ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ: ರನ್‌ವೇಗೆ ನುಗ್ಗಿದ ಬೀದಿ ನಾಯಿಗಳು, ತಪ್ಪಿದ ಭಾರೀ ಅನಾಹುತ – Kannada News | Stray Dogs Breach Security at Kempegowda International Airport Runway, Major Mishap Averted

ದೇವನಹಳ್ಳಿ, ಫೆಬ್ರವರಿ 3: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಭದ್ರತಾ ಲೋಪವೊಂದು ಬೆಳಕಿಗೆ ಬಂದಿದೆ. ರನ್‌ವೇ ಪ್ರದೇಶಕ್ಕೆ ಎರಡು ಬೀದಿ ನಾಯಿಗಳು ನುಗ್ಗಿದ್ದು, ಕೆಲಕಾಲ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಮಾನಗಳ ಹಾರಾಟದ ಸಮಯದಲ್ಲೇ ಎರಡು ಬೀದಿ ನಾಯಿಗಳು ರನ್‌ವೇಗೆ ಪ್ರವೇಶಿಸಿದ್ದು, ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಹರಸಾಹಸಪಟ್ಟು ಬೀದಿನಾಯಿಗಳನ್ನು ಸೆರೆಹಿಡಿದರು. ಅದೃಷ್ಟವಶಾತ್ ಆ ಸಮಯದಲ್ಲಿ ರನ್‌ವೇ ಮೇಲೆ ಯಾವುದೇ ವಿಮಾನಗಳು ಇರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ.

ಟರ್ಮಿನಲ್–2ಕ್ಕೆ ಸಂಬಂಧಿಸಿದ ಹೊಸ ರನ್‌ವೇ ಪ್ರದೇಶಕ್ಕೆ ನುಗ್ಗಿದ ಬೀದಿ ನಾಯಿಗಳು, ಅಲ್ಲಿದ್ದ ವಿಮಾನಗಳ ಸಮೀಪದಲ್ಲೇ ಓಡಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದರಿಂದ ಕೆಲ ಸಮಯ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *