ಕಲಬುರಗಿಯಲ್ಲಿ ಸರ್ಕಾರಿ ಕೆಲಸದ ಆಮಿಷವೊಡ್ಡಿ ಯುವಕ-ಯುವತಿಯರಿಗೆ ಲಕ್ಷಾಂತರ ರೂ ಮೋಸ – Kannada News | Government Job Scam: people Lost lakhs of rupees for Nursing Job Fraud

ಇಎಸ್​ಐ ಆಸ್ಪತ್ರೆ, ವಂಚಿಸಿರುವ ವ್ಯಕ್ತಿ ಪ್ರದೀಪ್Image Credit source: tv9 kannada

ಕಲಬುರಗಿ, ಮೇ 07: ಸರ್ಕಾರಿ ಕೆಲಸ‌ ಸಿಗುತ್ತೆ ಅಂದರೆ ಸಾಕು ಜನ ಅದನ್ನ ಪಡೆಯಲೇಬೆಕು ಅಂತ ಕಾದು ಕುಳಿತಿರುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಭೂಪನೊಬ್ಬ ಕಲಬುರಗಿಯಲ್ಲಿ (kalaburagi) ಹತ್ತಾರು ಯುವಕ, ಯುವತಿಯರಿಂದ ಲಕ್ಷ ಲಕ್ಷ ರೂ ಹಣ ಪಡೆದು ಮೋಸ (Job Scam) ಮಾಡಿದ್ದಾನೆ. ನರ್ಸಿಂಗ್ ಕೆಲಸ ಕೊಡಿಸುತ್ತನೆಂದು ಮೋಸ ಮಾಡಿದ್ದಲ್ಲದೆ ಹಣವು ಕೊಡದೇ ಸತಾಯಿಸುತ್ತಿದ್ದಾನೆ.

ಮುಖ್ಯಾಂಶಯಗಳು

  • ಕಲಬುರಗಿಯ ESI ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸದ ಹೆಸರಿನಲ್ಲಿ ವಂಚನೆ
  • ಸರ್ಕಾರಿ ಕೆಲಸದ ಆಮಿಷವೊಡ್ಡಿ ಯುವಕ-ಯುವತಿಯರಿಗೆ ಮೋಸ
  • ಸರ್ಕಾರಿ ಕೆಲಸವು ಇಲ್ಲದೆ, ಹಣ ಕಳೆದುಕೊಂಡು ಗೋಳಾಟ

ನಸ್೯ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ

ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದರ ವ್ಯಕ್ತಿ ಪ್ರದೀಪ್​​ ಎಂಬಾತ ಸಾಕಷ್ಟು ಜನರಿಗೆ ವಂಚಿಸಿದ್ದಾನೆ. ರಾಜ್ಯದ ಅತೀ ದೊಡ್ಡ ಮೆಡಿಕಲ್ ಕಾಲೇಜು ಕಂ ಆಸ್ಪತ್ರೆಯಾಗಿರುವ ಇಎಸ್​​ಐ ಆಸ್ಪತ್ರೆಯಲ್ಲಿ ನಸ್೯ ಕೆಲಸ ಕೊಡಿಸುತ್ತೆನೆಂದು ಹತ್ತಾರು ಯುವಕರನ್ನ ನಂಬಿಸಿ ಹಣ ವಸೂಲಿ ಮಾಡಿಸಿದ್ದ. ಅಷ್ಟೇ ಅಲ್ಲದೆ  ಈಗಾಗಲೇ ಹಲವರಿಗೆ ಕೆಲಸ ಕೊಡಿಸಿದ್ದಾಗಿ ಹೇಳಿ ನಂಬಿಸಿದ್ದ. ಹೀಗಾಗಿ ಆತನ ನಂಬಿದ್ದ ಜನ ತಮಗೂ ಕೆಲಸ ಸಿಗುತ್ತೆ, ತಮ್ಮ ಭವಿಷ್ಯಕ್ಕೂ ಒಳ್ಳೆಯದಾಗುತ್ತೆ ಅಂತ ನಂಬಿಕೊಂಡಿದ್ದರು. ಅಲ್ಲದೇ ಆತ ಕೇಳಿದಷ್ಟು ಹಣವನ್ನ ಕೊಟ್ಟಿದ್ದರು.

ಇದನ್ನೂ ಓದಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ರೈತನಿಗೆ ವಂಚನೆ: ಕೋಲ್ಡ್ ಸ್ಟೋರೇಜ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಮೆಣಸಿನಕಾಯಿ ಮಾಯ!

ಒಂದೊಂದು ಹುದ್ದೆಗೆ ಒಬ್ಬೊರಿಂದ 2 ಲಕ್ಷದಿಂದ 4 ಲಕ್ಷ ರೂಪಾಯಿವರಿಗೂ ವಸೂಲಿ ಮಾಡಿದ್ದ. ಸುಮಾರು 10ಕ್ಕೂ ಜನರ ಬಳಿ ಹಣ ವಸೂಲಿ ಮಾಡಿ ವರ್ಷವೇ ಕಳೆದರು ಕೂಡ ಕೆಲಸವು ಇಲ್ಲ, ಹಣವು ವಾಪಸ್​​ ನೀಡದೇ ಸತಾಯಿಸುತ್ತಿದ್ದಾನಂತೆ. ಕೇಳಿದರೆ ಇನ್ನು ಸ್ವಲ್ಪ ದಿನ ಕಾಯುವಂತೆ ಹೇಳುತ್ತಿದ್ದಾನಂತೆ. ಇದರಿಂದ ಆಕ್ರೋಶಗೊಂಡ ಜನರು ಆತನನ್ನ ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಂದಾಗ ಪರಾರಿಯಾಗಿದ್ದಾನೆ.

ಸದ್ಯ ಇದೇ ವಿಚಾರಕ್ಕಾಗಿ ಹಣ ಕಳೆದುಕೊಂಡವರು ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಇನ್ನು ಈ ನೌಟಂಕಿ ಪ್ರದೀಪ್​​ ಒಟ್ಟಿಗೆ ಇಎಸ್​ಐ ಆಸ್ಪತ್ರೆಯ ಆಡಳಿತ‌ ಮಂಡಳಿ ಕೂಡ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಪ್ರತಿನಿತ್ಯ ಈತ ಕೆಲವರಿಗೆ ಆಮಿಷವೊಡ್ಡಿ ಇಎಸ್​​ಐ ಆಸ್ಪತ್ರೆಯ ಮುಂಭಾಗ ಪರೀಕ್ಷೆ ಬರೆಯಿಸಿ, ಹಣಕಾಸಿನ ವ್ಯವಹಾರ ಕೂಡ ಮಾಡಿದ್ದನಂತೆ.

ಹಣ ಕೇಳಲು ಹೋದರೆ ಕಾಲ್ಕಿತ ಐನಾತಿ

ಇಷ್ಟೆಲ್ಲಾ ಆದರೂ ಪ್ರದೀಪ್​​ ವಿರುದ್ಧ ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲ. ಅಲ್ಲದೆ ಇಂದು ಕೂಡ ಆತ ಅದೇ ಸ್ಥಳದಲ್ಲಿ ಕೆಲ ಮಹಿಳೆಯರು ಮತ್ತು ಪುರುಷರಿಗೆ ಪರೀಕ್ಷೆ ಇದೆ ಬನ್ನಿ ಅಂತ ಹೇಳಿದ್ದ.‌ ಅತ್ತ ಹಣ ಕಳೆದುಕೊಂಡು, ಕೆಲಸವೂ ಸಿಗದೇ ಆತನಿಂದ ವಂಚನೆಗೊಳಗಾಗಿದ್ದವರು ಕೂಡ ಆಗಮಿಸಿದ್ದಾರೆ. ಹೀಗೆ ಬಂದವರು ಟಿವಿ9 ವಾಹಿನಿಯನ್ನ ಸಂರ್ಪಕ‌ ಮಾಡಿದ್ದರು.‌ ನಮ್ಮ‌ ತಂಡ ಆತನನ್ನ ಹಿಡಿದು ವಿಚಾರಣೆ ಮಾಡುತ್ತಿರುವಾಗಲೇ ಆತ ಉತ್ತರ ನೀಡುತ್ತೇನೆ ಎನ್ನುತಲೇ‌ ಅಲ್ಲಿಂದ ಏಸ್ಕೇಪ್‌ ಆಗಿದ್ದಾನೆ.

ಇದನ್ನೂ ಓದಿ: ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 2.1 ಕೋಟಿ ದೋಖಾ: ವಂಚಕರ ಮಾತು ನಂಬಿ ಹಣ ಕೊಟ್ಟು ಕೆಟ್ಟ 78 ವರ್ಷದ ಮಹಿಳೆ!

ಒಟ್ಟಿನಲ್ಲಿ ಸರ್ಕಾರಿ ಕೆಲಸದ ಆಸೆಗೆ ಬಿದ್ದ ಕೆಲ ಯುವಜನಾಂಗ ಹಣ ಕಳೆದುಕೊಂಡು ಗೋಳಾಡುವಂತ ಪರಿಸ್ಥಿತಿ ನಿರ್ಮಾಣವಾದರೆ, ಅತ್ತ ಇದನ್ನೆ ಬಂಡವಾಳ ಮಾಡಿಕೊಂಡಿರುವ ಇಂತಹ ಮೋಸಗಾರರು ಲಕ್ಷ ಲಕ್ಷ ಹಣ ಪಡೆದುಕೊಂಡು ಚಳ್ಳೆ ತಿನ್ನಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *