ಟೀಮ್ ಇಂಡಿಯಾ ಪವರ್ಪ್ಲೇನಲ್ಲೇ ಪವರ್ಫುಲ್ ದಾಖಲೆ ಬರೆದಿದೆ. ಅದು ಸಹ ಕೇವಲ 19 ಎಸೆತಗಳಲ್ಲಿ. ಈ 19 ಎಸೆತಗಳಲ್ಲಿ ಭಾರತೀಯ ಬ್ಯಾಟರ್ಗಳು ಅರ್ಧಶತಕ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಗುವಾಹಟಿಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು.
