‘ಕರ್ಣ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್ಗಳು ಎದುರಾಗಿದ್ದವು. ಈಗ ದೊಡ್ಡ ತಿರುವು ಎದುರಾಗಿದೆ. ತನ್ನ ತಂದೆಯಿದಲೇ ಕರ್ಣ ಸಾಯುವ ಸ್ಥಿತಿ ತಲುಪಿದ್ದಾನೆ. ಹೌದು, ಕರ್ಣ ಧಾರಾವಾಹಿಯಲ್ಲಿ ದೊಡ್ಡ ತಿರುವು ಎದುರಾಗಿದೆ. ಕರ್ಣನನ್ನು ರಮೇಶ್ ಕೊಲ್ಲಲು ಮುಂದಾಗಿದ್ದಾನೆ. ತನಗೆ ಆದ ಅವಮಾನಗಳನ್ನು ಸಹಿಸಲಾಗದೆ ಆತ ಈ ರೀತಿ ಮಾಡಲು ಮುಂದಾಗಿದ್ದಾನೆ. ಮುಂದಿನ ಎಪಿಸೋಡ್ಗಳು ಸಾಕಷ್ಟು ಕುತೂಹಲ ಮೂಡಿಸುತ್ತಿವೆ. ಆ ಬಗ್ಗೆ ಇಲ್ಲಿದೆ ವಿವರ.
ರಮೇಶ್ಗೆ ಕರ್ಣನೇ ಮಗ ಆಗಬೇಕು. ಆದರೆ, ಆತ ಸದ್ಯಕ್ಕೆ ಸಾಕು ಮಗ. ಅವನು ತನ್ನದೇ ಮಗ ಎಂಬ ವಿಷಯ ರಿವೀಲ್ ಆಗಿಲ್ಲ. ಹೀಗಾಗಿ, ಕರ್ಣನ ವಿರುದ್ಧ ಆತ ದ್ವೇಷ ಸಾಧಿಸುತ್ತಿದ್ದಾನೆ. ತನ್ನದೇ ಮಗನ ಮೇಲೆ ಕೋಪಗೊಳ್ಳುತ್ತಿದ್ದಾನೆ. ಕರ್ಣನ ಮುಗಿಸಬೇಕು ಎಂಬುದು ರಮೇಶ್ ತಂಗಿ ತಾರಾಳ ಪ್ಲ್ಯಾನ್. ಇದಕ್ಕೆ ರಮೇಶ್ನ ದಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾಳೆ. ಕರ್ಣನ ಕೊಲೆ ಮಾಡುವ ಪ್ಲ್ಯಾನ್ ಕೊಟ್ಟಿದ್ದು ಅವಳೇ.
ರಮೇಶ್ ಪತ್ನಿಗೆ ವಿಚ್ಛೇದನ ನೀಡಬೇಕು ಎಂದುಕೊಂಡಿದ್ದಾನೆ. ಆದರೆ, ಇದಕ್ಕೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಇದೆಲ್ಲ ಕರ್ಣನ ಕುಮ್ಮಕ್ಕು ಎಂಬುದು ರಮೇಶ್ ಅಭಿಪ್ರಾಯ. ಈ ರೀತಿಯ ಆಲೋಚನೆಯನ್ನು ಆತನ ತಲೆಯಲ್ಲಿ ತುಂಬಿದ್ದು ತಾರಾ. ಅಲ್ಲದೆ, ಹಣಕ್ಕಾಗಿ ಕರ್ಣನ ಬಳಿ ಕೈಚಾಚ ಬೇಕು ಎಂದು ಆತನಿಗೆ ಅನಿಸಿದೆ.
ಇದನ್ನೂ ಓದಿ:ಕರ್ಣ ಧಾರಾವಾಹಿಯಲ್ಲಿ ಆಷಾಢದ ಟ್ವಿಸ್ಟ್; ಮೆಕ್ಯಾನಿಕ್ ವೇಷದಲ್ಲಿ ಬಂದ ಕಥಾನಾಯಕ
ಇದಕ್ಕೆಲ್ಲ ಪರಿಹಾರ ಏನು ಎಂದು ತಂಗಿ ತಾರಾ ಬಳಿ ಕೇಳಿದ್ದಾನೆ ರಮೇಶ್. ಇದಕ್ಕೆ ಪರಿಹಾರವನ್ನು ತಾರಾ ಸೂಚಿಸಿದ್ದಾಳೆ. ಕೊಲೆ ಮಾಡೋಣ ಎಂದಿದ್ದಾಳೆ. ಆದರೆ, ಆರಂಭದಲ್ಲಿ ರಮೇಶ್ ಇದಕ್ಕೆ ಒಪ್ಪಿಲ್ಲ. ಕೊನೆಗೆ ಇದಕ್ಕೆ ಅವನು ಒಪ್ಪಿಗೆ ಕೊಟ್ಟಿದ್ದಾನೆ.
ಕರ್ಣನ ಸೀತಾಳ ಹುಡುಕಿ ಹೋಗಿದ್ದಾನೆ. ಸೀತಾ ಎಂಬುದು ರಮೇಶ್ ಮತ್ತೊಂದು ಪತ್ನಿ. ಈ ವೇಳೆ ರಸ್ತೆಯಲ್ಲಿದ್ದ ಕರ್ಣನಿಗೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಕರ್ಣನ ಪ್ರಾಣಕ್ಕೆ ಕುತ್ತು ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
