ಕೊನೆಗೂ ಸೆಟ್ಟೇರಲೇ ಇಲ್ಲ ರಾಜ್​​ಕುಮಾರ್ ನಟಿಸಬೇಕಿದ್ದ ಆ ಸಿನಿಮಾ – Kannada News | Rajkumar Birthday: Unmade Dream: The Nrupatunga Film That Never Was

ರಾಜ್​ಕುಮಾರ್ ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರು ಬದುಕಿದ್ದರೆ ಅಭಿಮಾನಿಗಳು ಅವರ ಮನೆಯ ಬಳಿಯೇ ತೆರಳಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ, ಇಂದು ಅವರಿಲ್ಲ. ಅವರ ನೆನಪಲ್ಲಿ ಎಲ್ಲ ಕಡೆಗಳಲ್ಲಿ ಜನ್ಮದಿನವನ್ನು ಆಚರಣೆ ಮಾಡುವುದನ್ನು ನೀವು ಕಾಣಬಹುದು. ಈಗ ರಾಜ್​ಕುಮಾರ್ ನಟಿಸಬೇಕಿದ್ದ ಒಂದು ಸಿನಿಮಾ ಸೆಟ್ಟೇರಲೇ ಇಲ್ಲ ಎಂಬ ವಿಷಯ ನಿಮಗೆ ಗೊತ್ತೇ? ಆ ಬಗ್ಗೆ ನಾವು ಹೇಳುತ್ತೇವೆ.

ರಾಜ್​​ಕುಮಾರ್ ಅವರು ಇಂತಹ ಪಾತ್ರ ಮಾಡಿಲ್ಲ ಎಂದಿಲ್ಲ. ಬಾಂಡ್, ಪ್ರಣಯದ ಸಿನಿಮಾಗಳು, ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ತಲುಪಿಸುವ ಚಿತ್ರಗಳನ್ನು ಮಾಡಿದರು. ಅದರಲ್ಲೂ ಅವರಿಗೆ ಪೌರಾಣಿಕ, ದೈವಿಕ ಹಾಗೂ ಐತಿಹಾಸಿಕ ಸಿನಿಮಾಗಳನ್ನು ಮಾಡುವುದು ಎಂದರೆ ಇಷ್ಟವಾಗಿತ್ತು. ಅವರು ನಾಟಕಗಳನ್ನು ಮಾಡಿ ಬಂದಿದ್ದಕ್ಕೋ ಏನೋ ಈ ಪಾತ್ರಗಳು ಅವರಿಗೆ ತುಂಬಾನೇ ಹೊಂದಿಕೆ ಆಗುತ್ತಿತ್ತು ಎಂದರೂ ತಪ್ಪಾಗಲಿಕ್ಕಿಲ್ಲ.

ಅಮೋಘವರ್ಷ ನೃಪತುಂಗ ಇದು ರಾಜ್​​ಕುಮಾರ್ ಅವರು ನಟಿಸಬೇಕಿದ್ದ ಸಿನಿಮಾ ಆಗಿತ್ತು. ಇದು ಅವರ 200ನೇ ಚಿತ್ರ ಆಗಬೇಕಿತ್ತು. ಅಂದಿನ ಕಾಲದಲ್ಲಿ ಜಾಹೀರಾತು ಕೂಡ ನೀಡಲಾಗಿತ್ತು. ಈ ಜಾಹೀರಾತನ್ನು ಲಿಖಿತಾ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ.

ಈ ಸಿನಿಮಾ ಬಗ್ಗೆ ಎಂಎಸ್ ಶ್ರೀ ಹರ್ಷ ಎಂಬುವವರು ಬರೆದುಕೊಂಡಿದ್ದಾರೆ. ‘ಅಮೋಘವರ್ಷ ನೃಪತುಂಗ – ಇದು ಅಣ್ಣಾವ್ರ 200ನೇ ಸಿನಿಮಾ‌ ಎಂದು ಆಗ ಜಾಹಿರಾತು ನೀಡಲಾಗಿತ್ತು ( 1986-87ನಲ್ಲಿ ಅಂದಾಜು ). ಪತ್ರಿಕೆಗಳಲ್ಲಿ ತುಂಬಾ ದಿನ ಹಾಗೆ ಜಾಹಿರಾತು ಬರುತ್ತಲೇ ಇತ್ತು. ನಾವೆಲ್ಲ ಆಗ ರೋಮಾಂಚನಗೊಂಡು, ಕಾತರದಿಂದ ಕಾಯುತ್ತಿದ್ದಾಗಲೇ ದಿಡೀರ್ ಎಂದು ಒಂದು ದಿನ ದೇವತಾ ಮನುಶ್ಯ ರಾಜ್​ಕುಮಾರ್ 200 ನೇ ಚಿತ್ರ ಎಂದು ಘೋಷಣೆ ಮಾಡಲಾಯಿತು’ ಎಂದು ಶ್ರೀ ಹರ್ಷ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  ಡಾ. ರಾಜ್​ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್​ಲಾಲ್

‘ನೃಪತುಂಗ ಏಕೆ ಸೆಟ್ ಏರಲಿಲ್ಲ, ಏನು ಕಾರಣ ಎಂದು ಈವರೆಗೂ ನನಗೆ ಗೊತ್ತಿಲ್ಲ. ಆದರೆ ಅದೊಂದು ದೊಡ್ಡ ನಿರಾಶೆ. ಇನ್ನು ಆ ಪಾತ್ರವನ್ನು ಯಾರೂ ಮಾಡಿದರೂ ಅಷ್ಟು ರಸ ಇರುವುದಿಲ್ಲ. ಅದು ಮುಗಿದ ಅಧ್ಯಾಯ ಬಿಡಿ’ ಎಂದು ಅವರು ಬರೆದಿದ್ದಾರೆ. ಅಂದಹಾಗೆ ಈ ಚಿತ್ರವನ್ನು ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನ ಮಾಡಬೇಕಿತ್ತು. ಪಾರ್ವತಮ್ಮ ನಿರ್ಮಾಣ ಮಾಡಬೇಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *