ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಂಡಿದ್ದ ನಟ ಜೈದ್ ಖಾನ್ (Zaid Khan) ನಟನೆಯ ‘ಕಲ್ಟ್’ ಸಿನಿಮಾ ಈಗ ಕಿರುತೆರೆಗೆ ಲಗ್ಗೆ ಇಡುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಜುಲೈ 26ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಪ್ರಸಾರವಾಗಲಿದೆ. ಸ್ನೇಹ, ಪ್ರೀತಿ, ಕನಸುಗಳು ಹಾಗೂ ಇಂದಿನ ಯುವ ಪೀಳಿಗೆಯ ಜೀವನದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.
ಚಿತ್ರದಲ್ಲಿ ನಟ ಜೈದ್ ಖಾನ್ ಮಾಧವ ಎಂಬ ಪಾತ್ರದಲ್ಲಿ ಲವರ್ ಬಾಯ್ ಹಾಗೂ ಭಗ್ನಪ್ರೇಮಿಯ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ಸೋತು ಕುಡಿತಕ್ಕೆ ದಾಸನಾಗುವ ನಾಯಕನ ಜೀವನದಲ್ಲಿ ಇತಿಹಾಸಿನಿ ಎಂಬ ಯುವತಿಯ ಪ್ರವೇಶವಾದ ಬಳಿಕ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು. ಇದರೊಂದಿಗೆ ಪೋಷಕರ ನಿರೀಕ್ಷೆಗಳು ಮಕ್ಕಳ ಭಾವನಾತ್ಮಕ ನಿರ್ಧಾರಗಳ ಮೇಲೆ ಬೀರುವ ಪ್ರಭಾವ ಸಿನಿಮಾದಲ್ಲಿದೆ.
z
ಅನಿಲ್ ಕುಮಾರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಜೈದ್ ಖಾನ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಮತ್ತು ಮಲೈಕಾ ವಾಸುಪಾಲ್ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದು, ಕಿಶನ್ ಬಿಳಗಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ‘ಅಯ್ಯೋ ಶಿವನೇ’ ಹಾಗೂ ‘ಬ್ಲಡಿ ಲವ್’ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.
ಇದನ್ನೂ ಓದಿ: ‘ಕಲ್ಟ್ ಹಿಟ್ ಸಿನಿಮಾ’; ಚಿತ್ರದ ಕಲೆಕ್ಷನ್ ಲೆಕ್ಕ ಕೊಟ್ಟ ಝೈದ್ ಖಾನ್
‘ಕಲ್ಟ್’ ಸಿನಿಮಾ ಜನವರಿ 23ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಬಗ್ಗೆ ತಂಡ ಮಾಹಿತಿ ನೀಡಿತ್ತು. ಸ್ವತಃ ಝೈದ್ ಖಾನ್ ಅವರು ಕಲೆಕ್ಷನ್ ವಿವರ ನೀಡಿದ್ದರು. ಈ ಚಿತ್ರ ಮೂರು ದಿನಗಳಲ್ಲಿ 3.87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಚಿತ್ರದ ಬಜೆಟ್ ಕಡಿಮೆ ಇದ್ದಿದ್ದರಿಂದ ಸಿನಿಮಾ ತಂಡ ಲಾಭ ಕಂಡಿರೋ ಸಾಧ್ಯತೆ ಅಧಿಕವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
