ಖ್ಯಾತ ಕಿರುತೆರೆ ಜೋಡಿಯ ದಾಂಪತ್ಯ ಜೀವನ ಅಂತ್ಯ; ರಿಯಾಲಿಟಿ ಶೋನಲ್ಲೇ ವಿಚ್ಛೇದನ ಘೋಷಿಸಿದ ನಟಿ – Kannada News | Gaurav Khanna and Akanksha Chamola Divorce: Lock Upp Revelation Shocks Fans

ಸೆಲೆಬ್ರಿಟಿ ಲೋಕದಲ್ಲಿ ಡಿವೋರ್ಸ್ ಸಾಮಾನ್ಯ ಎಂಬಂತಾಗಿದೆ. ಈಗ ಕಿರುತೆರೆ ಲೋಕದ ಪ್ರಸಿದ್ಧ ಜೋಡಿ ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ ತಮ್ಮ ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡುತ್ತಿದ್ದಾರೆ. ಖ್ಯಾತ ರಿಯಾಲಿಟಿ ಶೋ ‘ಲಾಕ್ ಅಪ್ ಸೀಸನ್ 2’ ವೇದಿಕೆಯಲ್ಲಿ ಆಕಾಂಕ್ಷಾ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ.

ಲಾಕ್ ಅಪ್ ಶೋ ಜೂನ್ 27ರಂದು ನೆಟ್​ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಪ್ರಸಾರ ಆರಂಭಿಸಿದೆ. ಮೊದಲ ಸಂಚಿಕೆಯಲ್ಲಿ ಆಕಾಂಕ್ಷಾ ತಮ್ಮ ವೈಯಕ್ತಿಕ ಜೀವನದ ರಹಸ್ಯವೊಂದನ್ನು ಬಿಚ್ಚಿಟ್ಟರು. ತಮಗೂ ಮತ್ತು ಗೌರವ್ ಖನ್ನಾಗೆ ವಿಚ್ಛೇದನವಾಗುತ್ತಿದೆ ಎಂದು ಅವರು ಹೇಳಿದರು. ಕಳೆದ ಒಂದು ವರ್ಷದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರಂತೆ. ಈ ವಿಷಯವನ್ನು ಇಷ್ಟು ದಿನ ಗೌಪ್ಯವಾಗಿಡಲಾಗಿತ್ತು. ಈ ಸುದ್ದಿಯನ್ನು ಕೇಳಿ ಶೋ ನಿರೂಪಕರು ಮತ್ತು ಪ್ರೇಕ್ಷಕರು ದಿಗ್ಭ್ರಮೆಗೊಂಡರು.

ಪರಸ್ಪರ ಕಹಿ ಭಾವನೆ ಇಲ್ಲ

ನಮ್ಮಿಬ್ಬರ ಮಧ್ಯೆ ಯಾವುದೇ ದ್ವೇಷ ಅಥವಾ ಕಹಿ ಭಾವನೆ ಇಲ್ಲ ಎಂದು ಆಕಾಂಕ್ಷಾ ಸ್ಪಷ್ಟಪಡಿಸಿದ್ದಾರೆ. ನಾವು ಈಗಲೂ ಪರಸ್ಪರ ಮಾತನಾಡುತ್ತೇವೆ. ಆದರೆ ನಮ್ಮಿಬ್ಬರ ಯೋಚನೆಗಳು ಮತ್ತು ಭವಿಷ್ಯದ ಗುರಿಗಳು ವಿಭಿನ್ನವಾಗಿವೆ. ನಾವಿಬ್ಬರು ಜೊತೆಯಾಗಿ ಬಾಳಲು ಹೊಂದಾಣಿಕೆ ಆಗುತ್ತಿಲ್ಲ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ವಿಚಾರದಲ್ಲಿ ಭಿನ್ನಾಭಿಪ್ರಾಯ

ಗೌರವ್ ಮತ್ತು ಆಕಾಂಕ್ಷಾ 2016ರ ನವೆಂಬರ್ 24ರಂದು ವಿವಾಹವಾಗಿದ್ದರು. ಈ ಹಿಂದೆ ಬಿಗ್ ಬಾಸ್ 19 ಶೋನಲ್ಲಿ ಗೌರವ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಆ ಶೋನ ಕೌಟುಂಬಿಕ ವಾರದಲ್ಲಿ ಆಕಾಂಕ್ಷಾ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಗೌರವ್ ಮಕ್ಕಳ ವಿಚಾರದ ಬಗ್ಗೆ ಮಾತನಾಡಿದ್ದರು. ತಮಗೆ ಮಗು ಬೇಕು ಎಂಬ ಆಸೆ ಇದೆ ಎಂದಿದ್ದರು. ಆದರೆ ಪತ್ನಿ ಆಕಾಂಕ್ಷಾಗೆ ಮಗು ಬೇಡ ಎಂಬ ನಿಲುವಿದೆ ಎಂದು ಗೌರವ್ ಹೇಳಿದ್ದರು. ತಮಗೆ ತಾಯಿಯಾಗುವ ಇಷ್ಟ ಇಲ್ಲ ಎಂದು ಆಕಾಂಕ್ಷಾ ಕೂಡ ಈ ಹಿಂದೆ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಇದು ಅವರ ವೈಯಕ್ತಿಕ ನಿರ್ಧಾರವಾಗಿತ್ತು.

ಇದನ್ನೂ ಓದಿ: ಸಿಕ್ಕಾಪಟ್ಟೆ ಬೋಲ್ಡ್​ ಅವತಾರದಲ್ಲಿ ಆಕಾಂಕ್ಷಾ ಶರ್ಮಾ

ವದಂತಿಗಳನ್ನು ನಿರಾಕರಿಸಿದ್ದ ನಟಿ

ಕಳೆದ ಜನವರಿ ತಿಂಗಳಿನಲ್ಲಿ ಇವರಿಬ್ಬರ ವಿಚ್ಛೇದನದ ವದಂತಿಗಳು ಹಬ್ಬಿದ್ದವು. ಆದರೆ ಆಗ ಆಕಾಂಕ್ಷಾ ಇದನ್ನು ಸುಳ್ಳು ಎಂದು ತಳ್ಳಿಹಾಕಿದ್ದರು. ನಮ್ಮ ಸಂಸಾರದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು. ಆದರೆ ಈಗ ರಿಯಾಲಿಟಿ ಶೋ ವೇದಿಕೆಯಲ್ಲಿ ಅವರೇ ಅಧಿಕೃತವಾಗಿ ವಿಚ್ಛೇದನದ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *