ನಟ ರಮೇಶ್ ಅರವಿಂದ್ (Ramesh Aravind) ಅವರು ‘ಕೆಡಿ’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದರ ಝಲಕ್ ಈಗಾಗಲೇ ಟ್ರೇಲರ್ನಲ್ಲಿ ಕಾಣಿಸಿದೆ. ಏಪ್ರಿಲ್ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಕಾಳಿದಾಸ ಎಂಬ ಪಾತ್ರ ಮಾಡಿದ್ದಾರೆ. ಅದರ ಸಂಕ್ಷಿಪ್ತ ರೂಪವೇ ಕೆಡಿ. ಆದರೆ ಈ ಸಿನಿಮಾದಲ್ಲಿ ಕೇವಲ ಅವರು ಮಾತ್ರ ಕೆಡಿ ಅಲ್ಲ. ಇನ್ನೂ ಅನೇಕರು ಕೆಡಿಗಳು ಇದ್ದಾರೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ. ‘ಕೆಡಿ’ ಸಿನಿಮಾದ ಟ್ರೇಲರ್ (KD Movie Trailer) ಬಿಡುಗಡೆಯ ವೇದಿಕೆಯಲ್ಲಿ ಅವರು ಆ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
