ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ರೋಚಕ ಹೋರಾಟಕ್ಕೆ ಡೆಲ್ಲಿ ಪ್ರೀಮಿಯರ್ ಲೀಗ್ ಸಾಕ್ಷಿಯಾಗಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂ ಡೆಲ್ಲಿ ಟೈಗರ್ಸ್ ಮತ್ತು ಔಟರ್ ಡೆಲ್ಲಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮೊದಲು ಬ್ಯಾಟ್ ಮಾಡಿದ ನ್ಯೂ ಡೆಲ್ಲಿ ಟೈಗರ್ಸ್ ತಂಡವು ನಿಗದಿತ 15 ಓವರ್ಗಳಲ್ಲಿ 155 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಔಟರ್ ಡೆಲ್ಲಿ ವಾರಿಯರ್ಸ್ ತಂಡದ ಬ್ಯಾಟರ್ಗಳು 14 ಓವರ್ಗಳ ಮುಕ್ತಾಯದ ವೇಳೆಗೆ 147 ರನ್ ಗಳಿಸಿದ್ದರು. ಅದರಂತೆ ಅಂತಿಮ ಓವರ್ನಲ್ಲಿ ಗೆಲುವಿಗೆ 9 ರನ್ಗಳ ಅವಶ್ಯಕತೆಯಿತ್ತು.
ಕೊನೆಯ ಓವರ್ನ ಮೊದಲ 5 ಎಸೆತಗಳಲ್ಲಿ ಔಟರ್ ಡೆಲ್ಲಿ ವಾರಿಯರ್ಸ್ 8 ರನ್ ಕಲೆಹಾಕಿತು. ಅದರಂತೆ ಕೊನೆಯ ಎಸೆತದಲ್ಲಿ ಗೆಲ್ಲಲು 1 ರನ್ ಬೇಕಿತ್ತು.
ಕ್ರೇಝಿ ರನೌಟ್!
ಲಕ್ಷ್ಮಣ್ ಎಸೆದ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಬ್ಯಾಟರ್ ಪ್ರಥಮ್ ಸಲೂಜಾ ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದರು. ನ್ಯೂ ಡೆಲ್ಲಿ ಟೈಗರ್ಸ್ ನಾಯಕ ಹಿಮ್ಮತ್ ಸಿಂಗ್ ಓಡಿ ಬಂದು ಚೆಂಡನ್ನು ಹಿಡಿಯಲು ಪ್ರಯತ್ನಿಸಿದರಾದರೂ, ಕೈಯಿಂದ ಚೆಂಡು ಜಾರಿತು.
ಇತ್ತ ಚೆಂಡಿನೊಂದಿಗೆ ಪಂದ್ಯ ಕೂಡ ಕೈತಪ್ಪಿತು ಎಂಬ ತೀವ್ರ ಕೋಪ ಮತ್ತು ಹತಾಶೆಯಿಂದ ಹಿಮ್ಮತ್ ಸಿಂಗ್ ಚೆಂಡನ್ನು ಕಾಲಿನಿಂದ ಬಲವಾಗಿ ಒದ್ದರು.
ಹಿಮ್ಮತ್ ಸಿಂಗ್ ಒದ್ದ ಚೆಂಡು ನೇರವಾಗಿ ಹೋಗಿ ನಾನ್-ಸ್ಟ್ರೈಕರ್ ಎಂಡ್‌ನ ವಿಕೆಟ್‌ಗೆ ಬಡಿಯಿತು! ಈ ವೇಳೆ ಬ್ಯಾಟರ್ ಕ್ರೀಸ್‌ನಿಂದ ಬಹಳ ದೂರವಿದ್ದ ಕಾರಣ ರನ್-ಔಟ್ ಆದರು. ಹತಾಶೆಯ ಈ ಕಿಕ್ನಿಂದ ಪಂದ್ಯವು ಟೈನಲ್ಲಿ ಅಂತ್ಯಗೊಂಡಿತು.
𝑭𝒆𝒆𝒕 𝑫𝒐𝒏’𝒕 𝑭𝒂𝒊𝒍 𝑴𝒆 𝑵𝒐𝒘 🎵 😉
Catch all the DPL 2026 action LIVE on FanCode 📲#DelhiPremierLeague pic.twitter.com/R9J59uyuc9
— FanCode (@FanCode) August 4, 2026
ಗೆದ್ದಿದ್ದು ಯಾರು?
ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಔಟರ್ ಡೆಲ್ಲಿ ವಾರಿಯರ್ಸ್ ತಂಡವು 6 ಎಸೆತಗಳಲ್ಲಿ ಬರೋಬ್ಬರಿ 20 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ನ್ಯೂ ಡೆಲ್ಲಿ ಟೈಗರ್ಸ್ 3 ಎಸೆತಗಳಲ್ಲಿ 6 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಔಟರ್ ಡೆಲ್ಲಿ ವಾರಿಯರ್ಸ್ ಪಡೆ ಸೂಪರ್ ಓವರ್ನಲ್ಲಿ ಸೂಪರ್ ಜಯವನ್ನು ತಮ್ಮದಾಗಿಸಿಕೊಂಡರು.
ನ್ಯೂ ಡೆಲ್ಲಿ ಟೈಗರ್ಸ್ ಪ್ಲೇಯಿಂಗ್ 11: ಶಿವಂ ಗುಪ್ತಾ (ವಿಕೆಟ್ ಕೀಪರ್) ಲಕ್ಷಯ್ ತರೇಜಾ , ವೈಭವ್ ರಾವಲ್ , ಹಿಮ್ಮತ್ ಸಿಂಗ್ (ನಾಯಕ) , ತನುಜ್ ಪವಾರ್ , ಆರ್ಯನ್ ಶರ್ಮಾ , ಹೃತಿಕ್ ಶೋಕೀನ್ , ಮನೀಶ್ ಸೆಹ್ರಾವತ್ , ಯಶ್ಜೀತ್ , ಪ್ರದ್ಯುಮಾನ್ ಸನನ್ , ಲಕ್ಷ್ಮಣ್.
ಇದನ್ನೂ ಓದಿ: ರೋಹಿತ್ ಶರ್ಮಾ ಸೆಂಚುರಿಯಿಂದ ಅಜಿತ್ ಅಗರ್ಕರ್ ಹುದ್ದೆಗೆ ಕುತ್ತು!
ಔಟರ್ ಡೆಲ್ಲಿ ವಾರಿಯರ್ಸ್ ಪ್ಲೇಯಿಂಗ್ 11: ಯಜಸ್ ಶರ್ಮಾ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ , ಅಕ್ಷಯ್ ಸೈನಿ , ಅಮನ್ ಚೌಧರಿ , ಮೋನು ಶುಕ್ಲಾ , ಹರ್ಷ್ ತ್ಯಾಗಿ , ಪ್ರಥಮ್ ಸಲೂಜಾ , ಶಿವಂ ಶರ್ಮಾ , ಸಿದ್ಧಾಂತ್ ಶರ್ಮಾ (ನಾಯಕ) , ಧನ್ಯಾ ನಕ್ರಾ ,ನವದೀಪ್ ಸೈನಿ.
