ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಗಿಲ್ಲಿ ನಟ ಅವರು ಸಖತ್ ಹೈಲೈಟ್ ಆಗುತ್ತಿದ್ದಾರೆ. ರಾಜ್ಯಾದ್ಯಂತ ಅವರಿಗೆ ಜನಪ್ರಿಯತೆ ಹೆಚ್ಚಾಗಿದೆ. ಗಿಲ್ಲಿ ನಟ (Gilli Nata) ಅವರು ಶ್ರಿಮಂತನಾ ಅಥವಾ ಬಡವನಾ ಎಂಬ ಅನುಮಾನ ಹಲವರಿಗೆ ಇದೆ. ಆ ಬಗ್ಗೆ ಅವರ ಕುಟುಂಬದ ಸದಸ್ಯರಾದ ಬಸವರಾಜು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ. ‘ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ ಎಂಬ ಬಗ್ಗೆ ಗೊಂದಲ ನಿರ್ಮಾಣ ಆಗಿದೆ. ಗಿಲ್ಲಿಯದ್ದು ಮಿಡಲ್ ಕ್ಲಾಸ್ ಕುಟುಂಬ. ಇಂದಿಗೂ ಅವರ ತಂದೆ-ತಾಯಿ ವ್ಯವಸಾಯ ಮಾಡಿಕೊಂಡಿದ್ದಾರೆ. ಮಧ್ಯಮವರ್ಗದ ಕುಟುಂಬ ಆದ್ದರಿಂದ ಹೊಟ್ಟೆಗೆ ಬಟ್ಟೆಗೆ ಶಿಕ್ಷಣಕ್ಕೆ ಕೊರತೆ ಇಲ್ಲ. ಪಿಆರ್ ನೇಮಿಸಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಾನೆ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರ ತಂದೆ-ತಾಯಿಗೆ ಪಿಆರ್ ಎಂದರೆ ಏನು ಎಂಬುದೇ ಗೊತ್ತಿಲ್ಲ. ನಿನ್ನೆ ಭತ್ತ ಕೊಯ್ದಿದ್ದಾರೆ. ಮಳೆ ಬಂದು ಎಲ್ಲವೂ ನೆನೆದು ಹೋಗಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ. ಗಿಲ್ಲಿ ಏನೇ ಸಂಪಾದನೆ ಮಾಡಿದರೂ ಅವರ ತಂದೆ-ತಾಯಿ ತಮ್ಮ ಕಾಯಕ ಮುಂದುವರಿಸುತ್ತಿದ್ದಾರೆ. ಅವರು ಹಳ್ಳಿ ಜನ. ಪಿಆರ್, ಫೇಸ್ ಬುಕ್ ಇತ್ಯಾದಿ ಅವರಿಗೆ ಗೊತ್ತಿಲ್ಲ’ ಎಂದು ಬಸವರಾಜು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
