ಕಾಫಿತೋಟದಲ್ಲಿ ನಾಪತ್ತೆಯಾಗಿದ್ದ 1.5 ವರ್ಷದ ಮಗು 12 ಗಂಟೆ ಬಳಿಕ ಸುರಕ್ಷಿತವಾಗಿ ಪತ್ತೆ!: ಹೇಗಿತ್ತು ಗೊತ್ತಾ ಖಾಕಿ ಕಾರ್ಯಾಚರಣೆ? – Kannada News | Chikmagalur Police Rescue Lost Toddler in Coffee Estate After 12 Hour Operation

ಚಿಕ್ಕಮಗಳೂರು, ಮೇ 08: ಆಟವಾಡುವ ವೇಳೆ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಮಗುವನ್ನು 12 ಗಂಟೆ ಕಾರ್ಯಾಚರಣೆ ನಡೆಸಿ ಪೊಲೀಸರು ಪತ್ತೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ನಡೆದಿದೆ. ಟೀ ಎಸ್ಟೇಟ್​ನಲ್ಲಿ ಕೆಲಸಕ್ಕೆ ಬಂದಿದ್ದ ಮಧ್ಯಪ್ರದೇಶ ಮೂಲದ ಗೋನು, ಸೋನು ದಂಪತಿಯ 1.5 ವರ್ಷದ ಗಂಡು ಮಗು ನಿನ್ನೆ ಸಂಜೆ ಕಳೆದುಹೋಗಿತ್ತು. ಮೂಡಿಗೆರೆ ಸಿಪಿಐ, ಬಾಳೂರು ಪಿಎಸ್​​ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮಗುವನ್ನು ಪತ್ತೆ ಹಚ್ಚುವಲ್ಲಿ ತಂಡ ಯಶಸ್ವಿಯಾಗಿದೆ.

  • ಆಟವಾಡುವ ವೇಳೆ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಮಗು ಪತ್ತೆ
  • 12 ಗಂಟೆ ಕಾರ್ಯಾಚರಣೆ ನಡೆಸಿ 1.5 ವರ್ಷದ ಗಂಡು ಮಗುವಿನ ರಕ್ಷಣೆ
  • ಚಿಕ್ಕಮಗಳೂರಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಮೂವರು ಮಕ್ಕಳ ಜೊತೆ ಆಡವಾಡುತ್ತಾ ಕಾಫಿ ತೋಟಕ್ಕೆ ಬಂದಿದ್ದ ಮಗು ನಾಪತ್ತೆಯಾಗಿತ್ತು. ತೀವ್ರ ಹುಡುಕಾಟದ ನಂತರ ಮಗು ಸುರಕ್ಷಿತವಾಗಿ ಪತ್ತೆಯಾಗಿದ್ದು, ಶೋಧ ನಡೆಸುವವರ ಕಣ್ಣಿಗೆ ಮಗು ಬೀಳುವಾಗ ಅದು ಮಲಗಿತ್ತು ಎಂಬುದು ಗೊತ್ತಾಗಿದೆ. ನಿನ್ನೆ ಸಂಜೆ ಕಳೆದುಹೋಗಿದ್ದ ಮಗುವನ್ನು ಸತತ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಂದು ಬೆಳಗ್ಗೆ ತೋಟದಲ್ಲಿ ಪತ್ತೆಮಾಡಿ, ಹೆತ್ತವರ ಮಡಿಲಿಗೆ ಮರಳಿ ಸೇರಿಸಿದ್ದಾರೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

Leave a Reply

Your email address will not be published. Required fields are marked *