
ಕಲಬುರಗಿ, (ಏಪ್ರಿಲ್ 03): ದುಷ್ಕರ್ಮಿಗಳು ಫೈನಾನ್ಸ್ ಕಚೇರಿಗೆ ನುಗ್ಗಿ ಕರ್ನಾಟಕದ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅಳಿಯನನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಲಬುರಗಿಯ ಸಿದ್ದೇಶ್ವರ ಬಡಾವಣೆಯ ನಿವಾಸಿ ಅನೀಲ್ ರಾಠೋಡ್ (45)ಕೊಲೆಯಾದ ವ್ಯಕ್ತಿ. ಅನೀಲ್ ರಾಠೋಡ್ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರ ಅಳಿಯನಾಗಿದ್ದು, ಕಲಬುರಗಿಯ ಪಿ ಆ್ಯಂಡ್ ಟಿ ಕಾಲೋನಿಯ ವೆಂಕಟೇಶ್ವರ್ ಕಾಂಪ್ಲೆಕ್ಸ್ನಲ್ಲಿ ಫೈನಾನ್ಸ್ ನಡೆಸುತ್ತಿದ್ದರು. ಆದ್ರೆ, ದುಷ್ಕರ್ಮಿಗಳು ಫೈನ್ಸಾನ್ಸ್ ಕಚೇರಿಗೆ ನುಗ್ಗಿ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನು ಈ ಬಗ್ಗೆ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಮಾತನಾಡಿದ್ದು, ಕೆಲ ವರ್ಷಗಳ ಹಿಂದೆ ನಮ್ಮ ಸಂಬಂಧಿಯನ್ನ ಕಟ್ಟಡ ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿತ್ತು. ಇದೀಗ ದುಷ್ಕರ್ಮಿಗಳು ಫೈನಾನ್ಸ್‌ಗೆ ನುಗ್ಗಿ ನಮ್ಮ ಅಳಿಯನನ್ನೇ ಹತ್ಯೆ ಮಾಡಿದ್ದು, ಕೂಡಲೇ ಪೊಲೀಸರು ಹಂತಕರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.