ಕೊಡಗು, ಜೂನ್ 19: ಆತ 9 ವರ್ಷದ ಬಾಲಕ. ತಾಯಿಯೇ (Mother) ಸರ್ವಸ್ವ ಅಂದುಕೊಂಡಿದ್ದ. ತಾಯಿ ಜೊತೆಯೇ ವಾಸವಾಗಿದ್ದ. ಆದರೆ ಆ ಮಹಾತಾಯಿ ಮಾಡಿರುವ ಅನಾಚಾರ ಮಾತ್ರ ನಿಜಕ್ಕೂ ಭಯಾನಕ. ಅನ್ಯಧರ್ಮದ ಯುವಕರೊಂದಿಗೆ ಸೇರಿ ಮಗನ (Son) ಮರ್ಮಾಂಗವನ್ನು ಕತ್ತರಿಸಿ ಬಲವಂತದ ಮತಾಂತರ ಮಾಡಿಸಿದ್ದಾಳೆ. ಇಂತಹದೊಂದು ಅಮಾನುಷ ಕೃತ್ಯಕ್ಕೆ ಇಡಿ ಕೊಡಗು ಜಿಲ್ಲೆ ಬೆಚ್ಚಿಬಿದ್ದಿದೆ.
ಮುಖ್ಯಾಂಶಗಳು
- ಸುನ್ನತ್ ಹೆಸರಲ್ಲಿ ಬಾಲಕನ ಮರ್ಮಾಂಗಕ್ಕೆ ಕತ್ತರಿ
- ಮಗನನ್ನ ಬಲವಂತದ ಮತಾಂತರಕ್ಕೆ ಸಾಥ್ ನೀಡಿದ ತಾಯಿ
- ಅನ್ಯಧರ್ಮದ ಯುವಕರ ಬಂಧನ
ನಡೆದಿದ್ದೇನು?
ಏನೂ ಅರಿಯದ 9 ವರ್ಷದ ಮುಗ್ಧ ಮಗನನ್ನು ತಾಯಿಯೇ ದುಷ್ಕರ್ಮಿಗಳ ಜೊತೆ ಸೇರಿ ಮರ್ಮಾಂಗ ಕತ್ತರಿಸಿ ಸುನ್ನತ್ ಹೆಸರಿನಲ್ಲಿ ಮತಾಂತರ ಮಾಡಿದ ಆರೋಪ ಕೇಳಿಬಂದಿದೆ. ಕುಶಾಲನಗರ ಪಟ್ಟಣದಲ್ಲಿ ವಾಸವಿರುವ ರಾಜೀವ್ ಮತ್ತು ಸಾಜಿದಾ ದಂಪತಿಗೆ 9 ವರ್ಷದ ಮಗನಿದ್ದಾನೆ. ಸಾಜಿದ ಕಳೆದ ಕೆಲ ವರ್ಷಗಳಿಂದ ಇಲ್ಲಿನ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಳಿಗೆಯೊಂದಕ್ಕೆ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್ಗೆ ಬಲಿಯಾದ ಹಿಂದೂ ಯುವತಿ ರೀಟಾ
ಮಳಿಗೆ ಮಾಲೀಕರಾದ ಸಲೀಂ ಮತ್ತು ಜಲೀಲ್ ಪರಿಚಯವಾಗಿದೆ. ಅವರು ಸಾಜಿದಾ ಮೇಲೆ ಅದೇನು ಪ್ರಭಾವ ಬಿರಿದ್ದಾರೆ ಗೊತ್ತಿಲ್ಲ. ಕಳೆದ ಒಂದು ತಿಂಗಳ ಹಿಂದೆ ಸಾಜಿದಾ ಮತ್ತು ಆಕೆಯ 9 ವರ್ಷದ ಮಗನನ್ನು ರಹಸ್ಯವಾಗಿ ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೆರಿ ಗ್ರಾಮದ ಮಸೀದಿಗೆ ಕರೆದುಕೊಂಡು ಹೋಗಿ ಒಂದು ತಿಂಗಳು ಅಲ್ಲೇ ಉಳಿದುಕೊಂಡಿದ್ದಾರೆ. ಈ ವೇಳೆ ಬಾಲಕನಿಗೆ ಬಲವಂತದಿಂದ ಮರ್ಮಾಂಗ ಕತ್ತರಿಸಿ ಸುನ್ನತ್ ಮಾಡಿಸಿ ಮತಾಂತರ ಮಾಡಿದ್ದಾರೆ. ಅಲ್ಲದೆ ಸಾಜಿದಾಳನ್ನ ಕೂಡ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕುಶಾಲನಗರದಲ್ಲಿ ಗುಸುಗುಸು ಶುರುವಾದಾಗ ಪತಿ ರಾಜೀವ್ ಕೆಲವು ಹಿಂದೂ ಪರ ಸಂಘಟನೆಗಳ ನೆರವು ಪಡೆದು ಕುಶಾಲನಗರಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಷ್ಟಪಟ್ಟು ಮತಾಂತರವಾಗಿರುವುದಾಗಿ ಸಾಜಿದಾ ಹೇಳಿಕೆ
ಮುಗ್ಧ ಬಾಲಕನನ್ನ ಕಾನೂನಿಗೆ ವಿರುದ್ಧವಾಗಿ ಮತಾಂತರ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಕುಶಾಲನಗರದ ಕೆಲವರು ತಂದೆ ರಾಜೀವ್ ಬೆಂಬಲಕ್ಕೆ ನಿಂತು ಕಾನೂನು ನೆರವು ನೀಡಿದ್ದಾರೆ. ಬಾಲಕನನ್ನ ಕೇರಳದ ಮಸೀದಿಯಿಂದ ರಕ್ಷಿಸಿ ಕರೆತಂದು ಸದ್ಯ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ. ಕುರಾನ್ನಿಂದ ಪ್ರೇರೇಪಿತಳಾಗಿ, ಇಷ್ಟಪಟ್ಟು ಮತಾಂತರವಾಗಿರುವುದಾಗಿ ಸಾಜಿದಾ ಹೇಳಿದ್ದಾರೆ ಎನ್ನಲಾಗುತ್ತಿದೆ.
ಸಲೀಂ ಮತ್ತು ಜಲೀಲ್ ಬಂಧನ
ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ನಲ್ಲಿ ಇಂತಹ ಬಹಳಷ್ಟು ಪ್ರಕರಣಗಳು ರಹಸ್ಯವಾಗಿ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಸದ್ಯ ಆರೋಪಿಗಳಾದ ಸಲೀಂ ಮತ್ತು ಜಲೀಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನಿಗೆ ಆಗಿರುವ ದೈಹಿಕ ಮತ್ತು ಮಾನಸಿಕ ಆಘಾತ ಊಹಿಸಲಾಗದು, ಹಾಗಾಗಿ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್ಗಳನ್ನ ಹಾಕಿ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಬಾಲಕನ ನೆರವಿಗೆ ನಿಂತ ಅಮೃತ್ ರಾಜ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಯುವತಿ ಅಪಹರಣ ಕೇಸ್ಗೆ ಟ್ವಿಸ್ಟ್: ಮುಸ್ಲಿಂ ಯುವಕನ ವಿರುದ್ಧ ಕೇಸ್ ಬುಕ್, ಆಗಿದ್ದೇನು?
ಸದ್ಯ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಕೃತ್ಯಗಳು ಕೇವಲ ಮತಾಂತರಕ್ಕೆ ಮಾತ್ರ ಸೀಮಿತವೋ ಅಥವಾ ಮತಾಂತರದ ಬಳಿಕ ಕೇರಳದಲ್ಲಿ ಅಮಾಯಕ ಬಾಲಕರನ್ನ ಬೇರೆ ಕೃತ್ಯಗಳಿಗೆ ಬಳಸಿಕೊಳ್ಳುವ ಉದ್ದೇಶವಿತ್ತಾ, ಇಂತಹ ಇನ್ನೆಷ್ಟು ಪ್ರಕರಣಗಳು ನಡೆದಿವೆ ಎಂಬುದರ ಬಗ್ಗೆ ತನಿಖೆಯಲ್ಲಿ ಬಯಲಾಗಬೇಕಿದೆ. ಅಲ್ಲದೆ, ರಾಜ್ಯದ ಬೇರೆ ಬೇರೆ ಕಡೆ ಏಕಾಏಕಿ ನಾಪತ್ತೆಯಾಗುವ ಹಿಂದೂ ಹೆಣ್ಣು ಮಕ್ಕಳು ಮತ್ತು ವ್ಯಕ್ತಿಗಳು ಕೇರಳದ ಮಂಜೆರಿ ಗ್ರಾಮದ ಮಸೀದಿಯಲ್ಲಿ ಪತ್ತೆಯಾಗುತ್ತಿದ್ದಾರೆ ಎಂಬ ಆರೋಪವು ಇದೆ. ಈ ನಿಟ್ಟಿನಲ್ಲೂ ಆಳ ತನಿಖೆಯ ಅಗ್ಯವಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
