗ ಅವರು ಮಾತನಾಡಿದ್ದಾರೆ. ಈ ವಿವಾದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಮಾತುಕಥೆ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತಾವು ಸಿದ್ಧ ಎಂದು ಗುರುದತ್ ಗಾಣಿಗ ಅವರು ಹೇಳಿದ್ದಾರೆ. ಟ್ರೇಲರ್ ಪ್ರೀಮಿಯರ್ ಕಾರ್ಯಕ್ರಮಕ್ಕೆ ಪ್ರಜ್ವಲ್ ದೇವರಾಜ್ ಅವರು ಗೈರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
