ಬೆಂಗಳೂರು, (ಮೇ 21): ಸೋಷಿಯಲ್ ಮೀಡಿಯಾದಲ್ಲಿ ಈಗ ಒಂದೇ ಸದ್ದು ಅದೇ ಕಾಕ್ರೋಚ್ ಜನತಾ ಪಾರ್ಟಿ(cockroach janata party). ರಾತ್ರೋರಾತ್ರಿ ಜನ್ಮತಾಳಿದ ಕಾಕ್ರೋಚ್ ಪಾರ್ಟಿ, ಭಾರಿ ಸಂಚಲನ ಮೂಡಿಸಿದೆ. ಮಜಾ ಅಂದ್ರೆ, ಬರೀ ಸಾಮಾನ್ಯ ಯುವಕರಷ್ಟೇ ಅಲ್ಲ, ಈಗ ಗ್ಲಾಮರ್ ದುನಿಯಾದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮತ್ತು ಬಾಲಿವುಡ್ ಮಂದಿ ಕೂಡ ಈ ಜಿರಳೆ ಪಕ್ಷಕ್ಕೆ ಜೈ ಎನ್ನುತ್ತಾ ಸಾಲಾಗಿ ಬಂದು ಸೇರಿಕೊಳ್ಳುತ್ತಿದ್ದಾರೆ. ಇನ್ನು ಇತ್ತ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆದ ಯುವ ಕಾಂಗ್ರೆಸ್ ಪ್ರತಿಭಟನೆ ವೇಳೆ ಕೈ ನಾಯಕರು ಕಾಕ್ರೋಚ್ ಟಿಶರ್ಟ್ ಬಿಡುಗಡೆ ಮಾಡಿದರು.
