ಕ್ಯಾನ್ಸರ್ ಪೀಡಿತ ಗಂಡನ ಚಿಕಿತ್ಸೆಗೆಂದು ಕೆಲಸ ಮಾಡ್ತಿದ್ದ ಮನೆಯಲ್ಲೇ ಕದ್ದು ಸಿಕ್ಕಿಬಿದ್ದ ಮಹಿಳೆ: ದೋಚಿದ್ದಿದ್ದು 12.5 ಕೆಜಿ ಬೆಳ್ಳಿ! – Kannada News | Wife Steals 12.5kg Silver for Cancer Stricken Husband’s Treatment in Bengaluru

ಬೆಂಗಳೂರು, ಫೆಬ್ರವರಿ 27: ಕ್ಯಾನ್ಸರ್ ಪೀಡಿತ ಗಂಡನ ಚಿಕಿತ್ಸೆ ಖರ್ಚಿಗೆಂದು ಕೆಲಸ ಮಾಡ್ತಿದ್ದ ಮನೆಯಲ್ಲಿಯೇ ಹೆಂಡತಿಯೋರ್ವಳು ಬೆಳ್ಳಿ ಕದ್ದಿರುವ ಘಟನೆ ಸಂಬಂಧ ಜೀವನ ಭೀಮಾನಗರ ಪೊಲೀಸರು ಚೈತ್ರಾ ಎಂಬಾಕೆಯನ್ನು ಬಂಧಿಸಿದ್ದಾರೆ. ಪ್ರತಿಷ್ಟಿತ ಆಸ್ಪತ್ರೆ ಒಂದರಲ್ಲಿ ಸರ್ಜನ್ ಆಗಿದ್ದವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ, ಹಂತ ಹಂತವಾಗಿ ಒಂದೊಂದೇ ಬೆಳ್ಳಿ ಪಾತ್ರೆಯಂತೆ ಒಟ್ಟು ಒಟ್ಟು 12.5 ಕೆಜಿ ಬೆಳ್ಳಿ ದೋಚಿದ್ದಳು. ಈಕೆಯ ಗಂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಖರ್ಚಿಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಹೀಗಾಗಿ ಕಳೆದ ಒಂದೂವರೆ ವರ್ಷದಿಂದ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಈಕೆ ಕಳ್ಳತನಕ್ಕೆ ಇಳಿದಿದ್ದಳು ಎನ್ನಲಾಗಿದೆ.

ಮಹಡಿ ಮೇಲೆ ಕೆಲ ಬೆಳ್ಳಿ ಸಾಮಗ್ರಿಗಳ ಕೂಡಿಟ್ಟಿದ್ದ ಮನೆಯವರು, ಹಬ್ಬದ ಸಂದರ್ಭದಲ್ಲಿ ಮಾತ್ರ ಆ ಪಾತ್ರೆಗಳನ್ನ ಉಪಯೋಗ ಮಾಡುತ್ತಿದ್ದರು. ಈ ಹಿನ್ನೆಲೆ ಅವುಗಳನ್ನು ಒಂದೊಂದಾಗಿ ಎಗರಿಸಿದ್ದ ಚೈತ್ರಾ, ಅವನ್ನು ಅಡವಿಟ್ಟು ಹಣ ಪಡೆದು ಬಳಕೆ ಮಾಡುತ್ತಿದ್ದಳು. ನಂತರ ಅನುಮಾನ ಬಾರದಂತೆ ಬಂದು ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು.  ದೀಪಾವಳಿ ಹಬ್ಬದ ನಂತರ ಆಕೆ ಕೆಲಸ ಬಿಟ್ಟಿದ್ದು, ದಸರಾ ಹಬ್ಬಕ್ಕೆ ಬೇಕೆಂದು ಪಾತ್ರೆ ಚೀಲ ಓಪನ್ ಮಾಡಿದ್ದ ಮನೆಯವರು ಶಾಕ್​​ ಆಗಿದ್ದಾರೆ. ಈ ವೇಳೆ
ಬೆಳ್ಳಿ ಪಾತ್ರೆಗಳು, ಪೂಜಾ ಸಾಮಗ್ರಿಗಳು ಕಾಣೆಯಾಗಿರೋದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ಅವರು ನೀಡಿದ್ದ ದೂರಿನ ಅನ್ವಯ ತನಿಖೆಗೆ ಮುಂದಾದ ಪೊಲೀಸರು, ಅನುಮಾನಗೊಂಡು ಮನೆ ಕೆಲಸದವರ ವಿಚಾರಣೆ ನಡೆಸಿದ್ದಾರೆ. ಚೈತ್ರಾಳ ವಿಚಾರಣೆ ವೇಳೆ ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿರುವ ಸತ್ಯ ಬಯಲಾಗಿದ್ದು, ಬಂಧಿತಳಿಂದ 35 ಲಕ್ಷ ಮೌಲ್ಯದ 12.5 ಕೆಜಿ ಬೆಳ್ಳಿ, 7.5 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೂ ಅಂಡಾಣು ಮಾರಾಟ ದಂಧೆ? ಐವಿಎಫ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಗಾಕ್ಕೆ ಆರೋಗ್ಯ ಇಲಾಖೆ ಸೂಚನೆ

ಚಿನ್ನದಂಗಡಿ ಮಾಲೀಕನ ಹೆಸರಿನಲ್ಲಿ ಸರ ಪಡೆದು ವಂಚಿಸಿದ ಆರೋಪಿಯನ್ನು ಬೆಂಗಳೂರಿನ ಭಾರತಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ 5 ತಿಂಗಳ ಬಳಿಕ ರಾಜಸ್ಥಾನ ಮೂಲದ ಆರೋಪಿ ಧರ್ಮವೀರ್​ ಸಿಂಗ್​ ಬಂಧಿಸಲಾಗಿದ್ದು, ಸುಮಾರು 33 ಲಕ್ಷ ರೂ. ಮೌಲ್ಯದ 239 ಗ್ರಾಂ ಚಿನ್ನದ ಸರವನ್ನು ಈತನಿಂದ ವಶಕ್ಕೆ ಪಡೆಯಲಾಗಿದೆ. ಮಹಾವೀರ್ ಜ್ಯುವೆಲ್ಲರಿ ಶಾಪ್​ನಲ್ಲಿ ಕೆಲಸ ಮಾಡ್ತಿದ್ದ ಧರ್ಮವೀರ್ ಸಿಂಗ್, ಬೇರೆ ಚಿನ್ನದ ಅಂಗಡಿಗಳ ಜೊತೆ ಎಕ್ಸ್​ಚೇಂಜ್​ ವ್ಯವಹಾರ ನಡೆಸುತ್ತಿದ್ದ. ಜ್ಯುವೆಲ್ಲರಿ ಅಂಗಡಿ ಮಾಲೀಕ ಹೈದರಾಬಾದ್​ಗೆ ಹೋದಾಗ ಮಾಲೀಕನ ಹೆಸರು ಹೇಳಿ 7 ಲಾಂಗ್​ ಚೈನ್​ ಪಡೆದುಕೊಂಡಿದ್ದ ಆರೋಪಿ, ಅವುಗಳ ಸಮೇತ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಪೊಲೀಸರ ಕಣ್ಣುತಪ್ಪಿಸಿ 5 ತಿಂಗಳು ತಲೆಮರೆಸಿಕೊಂಡಿದ್ದ ಈತನನ್ನು ಕೊನೆಗೂ ಪೊಲೀಸರು ಖೆಡ್ಡಾಕ್ಕೆ ಕೆಡಿವಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:23 pm, Fri, 27 February 26

Source link

Leave a Reply

Your email address will not be published. Required fields are marked *