ಕೆವಿಎನ್ vs ಕೆವಿಎನ್; ಒಂದೇ ತಿಂಗಳಲ್ಲಿ ಎರಡು ಬಿಗ್ ಬಜೆಟ್ ಸಿನಿಮಾ ರಿಲೀಸ್? – Kannada News | Toxic Postponed: KVN Productions’ June Dilemma with Yash and Jana Nayagan Release

ಮಾರ್ಚ್ 4ರ ಬೆಳಿಗ್ಗೆ ಕೆವಿಎನ್ ಸಂಸ್ಥೆ ಯಶ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ನೀಡಿತು. ‘ಟಾಕ್ಸಿಕ್’ (Toxic) ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರೋದು ಪಕ್ಕಾ ಎಂಬ ರೀತಿ ಬಿಂಬಿಸಲಾಗಿತ್ತು. ಆದರೆ, ಏಕಾಏಕಿ ಸಿನಿಮಾ ರಿಲೀಸ್ ದಿನಾಂಕವನ್ನು ತಂಡ ಮುಂದಕ್ಕೆ ಹಾಕಿದೆ. ಜೂನ್ 4ರಂದು ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದು ನಿರ್ಮಾಣ ಸಂಸ್ಥೆ ಹೇಳಿದೆ. ಹಾಗಾದರೆ ಬಾಕ್ಸ್ ಆಫೀಸ್​​ನಲ್ಲಿ ಕೆವಿಎನ್ vs ಕೆವಿಎನ್ ಎಂಬ ಪರಿಸ್ಥಿತಿ ನಿರ್ಮಾಣ ಆಗಲಿದೆಯೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ. ಇದಕ್ಕೆ ಕಾರಣವೂ ಇದೆ.

ಕೆವಿಎನ್ ಸಂಸ್ಥೆ ಒಮ್ಮೆಲೇ ಮೂರು ದೊಡ್ಡ ಬಜೆಟ್ ಚಿತ್ರಗಳನ್ನು ಕೈಗೆತ್ತಿಕೊಂಡಿತು. ‘ಜನ ನಾಯಗನ್’ ಜನವರಿ 9ಕ್ಕೆ, ‘ಟಾಕ್ಸಿಕ್’ ಮಾರ್ಚ್ 19ಕ್ಕೆ ಹಾಗೂ ‘ಕೆಡಿ’ ಚಿತ್ರವನ್ನು ಏಪ್ರಿಲ್ 30ಕ್ಕೆ ರಿಲೀಸ್ ಮಾಡುವ ಪ್ಲ್ಯಾನ್ ತಂಡಕ್ಕೆ ಇತ್ತು. ಎಲ್ಲಾ ರಿಲೀಸ್ ಮಧ್ಯೆ 50+ ದಿನಗಳ ಅಂತರ ಇತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ‘ಜನ ನಾಯಗನ್’ ಹಾಗೂ ‘ಟಾಕ್ಸಿಕ್’ ರಿಲೀಸ್ ಮುಂದಕ್ಕೆ ಹೊಗಿದೆ. ‘ಜನ ನಾಯಗನ್’ ಸೆನ್ಸಾರ್ ಪ್ರಕ್ರಿಯೆ ಆಗಿಲ್ಲ. ಈ ಕಾರಣದಿಂದ ಈ ಸಿನಿಮಾ ರಿಲೀಸ್ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ‘ಟಾಕ್ಸಿಕ್’ ಜೂನ್ 4ಕ್ಕೆ ಬರೋದಾಗಿ ಘೋಷಣೆ ಆಗಿದೆ.

ಈ ಮೊದಲು ಹರಿದಾಡಿದ ಮಾಹಿತಿ ಪ್ರಕಾರ, ‘ಜನ ನಾಯಗನ್’ ಸಿನಿಮಾ ಜೂನ್ ಅಲ್ಲಿ ತೆರೆಗೆ ಬರಲಿದೆ ಎನ್ನಲಾಗಿತ್ತು. ಜೂನ್ 22 ವಿಜಯ್ ಜನ್ಮದಿನ. ಈ ವಿಶೇಷ ದಿನದ ಸಮಯದಲ್ಲಿ ‘ಜನ ನಾಯಗನ್’ ತರುವ ಆಲೋಚನೆ ತಂಡಕ್ಕೆ ಇದೆ. ಈಗ ‘ಟಾಕ್ಸಿಕ್’ ಕೂಡ ಜೂನ್ ಅಲ್ಲೇ ಬರುತ್ತಿದೆ. ಹೀಗಾಗಿ, ಒಂದೇ ನಿರ್ಮಾಣ ಸಂಸ್ಥೆಯ ಎರಡು ಚಿತ್ರಗಳು ಒಂದೇ ತಿಂಗಳಲ್ಲಿ ಬಿಡುಗಡೆ ಆಗಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳದ್ದು. ಹಾಗಾದಲ್ಲಿ, ಕೆವಿಎನ್ vs ಕೆವಿಎನ್ ಎಂಬತಹ ಸ್ಥಿತಿ ನಿರ್ಮಾಣ ಆಗುತ್ತದೆ.

ಇದನ್ನೂ ಓದಿ: ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಯಶ್; ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ

ಯಾವುದೇ ಪಳಗಿದ ನಿರ್ಮಾಪಕರು ತಮ್ಮದೇ ನಿರ್ಮಾಣ ಸಂಸ್ಥೆಯ ಎರಡು ಸಿನಿಮಾಗಳನ್ನು ಒಂದೇ ತಿಂಗಳಲ್ಲಿ ರಿಲೀಸ್ ಮಾಡುವ ಸಾಹಸಕ್ಕೆ ಹೊಗೋದಿಲ್ಲ. ಅದರಲ್ಲೂ ಬಿಗ್ ಬಜೆಟ್ ಸಿನಿಮಾ ಎಂದಾಗ ಆ ರೀತಿಯ ಸಾಹಸವನ್ನು ಮಾಡೋದಿಲ್ಲ. ಹೀಗಾಗಿ, ಕೆವಿಎನ್ ಕೂಡ ಈ ಬಗ್ಗೆ ಬೇರೆಯದೇ ರೀತಿಯ ಸ್ಟ್ರೆಟಜಿ ಮಾಡಬಹುದು ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *