ಪಟ್ನಾದ ದೀಘಾ ಘಾಟ್ ಬಳಿ ಗಂಗಾ ನದಿಯಲ್ಲಿ ಇಬ್ಬರು ಯುವಕರು ಮುಳುಗುತ್ತಿದ್ದಾಗ ಮಹಿಳಾ ಟ್ರಾಫಿಕ್ ಪೊಲೀಸ್ ಧಾವಿಸಿ ಕಾಪಾಡಲು ಮುಂದಾಗಿದ್ದಾರೆ. ತಾರಾ ಕುಮಾರಿ ಎಂಬ ಪೊಲೀಸ್ ಅಧಿಕಾರಿಯ ಈ ಕೆಲಸಕ್ಕೆ ಎಲ್ಲ ಕಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಜನ ಹಿಂಜರಿಯುತ್ತಾರೆ, ಆದರೆ ತಾರಾ ಅವರು ತಾವು ಧರಿಸಿದ್ದ ಪೊಲೀಸ್ ಸಮವಸ್ತ್ರದಲ್ಲೇ ನದಿಗೆ ಹಾರಿ ಯುವಕರನ್ನು ರಕ್ಷಿಸಿದ್ದಾರೆ. ಅವರ ಈ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ನೋಡಿ ಅಲ್ಲಿದ್ದ ಜನರು ಬೆರಗಾದರು. ಪ್ರಾಣದ ಹಂಗು ತೊರೆದು ಅವರು ಮಾಡಿದ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
