ಬೀದರ್, ಜುಲೈ 06: ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಕರ್ನಾಟಕದಲ್ಲಿ ನಡೆಯುತ್ತಿಲ್ಲ ಎಂಬ ವಿಪಕ್ಷಗಳ ಆರೋಪದ ನಡುವೆ ಬೀದರ್‌ನ ಭೀಮನಗರದ 109ರ ಬೂತ್ನ NGO ಕಚೇರಿಯಲ್ಲಿ SIR ಮಾಡ್ತಿರುವ ಘಟನೆ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಮಾಜಿ ಸಂಸದ ಭಗವಂತ ಖೂಬಾ ಬೆಟರ್ ಮೆಂಟ್ ಫೌಂಡೇಷನ್ ಕಚೇರಿಗೆ ಭೇಟಿ ನೀಡಿದ್ದು, NGO ಕಚೇರಿಯಲ್ಲಿ SIR ಯಾಕೆ ಎಂದು ಪ್ರಶ್ನಿಸಿದ್ದಾರೆ. ಮಾಜಿ ಸಂಸದರ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲಾಗದೆ BLO ಅನಿಲ್ ಕುಮಾರ್ ಸ್ಕೂಟಿ ಹತ್ತಿ ತೆರಳಿರುವ ಪ್ರಸಂಗವೂ ಇದೇ ವೇಳೆ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
