ಕಾವ್ಯಾನ ಮದುವೆ ಆಗಲ್ಲ: ಎಲ್ಲರ ಎದುರು ನೇರವಾಗಿ ಹೇಳಿದ ಗಿಲ್ಲಿ ನಟ

ಕಾವ್ಯಾನ ಮದುವೆ ಆಗಲ್ಲ: ಎಲ್ಲರ ಎದುರು ನೇರವಾಗಿ ಹೇಳಿದ ಗಿಲ್ಲಿ ನಟ

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ ಇದ್ದಾಗ ಕಾವ್ಯಾ ಶೈವ ಮತ್ತು ಗಿಲ್ಲಿ ನಟ ಅವರು ಹೆಚ್ಚು ಕ್ಲೋಸ್ ಆಗಿದ್ದರು. ಮದುವೆ ವಿಷಯದಲ್ಲಿ ಗಿಲ್ಲಿ ಅವರು ಕಾವ್ಯಾನ ಆಗಾಗ ರೇಗಿಸುತ್ತಿದ್ದರು. ಬಿಗ್ ಬಾಸ್ ಶೋ ಮುಗಿದು ಹಲವು ದಿನಗಳು ಕಳೆದಿದ್ದರೂ ಕೂಡ ಜನರ ಕ್ರೇಜ್ ಕಡಿಮೆ ಆಗಿಲ್ಲ. ಖಾಸಗಿ ಮಳಿಗೆ ಉದ್ಘಾಟನೆಗಾಗಿ ಗಿಲ್ಲಿ ನಟ (Gilli Nata) ಅವರು ಯಾದಗಿರಿಗೆ ಬಂದಿದ್ದಾರೆ. ಈ ವೇಳೆ ಮದುವೆ ಬಗ್ಗೆ ಪ್ರಶ್ನೆ ಎದುರಾಯಿತು. ಆ ಪ್ರಶ್ನೆಗೆ ಅವರು ನೇರವಾಗಿ ಉತ್ತರ ನೀಡಿದರು. ‘ಕಾವ್ಯಾ ಮತ್ತು ಗಿಲ್ಲಿ ನಟ ಮದುವೆ ಆಗಬಹುದು ಅಂತ ಚರ್ಚೆ ಆಗುತ್ತಿದೆಯಲ್ಲ’ ಅಂತ ಕೇಳಿದ್ದಕ್ಕೆ, ‘ಹಂಗೇನೂ ಇಲ್ಲ’ ಎಂದು ಗಿಲ್ಲಿ ಅವರು ಉತ್ತರಿಸಿದರು. ಈ ವೇಳೆ ಉತ್ತರ ಕರ್ನಾಟಕದ ಜನರು ತಮಗೆ ತೋರಿಸುತ್ತಿರುವ ಪ್ರೀತಿ, ಅಭಿಮಾನದ ಬಗ್ಗೆಯೂ ಅವರು ಮಾತನಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *