
ಕೋಲ್ಕತ್ತಾ, ಮಾರ್ಚ್ 20: ಸದಾ ಒಂದಲ್ಲಾ ಒಂದು ಘಟನೆಯಿಂದ ಸುದ್ದಿಯಲ್ಲಿರುವ ಕೋಲ್ಕತ್ತಾ ಆರ್ಜಿಕರ್ ಆಸ್ಪತ್ರೆಯ ಲಿಫ್ಟ್(Lift) ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಅರೂಪ್ ಬಂಡೋಪಾಧ್ಯಾಯ ಎಂದು ಗುರುತಿಸಲಾಗಿದೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಮೃತರ ಮಗನ ಕಾಲಿನ ಮೂಳೆ ಮುರಿದಿದ್ದು, ಆರ್ಜಿ ಕರ್ ಕಾಲೇಜು, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಅರೂಪ್ ಬಂಡೋಪಾಧ್ಯಾಯ ಶಸ್ತ್ರಚಿಕಿತ್ಸಾ ಕೊಠಡಿಯಿಂದ ಹಿಂದಿರುಗುತ್ತಿದ್ದಾಗ ಲಿಫ್ಟ್ನಿಂದ ಕೆಳಗೆ ಹೋಗುತ್ತಿದ್ದರು. ಲಿಫ್ಟ್ ಇದ್ದಕ್ಕಿದ್ದಂತೆ ನಿಂತಿತ್ತು, ಒಳಗೆ ಮೂವರು ಸಿಲುಕಿಕೊಂಡಿದ್ದರು. ಅರೂಪ್ ಬಹಳ ಸಮಯವಾದರೂ ಹಿಂದಿರುಗದಿದ್ದಾಗ ಕುಟುಂಬ ಚಿಂತಿತರಾಗಿ ಅವರನ್ನು ಹುಡುಕಲು ಆರಂಭಿಸಿತ್ತು. ನಂತರ ಅವರ ಶವ ಲಿಫ್ಟ್ ಒಳಗೆ ಪತ್ತೆಯಾಗಿದೆ.
ಆಸ್ಪತ್ರೆಯ ಮೂಲಗಳ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಲು ಲಿಫ್ಟ್ಮ್ಯಾನ್ ಇರಲಿಲ್ಲ. ಪ್ರಾಥಮಿಕ ತನಿಖೆಗಳು ಇದನ್ನು ಸಮಪೂರ್ಣ ನಿರ್ಲಕ್ಷ್ಯವೆಂದು ಪರಿಗಣಿಸುತ್ತಿವೆ. ಹಿಂದಿನ ದಿನ ಲಿಫ್ಟ್ ಕೆಟ್ಟುಹೋಗಿತ್ತು. ಆದರೆ ಅದನ್ನು ದುರಸ್ತಿ ಮಾಡಲಾಗಿಲ್ಲ ಎಂದು ಕೆಲವರು ಹೇಳಿದ್ದಾರೆ.
ಮತ್ತಷ್ಟು ಓದಿ: ಲಿಫ್ಟ್ನಲ್ಲಿ ಸಿಲುಕಿದ್ದ ಕಂದಮ್ಮಗಳನ್ನು ರಕ್ಷಿಸಿ ದೇವರಾದ ಪುಟ್ಟ ಬಾಲಕಿ
ಮೃತರ ಸಹೋದರಿ ಅರ್ಪಿತಾ ಮಾತನಾಡಿ, ನಾವು ನಮ್ಮ ಅಳಿಯನ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದೇವೆ, ನಾವು ಕಿರುಚುತ್ತಲೇ ಇದ್ದೆವು, ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಬಹುದು ಎಂದು ಊಹಿಸಿರಲಿಲ್ಲ ಎಂದರು.
ರಕ್ಷಣಾ ಕಾರ್ಯಾಚರಣೆ ಆರಂಭವಾದಾಗ ಸಿಬ್ಬಂದಿಗೆ ಲಿಫ್ಟ್ ಕೀ ಸಿಗಲಿಲ್ಲ, ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಕುರಿತು ಬಿಜೆಪಿ ನಾಯಕ ತಪಸ್ ಚಟರ್ಜಿ ಟಿಎಂಸಿ ಸರ್ಕಾರವನ್ನು ಟೀಕಿಸಿದ್ದಾರೆ. ಇದು ಸರ್ಕಾರ ಮತ್ತು ಆಸ್ಪತ್ರೆಯ ಕಡೆಯಿಂದ ಆದ ನಿರ್ಲಕ್ಷ್ಯ ಎಂದು ಹೇಳಿದ್ದಾರೆ,ಜೀವಗಳನ್ನು ಉಳಿಸಲಾಗದಿದ್ದರೂ ಅಂತಹ ನಿರ್ಲಕ್ಷ್ಯದಿಂದ ಜೀವಹಾನಿ ಸಂಭವಿಸಿದೆ. ಎರಡು ವರ್ಷಗಳ ಹಿಂದೆ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ