ಕೇಂದ್ರದ ಈ ಪ್ರಮುಖ ಹಣಕಾಸು ಯೋಜನೆಗಳಲ್ಲಿ ಮಹಿಳೆಯರೇ ಹೆಚ್ಚು ಫಲಾನುಭವಿಗಳು

ಕೇಂದ್ರದ ಈ ಪ್ರಮುಖ ಹಣಕಾಸು ಯೋಜನೆಗಳಲ್ಲಿ ಮಹಿಳೆಯರೇ ಹೆಚ್ಚು ಫಲಾನುಭವಿಗಳು

ಇವತ್ತು ಮಾರ್ಚ್ 18, ಅಂತರರಾಷ್ಟ್ರೀಯ ಮಹಿಳೆಯರ ದಿನ (International Women’s Day). ಕೇಂದ್ರ ಸರ್ಕಾರ ಮಹಿಳೆಯರ ಅಭ್ಯುದಯ ದೃಷ್ಟಿಯಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಹಾಕಿದೆ. ಮಹಿಳೆಯರಿಗೆಂದೇ ಸೀಮಿತವಾದ ಸುಕನ್ಯಾ ಸಮೃದ್ದಿ ಯೋಜನೆಯಂತಹ ಸ್ಕೀಮ್​ಗಳಿವೆ. ಹಾಗೆಯೇ, ಸರ್ವರಿಗೂ ಅನ್ವಯವಾಗುವಂತೆ ಸರ್ಕಾರ ರೂಪಿಸಿದ ಕೆಲ ಉತ್ತಮ ಹಣಕಾಸು ಯೋಜನೆಗಳೂ ಕೂಡ ಮಹಿಳೆಯರಿಗೆ ವರದಾನವಾಗಿವೆ. ಅಸಂಘಟಿತ ವಲಯದಲ್ಲಿರುವ ಮಹಿಳೆಯರಿಗೆ ಬಹಳ ಉಪಯುಕ್ತವಾಗಿರುವ ಮೂರು ಪ್ರಮುಖ ಹಣಕಾಸು ಯೋಜನೆಗಳ ವಿವರ ಇಲ್ಲಿದೆ.

ಪ್ರಧಾನಮಂತ್ರಿ ಮುದ್ರಾ ಯೋಜನೆ

ಹತ್ತು ವರ್ಷದ ಹಿಂದೆ ಆರಂಭವಾದ ಪಿಎಂ ಮುದ್ರಾ ಯೋಜನೆಯಲ್ಲಿ (PM Mudra Scheme) ಸಣ್ಣ ಉದ್ದಿಮೆಗಳಿಗೆ ಅಡಮಾನ ರಹಿತವಾದ ಸಾಲ ಕೊಡಲಾಗುತ್ತದೆ. 20 ಲಕ್ಷ ರೂವರೆಗೂ ಸಾಲ ಸಿಗುತ್ತದೆ. ಈ ರೀತಿ ಮುದ್ರಾ ಸಾಲ ಖಾತೆಗಳನ್ನು ಹೊಂದಿರುವ ಉದ್ದಿಮೆದಾರರಲ್ಲಿ ಮಹಿಳೆಯರೇ ಹೆಚ್ಚು. ಲಕ್ಷಾಂತರ ಮಹಿಳೆಯರು ಈ ಯೋಜನೆಯ ಲಾಭ ಪಡೆದು ಸ್ವಂತ ಉದ್ಯೋಗ ಮತ್ತು ಉದ್ದಿಮೆ ಆರಂಭಿಸಿರುವುದುಂಟು.

ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ

ಪಿಎಂ ಜನ್ ಧನ್ ಯೋಜನೆ

2014ರಲ್ಲಿ ಶುರುವಾದ ಪಿಎಂ ಜನ್ ಧನ್ ಯೋಜನೆಯು (PM Jan Dhan Yojana)ಪ್ರತಿಯೊಬ್ಬ ವ್ಯಕ್ತಿಯನ್ನೂ ಬ್ಯಾಂಕಿಂಗ್ ವ್ಯವಸ್ಥೆಯ ಒಳಗೆ ತರುವ ಬೃಹದ್ ಉದ್ದೇಶ ಹೊಂದಿದೆ. ಸರ್ಕಾರದ ಸ್ಕೀಮ್​ಗಳ ಲಾಭವು ಬ್ಯಾಂಕ್ ಖಾತೆ ಮೂಲಕ ನೇರವಾಗಿ ಫಲಾನುಭವಿಗೆ ದೊರಕಲು ಇದರಿಂದ ಸಹಾಯವಾಗುತ್ತದೆ. ಹಾಗೆಯೇ, ಹಣದ ಉಳಿತಾಯ ಇತ್ಯಾದಿಗೂ ಬ್ಯಾಂಕ್ ಖಾತೆ ನೆರವಾಗುತ್ತದೆ. ಹೀಗಾಗಿ, ಸರ್ಕಾರ ಜನ್ ಧನ್ ಖಾತೆಗಳನ್ನು ಆರಂಭಿಸಿತು. ಇದರಲ್ಲಿ 32 ಕೋಟಿಗೂ ಅಧಿಕ ಮಹಿಳೆಯರು ಜನ್ ಧನ್ ಅಕೌಂಟ್ ಹೊಂದಿದ್ದಾರೆ.

ಜನ್ ಧನ್ ಯೋಜನೆ ವಿಶೇಷತೆಗಳಿವು…

  • ಪಿಎಂ ಜನ್ ಧನ್ ಸ್ಕೀಮ್ ಅಡಿ ತೆರೆಯಲಾಗುವ ಬ್ಯಾಂಕ್ ಖಾತೆಗಳು ಝೀರೋ ಬ್ಯಾಲನ್ಸ್ ಸೌಲಭ್ಯ ಹೊಂದಿರುತ್ತವೆ.
  • ರುಪೇ ಡೆಬಿಟ್ ಕಾರ್ಡ್
  • 2 ಲಕ್ಷ ರೂ ಅಪಘಾತ ವಿಮೆ
  • 10,000 ರೂಗಳ ಓವರ್​ಡ್ರಾಫ್ಟ್ ಸೌಲಭ್ಯ
  • ಡಿಬಿಟಿ, ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ, ಪಿಎಂ ಸುರಕ್ಷಾ ಬಿಮಾ ಯೋಜನೆ, ಅಟಲ್ ಪೆನ್ಷನ್ ಯೋಜನೆ ಇತ್ಯಾದಿ ಸ್ಕೀಮ್​ಗಳಿಗೆ ಜೋಡಿತವಾಗಿರುತ್ತದೆ.

ಇದನ್ನೂ ಓದಿ: ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

ಪಿಎಂ ಸ್ವನಿಧಿ ಯೋಜನೆ

ಪಿಎಂ ಸ್ವನಿಧಿ (PM SVANidhi scheme) ಎಂದರೆ ಬೀದಿಬದಿ ಅಂಗಡಿಗಳ ಆತ್ಮನಿರ್ಭರ್ ನಿಧಿ. 2020ರಲ್ಲಿ ಆರಂಭವಾದ ಈ ಸ್ಕೀಮ್​ನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಡಮಾನರಹಿತವಾದ ಸಾಲ ನೀಡಲಾಗುತ್ತದೆ. 50,000 ರೂವರೆಗೂ ಸಾಲ ಪಡೆಯಲು ಅವಕಾಶ ಇರುತ್ತದೆ. ಬಡ್ಡಿಯಲ್ಲೂ ರಿಯಾಯಿತಿ ಇರುತ್ತದೆ. ಈ ಯೋಜನೆಯ ಹೆಚ್ಚಿನ ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *