‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada) ಶೋನಲ್ಲಿ ಗಿಲ್ಲಿ ನಟ ಅವರು ಕಾವ್ಯಾ ಶೈವ ಜೊತೆ ಕ್ಲೋಸ್ ಆಗಿದ್ದರು. ಶೋ ಮುಗಿದ ನಂತರವೂ ಆ ಸ್ನೇಹ ಮುಂದುವರಿದಿದೆ. ಈಗ ಗಿಲ್ಲಿ ನಟ ಅಭಿನಯದ ‘ಸೂಪರ್ ಹಿಟ್’ ಸಿನಿಮಾದ ಸುದ್ದಿಗೋಷ್ಠಿ ಸೋಮವಾರ (ಫೆ.9) ನಡೆಯಿತು. ಆ ಬಳಿಕ ಅವರಿಗೆ ಕಾವ್ಯಾ (Kavya Shaiva) ಬಗ್ಗೆ ಪ್ರಶ್ನೆ ಎದುರಾಯಿತು. ‘ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದೀರಂತೆ ಹೌದಾ?’ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಗಿಲ್ಲಿ ಅವರು ಜಾಣತನದ ಉತ್ತರ ನೀಡಿದರು. ‘ನಿಮ್ಮ ಜೊತೆಯೂ ಸುಮಾರು ಸಲ ಮಾತನಾಡಿದ್ದೇನೆ. ನೀವು ಎಷ್ಟೋ ಸಲ ನನಗೆ ಫೋನ್ ಮಾಡಿದ್ದೀರಿ. ನಾನು ಕೂಡ ಮಾಡಿದ್ದೇನೆ’ ಎಂದು ಗಿಲ್ಲಿ ನಟ (Gilli Nata) ಹೇಳಿದರು. ಆ ಮೂಲಕ ಕಾವ್ಯಾ ಜೊತೆಗಿನ ತಮ್ಮ ಮಾತಕಥೆ ತಂಬ ಸಹಜವಾದದ್ದು ಎಂಬರ್ಥದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಆ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
