ಕಾಸರಗೋಡಿನಲ್ಲಿ ಅಚ್ಚರಿಯ ಘಟನೆ: ಚಿನ್ನದ ಉಂಗುರ ಕದ್ದ ಹಾವು; ಡ್ರಾಯರ್ ತೆರೆದ ಮಕ್ಕಳಿಗೆ ಕಾದಿತ್ತು ಬಿಗ್ ಶಾಕ್! – Kannada News | Viral: Snake Found in Kasaragod Drawer with Gold Ring, Rescued Safely

ಕೇರೆ ಹಾವಿನ ಮೈಗೆ ಸಿಲುಕಿತು ಚಿನ್ನದ ಉಂಗುರ

ಕಾಸರಗೋಡು, ಮೇ.5: ಪ್ರಕೃತಿ ಯಾವಾಗ ಎಂತಹ ಅಚ್ಚರಿ ನೀಡುತ್ತದೆ ಎಂದು ಹೇಳಲಾಗದು. ಕಾಸರಗೋಡು ಜಿಲ್ಲೆಯ ಅಡೂರ್ ನಿವಾಸಿ ರವಿ ಎಂಬುವವರ ಮನೆಯಲ್ಲಿ ಇಂತಹದ್ದೇ ಒಂದು ವಿಚಿತ್ರ ಮತ್ತು ಆತಂಕಕಾರಿ ಘಟನೆ ನಡೆದಿದ್ದು, ಮನೆಯ ಡ್ರಾಯರ್ ಒಳಗೆ ಸೇರಿಕೊಂಡಿದ್ದ ಹಾವಿನ ಮೈಗೆ ಚಿನ್ನದ ಉಂಗುರವೊಂದು ಬಿಗಿಯಾಗಿ ಸಿಲುಕಿಕೊಂಡಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಅಷ್ಟಕ್ಕೂ ರವಿ ಅವರ ಮನೆಯಲ್ಲಿ ನಡೆದಿದ್ದೇನು? ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ ನೋಡಿ. ರವಿ ಅವರ ಮಕ್ಕಳು ಮನೆಯೊಳಗೆ ಆಟವಾಡುತ್ತಾ ಟೇಬಲ್‌ನ ಡ್ರಾಯರ್ ತೆರೆದಾಗ ಅದರೊಳಗೆ ದೊಡ್ಡ ಕೇರೆ ಹಾವೊಂದು ಸುರುಳಿ ಸುತ್ತಿಕೊಂಡು ಕುಳಿತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಹಾವನ್ನು ಗಮನಿಸಿದಾಗ ಅದರ ದೇಹದ ಮಧ್ಯಭಾಗದಲ್ಲಿ ಚಿನ್ನದ ಉಂಗುರವೊಂದು ಬಿಗಿಯಾಗಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಬಹುಶಃ ಆಹಾರದ ಹುಡುಕಾಟದಲ್ಲಿ ಡ್ರಾಯರ್‌ನ ಸಣ್ಣ ಸೀಳಿನ ಮೂಲಕ ಒಳಗೆ ಹೋಗುವಾಗ ಡ್ರಾಯರ್‌ನಲ್ಲಿದ್ದ ಉಂಗುರ ಹಾವಿನ ಮೈಗೆ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಚಾಲಕನ ರೌಡಿಸಂ: ಪೊಲೀಸ್ ಮುಂದೆಯೇ ಆಟೋ ಗ್ಲಾಸ್ ಹೊಡೆದು ಪುಂಡಾಟ!

ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಅತ್ಯಂತ ನಾಜೂಕಿನಿಂದ ಹಾವನ್ನು ಹೊರತೆಗೆದು, ಅದರ ಮೈಗೆ ಯಾವುದೇ ಗಾಯವಾಗದಂತೆ ಚಿನ್ನದ ಉಂಗುರವನ್ನು ಕತ್ತರಿಸಿ ತೆಗೆಯುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು. ಮಕ್ಕಳು ಹಾವನ್ನು ಮುಟ್ಟಲು ಹೋಗದ ಕಾರಣ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *