ಈ ತಿಂಗಳಲ್ಲಿ ಕುಂಭ ರಾಶಿಯವರ ಜಾತಕದಲ್ಲಿ ಗ್ರಹಗಳ ಸಂಚಾರವು ಅತ್ಯಂತ ರೋಚಕವಾಗಿದ್ದು, ಇದು ಸವಾಲು ಮತ್ತು ಅವಕಾಶಗಳ ಮಿಶ್ರಣವಾಗಿರಲಿದೆ. ವಿಶೇಷವಾಗಿ ಈ ತಿಂಗಳಲ್ಲಿ ಕುಂಭ ರಾಶಿಯ ಲಗ್ನದಲ್ಲಿಯೇ ಮಂಗಳ ಮತ್ತು ರಾಹುವಿನ ಸಂಯೋಗವಿರುವುದರಿಂದ, ಜೀವನದ ವೇಗ ಹೆಚ್ಚಾಗಲಿದೆ. ಪರಿವರ್ತನೆಯನ್ನು ಕಾಣುವ ಅವಕಾಶ ನಿಮ್ಮದು. ಯಾವ ಗ್ರಹರ ದಶೆ ಈ ತಿಂಗಳಲ್ಲಿ ಉತ್ತಮ ಎನ್ನುವುದು ತಿಳಿದರೆ ಅದಕ್ಕೆ ಬೇಕಾದ ಪರಿಹಾರೋಪಾಯಗಳು ಲಭ್ಯ. ತೊಂದರೆಯನ್ನು ಆ ಮೂಲಕ ಕಡಿಮೆ ಮಾಡಿಕೊಳ್ಳಬಹುದು.
ಶುಭ ಫಲ
ಶುಕ್ರ :
ಮಾರ್ಚ್ ದ್ವಿತೀಯದಲ್ಲಿ ಶುಕ್ರನು ಮೀನ ರಾಶಿಯಲ್ಲಿ ಉಚ್ಚನಾಗುತ್ತಾನೆ. ಇದು ಧನ ಯೋಗವನ್ನು ಸೃಷ್ಟಿಸುತ್ತದೆ. ಆರ್ಥಿಕವಾಗಿ ಲಾಭ, ಕುಟುಂಬದಲ್ಲಿ ಸಂತೋಷ ಮತ್ತು ಸುಖ-ಭೋಗಗಳ ಹೆಚ್ಚಳಕ್ಕೆ ಇದು ಅತ್ಯುತ್ತಮ ಸಮಯ.
ಗುರು :
ಗುರು ಗ್ರಹವು ನಿಮ್ಮ ರಾಶಿಯಿಂದ 5ನೇ ಮನೆಯಲ್ಲಿದ್ದು ನೇರ ಸಂಚಾರದಲ್ಲಿರುತ್ತಾನೆ. ಇದು ವಿದ್ಯಾರ್ಥಿಗಳಿಗೆ, ಸಂತಾನ ಅಪೇಕ್ಷಿತರಿಗೆ ಮತ್ತು ಹೂಡಿಕೆದಾರರಿಗೆ ಉತ್ತಮ ಫಲ ನೀಡುತ್ತದೆ. ಬುದ್ಧಿಶಕ್ತಿ ತೀಕ್ಷ್ಣವಾಗಿರಲಿದೆ.
ಬುಧ :
ಮಾರ್ಚ್ ಮಧ್ಯಭಾಗದ ಅನಂತರ ಬುಧನು ನಿಮ್ಮ ರಾಶಿಯಲ್ಲಿ ನೇರವಾಗಿ ಸಂಚರಿಸುವುದರಿಂದ ಸಂವಹನ ಕಲೆ ಸುಧಾರಿಸುತ್ತದೆ ಮತ್ತು ವ್ಯಾಪಾರದಲ್ಲಿ ಲಾಭ ತರುತ್ತದೆ.
ಅಶುಭ
ಮಂಗಳ ಮತ್ತು ರಾಹು :
ನಿಮ್ಮ ರಾಶಿಯಲ್ಲೇ ಮಂಗಳ ಮತ್ತು ರಾಹುವಿನ ಯುತಿ ಇರುವುದರಿಂದ ಅಂಗಾರಕ ಯೋಗ ಉಂಟಾಗುತ್ತದೆ. ಇದು ಅತಿಯಾದ ಆತುರ, ಕೋಪ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ವಾಹನ ಚಾಲನೆಯಲ್ಲಿ ಜಾಗ್ರತೆ ಅಗತ್ಯ.
ಶನಿ :
ಸಾಡೇ ಸಾಥ್ ನ ಅಂತಿಮ ಹಂತದಲ್ಲಿ ಶನಿಯು ನಿಮ್ಮ ರಾಶಿಯಿಂದ 2ನೇ ಮನೆಯಲ್ಲಿ ಇರುವುದರಿಂದ ಸಾಡೇ ಸಾತಿಯ ಅಂತಿಮ ಹಂತದ ಪ್ರಭಾವವಿರುತ್ತದೆ. ಇದು ಆರ್ಥಿಕ ಶಿಸ್ತನ್ನು ಮತ್ತು ಕಠಿಣ ಪರಿಶ್ರಮವನ್ನು ಬೇಡುತ್ತದೆ.
ಮಿಶ್ರ ಫಲಗಳು
ಸೂರ್ಯ:
ಮಾರ್ಚ್ 15ರವರೆಗೆ ಸೂರ್ಯನು ನಿಮ್ಮ ರಾಶಿಯಲ್ಲಿರುತ್ತಾನೆ, ನಂತರ 2ನೇ ಮನೆಗೆ ಪ್ರವೇಶಿಸುತ್ತಾನೆ. ಇದು ಸರ್ಕಾರಿ ಕೆಲಸಗಳಲ್ಲಿ ಲಾಭ ನೀಡಿದರೂ, ಕಣ್ಣಿನ ಸಮಸ್ಯೆ ಅಥವಾ ತಲೆನೋವಿನಂತಹ ಆರೋಗ್ಯ ಕಿರಿಕಿರಿ ನೀಡಬಹುದು.
ಚಂದ್ರಗ್ರಹಣ :
ತಿಂಗಳ ಆರಂಭದಲ್ಲೇ ಸಂಭವಿಸುವ ಚಂದ್ರಗ್ರಹಣವು ಮಾನಸಿಕವಾಗಿ ಸ್ವಲ್ಪ ಗೊಂದಲ ಉಂಟುಮಾಡಬಹುದು, ಆದರೆ ಆಧ್ಯಾತ್ಮಿಕ ಚಿಂತನೆಗೆ ಇದು ಪೂರಕವಾಗಿದೆ.
ಮಂಗಳ ಮತ್ತು ರಾಹುವಿನ ಪ್ರಭಾವದಿಂದ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇರುತ್ತದೆ, ಆದ್ದರಿಂದ ಶಾಂತವಾಗಿರಿ. ಕೋಪಕ್ಕೆ ಆಸ್ಪದ ಬೇಡವೇ ಬೇಡ. ಮಂಗಳ ಮತ್ತು ಶನಿಯ ನಕಾರಾತ್ಮಕ ಪ್ರಭಾವ ತಗ್ಗಿಸಲು ಪ್ರತಿ ಶನಿವಾರ ಮತ್ತು ಮಂಗಳವಾರ ಹನುಮಂತನ ಆರಾಧನೆ ಮಾಡಿ. ಅಗತ್ಯವಿರುವವರಿಗೆ ಕೆಂಪು ಬಣ್ಣದ ಹೊಸ ಬಟ್ಟೆಯನ್ನು ದಾನ ಮಾಡಿ. ಇದಂ ನ ಮಮ ಎಂಬ ಭಾವ ಇರಲಿ.
– ಲೋಹಿತ ಹೆಬ್ಬಾರ್
