ಕೇವಲ ಕಮಾಂಡ್‌ಗಳಷ್ಟೇ ಸಾಲದು, ಶ್ವಾನದ ಮನಸ್ಸು ಅರ್ಥಮಾಡಿಕೊಳ್ಳಿ’: ಬೆಂಗಳೂರಿನಲ್ಲಿ ಹೆಚ್ಚಿದ ಶ್ವಾನ ತರಬೇತಿ ಕ್ರೇಜ್ – Kannada News | Dog Training in Bangalore: Canine Behavioral Experts Guide Apartment Owners

ಬೆಂಗಳೂರು, ಜು.31: ಮುಂಬೈನ ಅಪಾರ್ಟ್‌ಮೆಂಟ್‌ ಒಂದರ ಲಿಫ್ಟ್‌ನಲ್ಲಿ ಸಾಕುನಾಯಿಯೊಂದು ಮಹಿಳೆಯ ಮೇಲೆ ದಾಳಿ ನಡೆಸಿದ ವೀಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಜವಾಬ್ದಾರಿಯುತ ಪೆಟ್ ಪೇರೆಂಟಿಂಗ್ (Responsible Pet Ownership) ಕುರಿತು ದೇಶಾದ್ಯಂತ ಭಾರಿ ಚರ್ಚೆ ಆರಂಭವಾಗಿದೆ. ಇದರ ಬೆನ್ನಲ್ಲೇ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಯಿ ಮಾಲೀಕರು ಕೇವಲ ನಾಯಿಗಳಿಗೆ ಸಿಟ್, ಸ್ಟ್ಯಾಂಡ್ ಶಿಕ್ಷಣ ನೀಡುವುದನ್ನು ಬಿಟ್ಟು, ಅವುಗಳ ನಡವಳಿಕೆ ಹಾಗೂ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ‘ಕ್ಯಾನೈನ್ ಬಿಹೇವಿಯರಲ್ ಎಕ್ಸ್‌ಪರ್ಟ್’ (Canine Behaviour Experts) ಅಥವಾ ಶ್ವಾನ ವರ್ತನಾ ತಜ್ಞರ ಮೊರೆ ಹೋಗುತ್ತಿದ್ದಾರೆ.

ಅಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್ ಸಂಸ್ಕೃತಿ ಹೆಚ್ಚುತ್ತಿರುವಂತೆ, ನಾಯಿಗಳ ನಡವಳಿಕೆಗೆ ಸಂಬಂಧಿಸಿದ ತರಬೇತಿ ಮತ್ತು ಕೌನ್ಸೆಲಿಂಗ್‌ಗೆ ಬೆಂಗಳೂರಿನಲ್ಲಿ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದೆ. ‘ಡಾಗ್ಸ್ ಕ್ಯಾನ್ ಡೂ ಇಟ್’ ಸಂಸ್ಥಾಪಕ ವೈಭವ್ ಮುಂಗೋಲೆ ಅವರ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಇಂತಹ ವಿಚಾರಣೆಗಳು ಶೇಕಡಾ 15-20 ರಷ್ಟು ಹೆಚ್ಚಿದ್ದರೆ, ಕಳೆದ 5 ವರ್ಷಗಳಲ್ಲಿ ಎರಡರಷ್ಟಾಗಿದೆ. ‘K9 ಗುರುಕುಲ’ ಸಂಸ್ಥೆಯ ವರುಣ್ ವಿಕ್ರಮನ್ ಪ್ರಕಾರ, ಕೊರೊನಾ ಸಾಂಕ್ರಾಮಿಕದ ಬಳಿಕ ಶೇ. 40-50 ರಷ್ಟು ವಿಚಾರಣೆಗಳು ಹೆಚ್ಚಾಗಿವೆ. ಕ್ಯಾನೈನ್ ತಜ್ಞ ಸಿ.ವಿ. ಫ್ರಾಂಕ್ಲಿನ್ ಪ್ರಕಾರ, ಅವರ ಬಳಿಗೆ ಬರುವ ಶೇ. 50 ರಷ್ಟು ಗ್ರಾಹಕರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಾಗಿದ್ದಾರೆ.

ನಗರ ಜೀವನ ಶೈಲಿ ಮತ್ತು ಅಪಾರ್ಟ್‌ಮೆಂಟ್‌ಗಳ ಕಿರಿದಾದ ಜಾಗದಲ್ಲಿ ನಾಯಿಗಳಿಗೆ ದೈಹಿಕ ವ್ಯಾಯಾಮ ಹಾಗೂ ಮಾನಸಿಕ ಶ್ರಮ ಕಡಿಮೆಯಾಗುತ್ತಿದೆ. ಇಡೀ ಮನೆಯನ್ನು ತಮ್ಮದೇ ಸಾಮ್ರಾಜ್ಯ ಎಂದು ಭಾವಿಸದಂತೆ ನಾಯಿಗಳಿಗೆ ಮನೆಯಲ್ಲೇ ನಿರ್ದಿಷ್ಟ ಗಡಿ ಹಾಗೂ ಜಾಗವನ್ನು ನಿಗದಿಪಡಿಸುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ.

ಅನೇಕ ಮಾಲೀಕರು ನಾಯಿಗೆ ‘sit’ ಅಥವಾ ‘stay’ ಎನ್ನಲು ಕಳಿಸಿಕೊಡುವುದನ್ನೇ ಉತ್ತಮ ನಡವಳಿಕೆ ಎಂದು ಭಾವಿಸುತ್ತಾರೆ. ಆದರೆ ನಿಜವಾದ ನಡವಳಿಕೆ ತರಬೇತಿಯು ಮಾಲೀಕರಿಗೂ ಶಿಕ್ಷಣ ನೀಡುವುದಾಗಿದೆ. ಮಾಲೀಕರು ಮನೆಯಲ್ಲಿ ಶಿಸ್ತು ಕಾಯ್ದುಕೊಂಡಾಗ ಮಾತ್ರ ನಾಯಿಯ ನಡವಳಿಕೆಯಲ್ಲಿ ಶಾಶ್ವತ ಬದಲಾವಣೆ ಸಾಧ್ಯ.ಹೊಸದಾಗಿ ನಾಯಿ ಸಾ ಸಾಕಲು ಬಯಸುವವರು ಈಗ ನಾಯಿಮರಿ ತರುವ ಮುಂಚೆಯೇ ತಜ್ಞರಿಂದ ಸಲಹೆ ಪಡೆಯುತ್ತಿದ್ದಾರೆ. ಇದು ತಪ್ಪು ನಡವಳಿಕೆಯನ್ನು ತಿದ್ದುವುದಕ್ಕಿಂತ, ತಪ್ಪು ನಡವಳಿಕೆ ಬರದಂತೆ ತಡೆಯಲು ಸಹಕಾರಿಯಾಗಿದೆ.

ಇದನ್ನೂ ಓದಿ: ಅಕ್ವೇರಿಯಂ ಫಿಶ್​ ಸಾಕಲು ಬಿಟ್ಟಿಲ್ಲ ಎಂದು ನೊಂದು ಮನೆ ಬಿಟ್ಟ ಏಳನೇ ತರಗತಿಯ ಬಾಲಕ!

ಹಸ್ಕಿ ಅಥವಾ ಜರ್ಮನ್ ಶೆಫರ್ಡ್‌ನಂತಹ ಹೈ-ಎನರ್ಜಿ ಕೆಲಸದ ತಳಿಯ ನಾಯಿಗಳನ್ನು ಹೊಸಬರು ಸಾಕುವುದು ಸವಾಲಿನ ಕೆಲಸ. ಆದರೆ ಯಾವುದೇ ತಳಿಯನ್ನು ನೇರವಾಗಿ ಆಕ್ರಮಣಕಾರಿ ಎಂದು ನಿಂದಿಸುವುದು ತಪ್ಪು. ರೊಟ್‌ವೀಲರ್ ಹಾಗೂ ಪಿಟ್‌ಬುಲ್‌ಗಳನ್ನು ಕೂಡ ಅತ್ಯುತ್ತಮ ಥೆರಪಿ ನಾಯಿಗಳಾಗಿ ತರಬೇತಿ ನೀಡಬಹುದು, ಅದೇ ಸಮಯದಲ್ಲಿ ಲ್ಯಾಬ್ರಡಾರ್‌ನಂತಹ ಶಾಂತ ನಾಯಿಗಳೂ ಆಕ್ರಮಣಕಾರಿಯಾಗಬಹುದು ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *