ಮುಂಬೈ, ಫೆಬ್ರವರಿ 17: ವ್ಯಕ್ತಿಯೊಬ್ಬ ಪ್ರೇಯಸಿಯ ಎದೆಯ ಮೇಲೆ ಹತ್ತಿ ಕುಳಿತು, ಚಾಕು ಮುರಿಯುವವರೆಗೂ ಇರಿದು, ಕೊಲೆ ಮಾಡಿ ಬಳಿಕ ಧೂಪ ಬೆಳಗಿ ಆಕೆಯ ಆತ್ಮವನ್ನು ಕರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆಕೆಯನ್ನು ಕೊಲೆ(Murder)ಮಾಡಿ ಬಳಿಕ ಯೂಟ್ಯೂಬ್ನಲ್ಲಿ ಆತ್ಮವನ್ನು ಕರೆಯುವುದು ಹೇಗೆ ಎಂದು ಸರ್ಚ್ ಮಾಡಿದ್ದಾನೆ. ಕೊಲೆ ಮಾಡಿದ್ದಕ್ಕೆ ಕ್ಷಮೆಯಾಚಿಸಿ ಆಕೆಯ ಆತ್ಮದೊಂದಿಗೆ ಮಾತನಾಡಲು ಬಯಸುವುದಾಗಿ ಕೇಳಿಕೊಂಡಿದ್ದ.
ಇದು ಕಾಲ್ಪನಿಕವಲ್ಲ, ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ಎಂಬಿಎ ವಿದ್ಯಾರ್ಥಿಯ ಕ್ರೂರ ಹತ್ಯೆಯ ಆರೋಪಿ ಪಿಯೂಷ್ ಧಮ್ನೋಟಿಯಾ ಅವರ ನಡವಳಿಕೆ ಇದು. ಈಗ ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ವಿಚಾರಣೆಯಿಂದ ಹೊರಹೊಮ್ಮುತ್ತಿರುವ ವಿವರಗಳು ನಗರದಾದ್ಯಂತ ಆತಂಕ ಸೃಷ್ಟಿ ಮಾಡಿದೆ. ಮನೆಯ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಫೆಬ್ರವರಿ 10 ರಂದು ಧಮ್ನೋಟಿಯಾ ವಿದ್ಯಾರ್ಥಿಯೊಂದಿಗೆ ಬರುತ್ತಿರುವುದು ಕಂಡುಬಂದಿತ್ತು. ಸುಮಾರು ಎರಡೂವರೆ ಗಂಟೆಗಳ ನಂತರ, ಅದೇ ಕ್ಯಾಮೆರಾದಲ್ಲಿ ಆತ ಒಂಟಿಯಾಗಿ ಬ್ಯಾಗ್ ಹೊತ್ತುಕೊಂಡು ಹೊರಗೆ ಹೋಗುವುದು ಕಂಡುಬಂದಿತ್ತು. ಆ ಕೋಣೆಯೊಳಗೆ ಏನಾಯಿತು ಎಂಬುದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಧಮ್ನೋಟಿಯಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಡ ಹೇರಿದ್ದ, ಆಕೆ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿ ನಿರಾಕರಿಸಿದ್ದಳು. ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದ ಆತ, ಆಕೆಯ ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ, ಉಡುಗೊರೆ ನೀಡುವುದಾಗಿ ಹೇಳಿದ್ದ.
ಮತ್ತಷ್ಟು ಓದಿ: ಮೂರು ಮಕ್ಕಳ ಕೊಂದು ಶಿಕ್ಷೆ ಅನುಭವಿಸಿ ಬಂದಿದ್ದ ವ್ಯಕ್ತಿ, ಮಹಿಳೆಯ ಕೊಂದು ರೈಲಿನೆದುರು ಹಾರಿ ಆತ್ಮಹತ್ಯೆ
ಅವಳು ಮತ್ತೆ ವಿರೋಧಿಸಿದಾಗ, ಅವನು ಅವಳ ಬಾಯಿಗೆ ಬಟ್ಟೆಯನ್ನು ತುರುಕಿ ಅವಳ ಎದೆಯ ಮೇಲೆ ಕುಳಿತು, ಅವಳು ಪ್ರಜ್ಞೆ ಕಳೆದುಕೊಳ್ಳುವವರೆಗೂ ಅವಳನ್ನು ಉಸಿರುಗಟ್ಟಿಸಿದ್ದ. ಅವಳು ಉಸಿರಾಟವನ್ನು ನಿಲ್ಲಿಸಿದ್ದಾಳೆಂದು ಅರಿತುಕೊಂಡ ಅವನು, ಅವಳ ಎದೆಯ ಬಳಿ ಎಷ್ಟು ಬಲದಿಂದ ಇರಿದಿದ್ದನೆಂದರೆ ಚಾಕುವೇ ಮುರಿದು ಹೋಗಿತ್ತು.
ಆದರೆ ಆ ಕ್ರೌರ್ಯ ಸಾವಿನೊಂದಿಗೆ ಕೊನೆಗೊಂಡಿಲ್ಲ. ಆಕೆಯನ್ನು ಕೊಂದ ನಂತರವೂ ಅವನು ಕೋಣೆಯೊಳಗೆ ಇದ್ದ. ಅವನು ಹೊರಗೆ ಬಂದು, ಮದ್ಯದ ಅಂಗಡಿಯಿಂದ ಬಿಯರ್ ಖರೀದಿಸಿ, ಹಿಂತಿರುಗಿ, ಆಕೆಯ ನಿರ್ಜೀವ ದೇಹದ ಪಕ್ಕದಲ್ಲಿ ಕುಳಿತು ಕುಡಿದಿದ್ದ.
ವಿಚಾರಣೆಯ ಸಮಯದಲ್ಲಿ, ಅವನು ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ, ಯುವತಿಯನ್ನು ಬೆತ್ತಲೆಯಾಗಿ ಬಿಟ್ಟು ಪರಾರಿಯಾಗಿದ್ದಾನೆ. ವಿದ್ಯಾರ್ಥಿನಿ ತನ್ನ ಆಧಾರ್ ಕಾರ್ಡ್ ಸರಿಪಡಿಸಬೇಕೆಂದು ಮನೆಯಿಂದ ಹೊರಟಿದ್ದಳು. ಆಕೆಯ ತಂದೆ ಆಕೆಯನ್ನು ಕಲೆಕ್ಟರೇಟ್ ಬಳಿ ಡ್ರಾಪ್ ಮಾಡಿದ್ದರು. ನಂತರ ಆಕೆ ತನ್ನ ತಂಗಿಗೆ ಕರೆ ಮಾಡಿ, ತನ್ನ ಸಹಪಾಠಿ ಪಿಯೂಷ್ ಧಮ್ನೋಟಿಯಾ ಜೊತೆ ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿರುವುದಾಗಿ ಮತ್ತು ರಾತ್ರಿ 11 ಗಂಟೆಗೆ ಹಿಂತಿರುಗುವುದಾಗಿ ಹೇಳಿದಳು.
ರಾತ್ರಿ 11ಗಂಟೆಗೆ ಆಕೆಯ ಫೋನ್ ಇಂದ ಅಪ್ಪಾ ನಾನು ಮನೆಗೆ ಬರುವುದಿಲ್ಲ ಎನ್ನುವ ಸಂದೇಶ ಬಂದಿತ್ತು, ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಪೊಲೀಸರು ಮೊಬೈಲ್ ವಶಪಡಿಸಿಕೊಂಡಾಗ ಅವರಿಬ್ಬರು 11 ವಿಡಿಯೋಗಳನ್ನು ಕಾಲೇಜಿನ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಹಾಕಿರುವುದು ಕಂಡುಬಂದಿತ್ತು. ವಿಚಾರಣೆಯ ಸಮಯದಲ್ಲಿ, ಧಮ್ನೋಟಿಯಾ ಘಟನೆಗಳ ಬಗ್ಗೆ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿದ್ದ.
ಕೊಲೆಯ ನಂತರ, ಪಿಯೂಷ್ ಮುಂಬೈಗೆ ಓಡಿಹೋಗಿ, ಪನ್ವೇಲ್ ಮೂಲಕ ಪ್ರಯಾಣಿಸಿ ಹೋಟೆಲ್‌ಗಳಲ್ಲಿ ತಂಗಿದ್ದ. ನಂತರ ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಪ್ರೇಯಸಿಯ ಆತ್ಮದೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಆಕೆಯನ್ನು ನಾನು ಮದುವೆಯಾಗಲು ಬಯಸಿದ್ದೆ, ಆಕೆ 15 ದಿನಗಳಿಂದ ನನ್ನ ಬಳಿ ಮಾತನಾಡಿರಲಿಲ್ಲ, ಆದರೆ ಬೇರೊಬ್ಬನ ಜತೆ ಚಾಟ್ ಮಾಡುತ್ತಿದ್ದಳು, ಅದಕ್ಕೆ ಕೋಪದಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
