ಬೆಂಗಳೂರು, ಆಗಸ್ಟ್ 03: ಸಚಿವ ಸಂಪುಟ ವಿಸ್ತರಣೆ ಬೆನ್ನಲೇ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಸಚಿವಸ್ಥಾನ ಸಿಗದಿದ್ದಕ್ಕೆ ಅಸಮಾಧಾನಿತ ಶಾಸಕರು ಟಿ.ಬಿ.ಜಯಚಂದ್ರ ಮನೆಯಲ್ಲಿ ಸಭೆ ನಡೆಸಿದ್ದಾರೆ. ಅಪ್ಪಾಜಿ ನಾಡಗೌಡ ಮತ್ತು ಎಂ.ವೈ.ಗೋಪಾಲಕೃಷ್ಣ ಮೀಟಿಂಗ್ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ನಾಡಗೌಡರು ಕಣ್ಣೀರು ಹಾಕಿರುವ ಪ್ರಸಂಗ ನಡೆದಿದೆ. ತಾನು ಸಚಿವನಾಗಬೇಕೆಂದು ಬಹಳಷ್ಟು ಜನ ಬಯಸಿದ್ದರು. ಆದರೆ ಇವತ್ತು ಹೀಗಾಗಿದೆ ಎಂದವರು ಭಾವುಕರಾಗಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
