ನೆಲಮಂಗಲ, ಫೆಬ್ರವರಿ 12: ಕೆನಡಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಬದುಕು ಕಟ್ಟಿಕೊಂಡಿದ್ದ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್, ಎರಡು ದಿನಗಳ ಹಿಂದೆ ದುಷ್ಕರ್ಮಿಗಳ ಶೂಟೌಟ್‌ಗೆ ಬಲಿ ಆಗಿದ್ದಾರೆ. ಚಂದನ್ ತಂದೆ ತಮ್ಮ ಮಗನ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಕೆನಡಾಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಕೆನಡಾದ ಲೋಟಸ್‌ನಲ್ಲಿ ನಡೆದ ಅಂತಿಮ ದರ್ಶನವನ್ನು ಮೊಬೈಲ್ ವಿಡಿಯೋ ಮೂಲಕ ನೋಡಿ ತಂದೆ ಕಣ್ಣೀರಿಟ್ಟಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ಕುಟುಂಬಕ್ಕೆ ಅತೀವ ನೋವು ತಂದಿದೆ. ಏರ್ ಲಿಫ್ಟ್ ಮೂಲಕ ಇನ್ನೆರಡು ದಿನದಲ್ಲಿ ಪಾರ್ಥೀವ ಶರೀರ ಬೆಂಗಳೂರಿಗೆ ಬರಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
