ದಾವಣಗೆರೆ, ಏಪ್ರಿಲ್ 27: ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯಿರುವ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್ನ ಧರ್ಮದರ್ಶಿ ಬಿ.ಸಿ.ಉಮಾಪತಿ 2008ರಿಂದ 2026ರವರೆಗಿನ ಲೆಕ್ಕವನ್ನು ಮಂಡಿಸಿದರು. ಸರ್ಕಾರ ಮತ್ತು ಭಕ್ತಾದಿಗಳಿಂದ ಕಳೆದ 18 ವರ್ಷಗಳಲ್ಲಿ ಒಟ್ಟು 27 ಕೋಟಿ 61 ಲಕ್ಷ 57 ಸಾವಿರದ 518 ರೂ ಸಂಗ್ರಹವಾಗಿದೆ ಎಂದು ಅವರು ಮಾಹಿತಿ ನೀಡಿದರು. ಪಂಚಮಸಾಲಿ ಟ್ರಸ್ಟ್ ಚಾರಿಟೇಬಲ್ ಟ್ರಸ್ಟ್ ಆಗಿದ್ದು, ಪ್ರತಿ ವರ್ಷ ಸರ್ಕಾರಕ್ಕೆ ಮತ್ತು ಮಾಸಿಕವಾಗಿ ಟ್ರಸ್ಟ್ ಸಭೆಗಳಲ್ಲಿ ಲೆಕ್ಕ ನೀಡಲಾಗುತ್ತದೆ. ಪಂಚಮಸಾಲಿ ಚಾರಿಟಬಲ್ ಟ್ರಸ್ಟ್, ಸಾರ್ವಜನಿಕರಿಗೆ ಲೆಕ್ಕ ಕೊಡುವಂತಿಲ್ಲ, ಆದರೆ ನಾವು ಈಗಾಗಲೇ ಲೆಕ್ಕಾ ಕೊಟ್ಟಿದ್ದೇವೆ. ಶ್ರೀಗಳು ಮಾಡಿದ ತಪ್ಪು ಮುಚ್ಚಿಕೊಳ್ಳಲು ಲೆಕ್ಕ ಕೊಡಿ ಚಳವಳಿ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
