ಕ್ಯಾಚ್ ಮೇಲೆ ಡೌಟ್ ಇದ್ದರೂ ಔಟ್ ನೀಡಲು ಇದುವೇ ಕಾರಣ!

ಕ್ಯಾಚ್ ಮೇಲೆ ಡೌಟ್ ಇದ್ದರೂ ಔಟ್ ನೀಡಲು ಇದುವೇ ಕಾರಣ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮೊದಲ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪಿನ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಪರ ಹೆನ್ರಿಕ್ ಕ್ಲಾಸೆನ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ್ದ ಕ್ಲಾಸೆನ್ ಪಂದ್ಯದ 14ನೇ ಓವರ್​ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದರು.

ರೊಮೊರಿಯೊ ಶೆಫರ್ಡ್ ಎಸೆದ 14ನೇ ಓವರ್​ನ ಮೊದಲ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಹೊಡೆತ ಬಾರಿಸಿದ್ದರು. ಚೆಂಡು ಇನ್ನೇನು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಫಿಲ್ ಸಾಲ್ಟ್ ಅದ್ಭುತವಾಗಿ ಚೆಂಡನ್ನು ಹಿಡಿದರು.  ಆದರೆ, ಚೆಂಡನ್ನು ಹಿಡಿಯುವಾಗ ಸಾಲ್ಟ್​ನ ಕಾಲು ಅಥವಾ ಶರೀರ ಬೌಂಡರಿ ಕುಶನ್ (Rope) ಗೆ ತಗುಲಿರಬಹುದು ಎಂಬ ಸಂಶಯವಿತ್ತು.

ಮೂರನೇ ಅಂಪೈರ್ ತೀರ್ಪು:

ಕ್ಯಾಚ್ ಮೇಲೆ ಡೌಟ್ ಇದ್ದ ಕಾರಣ ಆನ್-ಫೀಲ್ಡ್ ಅಂಪೈರ್ ಈ ನಿರ್ಧಾರವನ್ನು ಮೂರನೇ ಅಂಪೈರ್ ರೋಹನ್ ಪಂಡಿತ್ ಅವರಿಗೆ ವಹಿಸಿದರು. ಮರುಪರಿಶೀಲನೆಯ ನಂತರ ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಇತ್ತ ಕ್ಯಾಚ್ ಮೇಲೆ ಸಂಶಯಗಳಿದ್ದರೂ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಲು ಇದುವೇ ಮುಖ್ಯ ಕಾರಣ. ಆ ಕಾರಣಗಳೆಂದರೆ…

  • ಸ್ಪಷ್ಟ ಪುರಾವೆಯ ಕೊರತೆ: ಫಿಲ್ ಸಾಲ್ಟ್ ಬೌಂಡರಿ ಲೈನ್ ಮುಟ್ಟುತ್ತಿರುವುದು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಕಂಡುಬರಲಿಲ್ಲ.
  • ಕುಶನ್ ಚಲನೆ: ಕುಶನ್ ಸ್ವಲ್ಪ ಅಲುಗಾಡಿದಂತೆ ಕಂಡರೂ, ಅದು ಸಾಲ್ಟ್ ಅವರ ಸಂಪರ್ಕದಿಂದಲೇ ಆಯಿತು ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.
  • ಲಭ್ಯವಿದ್ದ ಆ್ಯಂಗಲ್​ಗಳು: ಆ ಸಮಯದಲ್ಲಿ ಕೇವಲ ಎರಡು ಕ್ಯಾಮೆರಾ ಆಂಗಲ್‌ಗಳು ಲಭ್ಯವಿದ್ದವು. ಅದರಲ್ಲಿ ಸಾಲ್ಟ್ ಅವರ ಶೂ ಬೌಂಡರಿ ಲೈನ್‌ಗೆ ತಗುಲಿರುವುದು ಖಚಿತವಾಗಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಮೂರನೇ ಅಂಪೈರ್​ನ ತೀರ್ಪು ನಿರ್ಣಾಯಕವಾಗಿರುತ್ತದೆ.
  • ನಿರ್ಣಾಯಕ ಪುರಾವೆ: ಮೂರನೇ ಅಂಪೈರ್ ತೀರ್ಪು ನೀಡುವಾಗ, ಫೀಲ್ಡರ್ ಬೌಂಡರಿ ಗೆರೆಯನ್ನು ಮುಟ್ಟಿದ್ದಾರೆ ಎಂಬುದು ರಿಪ್ಲೇನಲ್ಲಿ ನೂರಕ್ಕೆ ನೂರರಷ್ಟು ಸ್ಪಷ್ಟವಾಗಿ ಕಾಣಿಸಬೇಕು. ಒಂದು ವೇಳೆ ಕ್ಯಾಮೆರಾ ಆ್ಯಂಗಲ್‌ಗಳಲ್ಲಿ ಗೊಂದಲವಿದ್ದರೆ ಅಥವಾ ಸ್ಪಷ್ಟವಾಗಿ ಕಾಣಿಸದಿದ್ದರೆ, ಸಾಫ್ಟ್ ಸಿಗ್ನಲ್ ಅಥವಾ ಲಭ್ಯವಿರುವ ದೃಶ್ಯದ ಆಧಾರದ ಮೇಲೆ ಔಟ್ ನೀಡಲಾಗುತ್ತದೆ. ಅದರಂತೆ ಮೂರನೇ ಅಂಪೈರ್ ಹೆನ್ರಿಕ್ ಕ್ಲಾಸೆನ್ ಅವರನ್ನು ಔಟ್ ಎಂದು ತೀರ್ಪು ನೀಡಿದ್ದಾರೆ.

ಇತ್ತ ಮೂರನೇ ಅಂಪೈರ್​ನ ಈ ತೀರ್ಪಿನಿಂದ ಕ್ಲಾಸೆನ್ ತುಂಬಾ ಅಸಮಾಧಾನಗೊಂಡರು. ಅಲ್ಲದೆ ಮೈದಾನದಿಂದ ಹೊರಹೋಗುವಾಗ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದರು.

ಇದನ್ನೂ ಓದಿ: Virat Kohli: ಒಂದೇ ಪಂದ್ಯದಲ್ಲಿ ಚೇಸ್ ಮಾಸ್ಟರ್​ ಹೆಸರಿಗೆ 10 ದಾಖಲೆಗಳು ಸೇರ್ಪಡೆ

ಆದರೆ ಇಂತಹ ಸಂಶಯಾಸ್ಪದ ಕ್ಯಾಚ್​ಗಳ ವೇಳೆ ಮೂರನೇ ಅಂಪೈರ್ ತೀರ್ಮಾಣವೇ ಅಂತಿಮ ನಿರ್ಮಾಣವಾಗಿರುತ್ತದೆ. ಅಂದರೆ ಬೌಂಡರಿ ಲೈನ್​ಗೆ ಫೀಲ್ಡರ್​ನ ದೇಹದ ಭಾಗದ ತಾಗಿದೆ ಎಂದು ಸಾಬೀತುಪಡಿಸಲು ಸಾಧ್ಯವಾಗದೇ ಇದ್ದರೆ, ಅದನ್ನು ಕ್ಯಾಚ್ ಔಟ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಹೆನ್ರಿಕ್ ಕ್ಲಾಸೆನ್ ಔಟ್ ಎಂದು ಮೂರನೇ ಅಂಪೈರ್ ತೀರ್ಪು ನೀಡಿದ್ದಾರೆ.

 

Source link

Leave a Reply

Your email address will not be published. Required fields are marked *