ಕೊನೆಗೂ ಆರಂಭ ಆಯ್ತು ‘ಕಲ್ಕಿ’ ಸೀಕ್ವೆಲ್; ಫೋಟೋ ಹಂಚಿಕೊಂಡ ಅಮಿತಾಭ್ – Kannada News | Kalki 2898 AD Sequel Filming Begins: Prabhas, Amitabh Bachchan Return; Sai Pallavi Joins

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆದ ಬಳಿಕ ಸೀಕ್ವೆಲ್ ಬರಬೇಕಿದೆ. ಆದರೆ, ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾದವು. ಈ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ಹೋಗಿದ್ದು, ಚಿತ್ರಕ್ಕೆ ದೊಡ್ಡ ಹಿನ್ನಡೆ ಆಯಿತು. ಸಿನಿಮಾ ನಿಲ್ಲುತ್ತೆ ಎಂದು ಕೂಡ ಹೇಳಲಾಗಿತ್ತು. ಹೀಗಿರುವಾಗಲೇ ಚಿತ್ರದ ಸೀಕ್ವೆಲ್ ಬಗ್ಗೆ ಅಪ್​​ಡೇಟ್ ಸಿಕ್ಕಿದೆ. ಈ ಸಿನಿಮಾ ಅಧಿಕೃತವಾಗಿ ಆರಂಭ ಆಗಿದೆ. ಇದು ಅಭಿಮಾನಿಗಳ ಖುಷಿ ಕೊಟ್ಟಿದೆ.

‘ಕಲ್ಕಿ 2898 ಎಡಿ’ ಸಿನಿಮಾಗೆ ನಾಗ್ ಅಶ್ವಿನ್ ನಿರ್ದೇಶನ ಇದೆ. ಈ ಸಿನಿಮಾ ದೊಡ್ಡ ಬಜೆಟ್​​ನಲ್ಲಿ ರೆಡಿ ಆಯಿತು. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ಈ ಚಿತ್ರದ ಕಥೆ ಅರ್ಧಕ್ಕೆ ನಿಂತಿದ್ದು, ಸೀಕ್ವೆಲ್ ಬರಬೇಕಿದೆ. ಮೊದಲ ಭಾಗದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ದೀಪಿಕಾ ಸೇರಿದಂತೆ ಅನೇಕರು ನಟಿಸಿದ್ದರು. ಸೀಕ್ವೆಲ್​​ನಲ್ಲಿ ದೀಪಿಕಾ ಜಾಗವನ್ನು ಸಾಯಿ ಪಲ್ಲವಿ ತುಂಬಿದ್ದಾರೆ ಎನ್ನಲಾಗಿದೆ.

ಈ ಚಿತ್ರದ ಶೂಟ್ ಯಾವಾಗ ಆರಂಭ ಆಗುತ್ತದೆ ಎಂಬ ಕುತೂಹಲ ಮೂಡಿತ್ತು. ಅದಕ್ಕೆ ಅಮಿತಾಭ್ ಬಚ್ಚನ್ ಕಡೆಯಿಂದ ಉತ್ತರ ಸಿಕ್ಕಿದೆ. ಕಮಲ್ ಹಾಸನ್ ಅವರನ್ನು ಭೇಟಿ ಮಾಡಿರುವ ಫೋಟೋನ ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್  ಅಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್​​ಗೆ ಶೂಟಿಂಗ್ ಶುರುವಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ‘ಅತ್ತೆ-ಮಾವ ನನ್ನ ಹೆಂಡತಿಯನ್ನು ಕಳುಹಿಸುತ್ತಿಲ್ಲ’; ಪೋಸ್ಟರ್ ಹಿಡಿದು ನಿಂತ ಅಮಿತಾಭ್ ಬಚ್ಚನ್

ಪ್ರತಿ ಭಾನುವಾರ ಅಮಿತಾಭ್ ಬಚ್ಚನ್ ಅವರು ಮನೆಯ ಬಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಆದರೆ, ಈ ಬಾರಿ ಅದು ಸಾಧ್ಯವಾಗಿಲ್ಲ. ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ. ಶೂಟ್ ಕಾರಣಕ್ಕೆ ಅವರು ಹೈದರಾಬಾದ್ ಅಲ್ಲಿ ಇದ್ದಾರೆ. ಹೀಗಾಗಿ, ಅಭಿಮಾನಿಗಳ ಭೇಟಿ ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಅಮಿತಾಭ್ ಬಚ್ಚನ್ ಅವರಿಗೆ ಈ ವಯಸ್ಸಾಗಿದೆ. ಆದಾಗ್ಯೂ ಅಪರೂಪಕ್ಕೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರು ಅಶ್ವತ್ಥಾಮ ಆಗಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *