
ಚೆನ್ನೈ, ಮೇ.4: ತಮಿಳುನಾಡು ರಾಜಕೀಯ ಇತಿಹಾಸದ ದೊಡ್ಡ ನಾಯಕರಾದ ಕರುಣಾನಿಧಿ ಮತ್ತು ಎಂ.ಜಿ.ಆರ್ (MGR) ಅವರಿಗೆ ಹೋಲಿಸಿದರೆ ಇಂದಿನ ನಾಯಕರು ಹೆಚ್ಚು ಪ್ರಬಲವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಸ್ಟಾಲಿನ್ ಅವರ ರಾಜತಾಂತ್ರಿಕ ನಡೆಗಳು ಮತ್ತು ವಿಜಯ್ ಅವರ ಜನಪ್ರಿಯತೆ ಈಗ ಹೊಸ ಸಮೀಕರಣಗಳಿಗೆ ನಾಂದಿ ಹಾಡುತ್ತಿವೆ. ಕರುಣಾನಿಧಿ ಅವರಿಗಿಂತಲೂ ಸ್ಟಾಲಿನ್ ಅವರು ಹೆಚ್ಚು ವ್ಯವಸ್ಥಿತವಾಗಿ (Systematic) ಪಕ್ಷ ಮತ್ತು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಎಂ.ಜಿ.ಆರ್ ನಂತರ ಅಷ್ಟೇ ಮಟ್ಟದ ಜನಬೆಂಬಲ ಹೊಂದಿರುವ ವಿಜಯ್, ರಾಜಕೀಯವಾಗಿ ಎಂ.ಜಿ.ಆರ್ ಅವರಿಗಿಂತಲೂ ದೊಡ್ಡ ಬದಲಾವಣೆ ತರಬಲ್ಲರೇ ಎಂಬ ಕುತೂಹಲ ಮೂಡಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿಜಯ್ ಬಗ್ಗೆ ಮೀಮ್ಸ್ಗಳು ವೈರಲ್ ಆಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ