ಗಂಟಲಿನ ಸೋಂಕಿನಿಂದ ಎನ್​ಸಿಪಿ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು – Kannada News | NCP Leader Sharad Pawar admitted to hospital in Pune due to throat Problem

ಪುಣೆ, ಫೆಬ್ರವರಿ 9: ಎನ್​ಸಿಪಿ ನಾಯಕ ಶರದ್ ಪವಾರ್ (Sharad Pawar) ಗಂಟಲು ಸಂಬಂಧಿತ ಸಮಸ್ಯೆಗಳು, ಕೆಮ್ಮು ಮತ್ತು ಜ್ವರದ ಕಾರಣದಿಂದ ಇಂದು ಮಧ್ಯಾಹ್ನ ಪುಣೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಅವರ ನಿವಾಸದಿಂದ ಆಸ್ಪತ್ರೆಗೆ ಸೇರಿಸಲಾಯಿತು. ಬಾರಾಮತಿಯಲ್ಲಿದ್ದಾಗಲೇ ಅವರು ಅಸ್ವಸ್ಥರಾಗಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದರೂ ಅವರ ಅನಾರೋಗ್ಯ ಮುಂದುವರಿದ ಕಾರಣದಿಂದ ಚಿಕಿತ್ಸೆಗಾಗಿ ಅವರನ್ನು ಪುಣೆಗೆ ಸ್ಥಳಾಂತರಿಸಲು ವೈದ್ಯರು ಸಲಹೆ ನೀಡಿದರು.

ಎನ್‌ಸಿಪಿ ನಾಯಕ ಶರದ್ ಪವಾರ್ ಗಂಟಲು ಸೋಂಕಿನಿಂದ ಬಳಲುತ್ತಿದ್ದಾರೆ. ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಆಸ್ಪತ್ರೆಗೆ ಬಂದ ನಂತರ ವೈದ್ಯರ ತಂಡವು ಅವರನ್ನು ಪರಿಶೀಲಿಸುತ್ತಿದೆ. ವೈದ್ಯರ ಸಲಹೆಯ ಮೇರೆಗೆ ಮುಂದಿನ ಕ್ರಮವನ್ನು ನಿರ್ಧರಿಸಲಾಗುತ್ತದೆ” ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅಜಿತ್ ಪವಾರ್ ಸಾವಿನಲ್ಲಿ ಷಡ್ಯಂತ್ರವಿಲ್ಲ, ಅದೊಂದು ಅಪಘಾತ; ಶರದ್ ಪವಾರ್ ಮೊದಲ ಪ್ರತಿಕ್ರಿಯೆ

ಎನ್​ಸಿಪಿ ಸಂಸದೆ ಮತ್ತು ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ಅವರ ಅಳಿಯ ಸದಾನಂದ ಸುಳೆ ಆಸ್ಪತ್ರೆಯಲ್ಲಿ ಶರದ್ ಪವಾರ್ ಅವರೊಂದಿಗೆ ಇದ್ದಾರೆ. ಎನ್​ಸಿಪಿ ನಾಯಕರು ಮತ್ತು ಬೆಂಬಲಿಗರು ಶರದ್ ಪವಾರ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮರಣದ ನಂತರವೂ ಶರದ್ ಪವಾರ್ ಜನರನ್ನು ಭೇಟಿ ಮಾಡುವುದನ್ನು ಮತ್ತು ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ವೈದ್ಯರು ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸಿ, ಚಿಕಿತ್ಸೆಗೆ ಅವರ ಪ್ರತಿಕ್ರಿಯೆಯನ್ನು ಪರಿಶೀಲಿಸಿದ ನಂತರ ಅವರ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:17 pm, Mon, 9 February 26

Source link

Leave a Reply

Your email address will not be published. Required fields are marked *