ಗುಜರಾತ್​ನಲ್ಲಿ 3,300 ಕೋಟಿ ರೂ ವೆಚ್ಚದ ಕೇನ್ಸ್ ಸಮಿಕಾನ್ ಘಟಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ

ಗುಜರಾತ್​ನಲ್ಲಿ 3,300 ಕೋಟಿ ರೂ ವೆಚ್ಚದ ಕೇನ್ಸ್ ಸಮಿಕಾನ್ ಘಟಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ

ಅಹ್ಮದಾಬಾದ್, ಮಾರ್ಚ್ 31: ಇಲ್ಲಿಗೆ ಸಮೀಪದ ಸಾನಂದ್​ನಲ್ಲಿ ಕೇನ್ಸ್ ಸಮಿಕಾನ್​ನ ಒಸಾಟ್ (OSAT- Outsourced Semiconductor Assembly and Test) ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದು 3,300 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಫೆಸಿಲಿಟಿ ಆಗಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಶುರುವಾಗಿರುವ ಎರಡನೇ ಚಿಪ್ ಮ್ಯಾನುಫ್ಯಾಕ್ಚರಿಂಗ್ ಘಟಕ ಇದಾಗಿದೆ. ಇದೇ ತಿಂಗಳು ಗುಜರಾತ್​ನಲ್ಲೇ ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿಯಿಂದ ಭಾರತದ ಮೊದಲ ಸೆಮಿಕಂಡಕ್ಟರ್ ತಯಾರಕ ಘಟಕ ಶುರುವಾಗಿತ್ತು.

ಕೇನ್ಸ್ ಸಮಿಕಾನ್ ಮೈಸೂರಿನ ಕೇನ್ಸ್ ಟೆಕ್ನಾಲಜಿ ಸಂಸ್ಥೆಯಿಂದ ಶುರುವಾಗಿರುವ ಸೆಮಿಕಂಡಕ್ಟರ್ ಚಿಪ್ ತಯಾರಕ ಘಟಕವಾಗಿದೆ. ಉದ್ಘಾಟನೆಗೆ ಮುಂಚೆಯೇ ಇಲ್ಲಿ ಕಮರ್ಷಿಯಲ್ ಉತ್ಪಾದನೆ ಆರಂಭವಾಗಿದೆ. ಆಟೊಮೋಟಿವ್ ಮತ್ತು ಔದ್ಯಮಿಕ ಅಪ್ಲಿಕೇಶನ್​ಗಳಿಗೆ ಬಳಸಲಾಗುವ ಇಂಟೆಲಿಜೆಂಟ್ ಪವರ್ ಮಾಡ್ಯೂಲ್​ಗಳನ್ನು (ಐಪಿಎಂ) ತಯಾರಿಸುವ ಕಾರ್ಯ ನಡೆಯುತ್ತಿದೆ. ಈ ಒಂದೊಂದು ಮಾಡ್ಯೂಲ್​ನಲ್ಲಿ 17 ಚಿಪ್​ಗಳನ್ನು ಜೋಡಿಸಲಾಗಿರುತ್ತದೆ. ಸುಮಾರು 900 ಮಲ್ಟಿಚಿಪ್ ಮಾಡ್ಯೂಲ್​ಗಳನ್ನು ತಯಾರಿಸಿ ಹೊರಕಳುಹಿಸಲಾಗಿದೆ.

ಇದನ್ನೂ ಓದಿ: ಆನ್​ಲೈನ್ ಪೋಸ್ಟ್ ಹಾಕುವಾಗ ಹುಷಾರ್; ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೂ ಬಿಸಿ; ಇದು ಸರ್ಕಾರದ ಪ್ರಸ್ತಾವಿತ ಐಟಿ ನಿಯಮಗಳ ಎಫೆಕ್ಟ್

ಈ ಘಟಕ ಪೂರ್ಣ ಶಕ್ತಿಯಿಂದ ಕಾರ್ಯಾರಂಭಿಸಿದರೆ ಒಂದು ದಿನಕ್ಕೆ 60 ಲಕ್ಷ ಚಿಪ್ ಯುನಿಟ್​ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಇನ್ನೂ ಹಲವು ಚಿಪ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳು ಬರಲಿವೆ

ಸರ್ಕಾರವು ಸೆಮಿಕಂಡಕ್ಟರ್ ಮಿಷನ್ ಅನ್ನು ಗಂಭೀರವಾಗಿ ಪರಿಗಣಿಸಿದ್ದು, ಹಲವಾರು ಘಟಕಗಳಿಗೆ ಅನುಮೋದನೆ ಕೊಟ್ಟಿದೆ. ಸದ್ಯಕ್ಕೆ ಅಮೆರಿಕದ ಮೈಕ್ರಾನ್ ಮತ್ತು ಮೈಸೂರಿನ ಕೇನ್ಸ್ ಟೆಕ್ನಾಲಜಿ ಕಂಪನಿಗಳು ಗುಜರಾತ್​ನ ಸಾನಂದ್​ನಲ್ಲಿ ಚಿಪ್ ತಯಾರಿಸುವ ಘಟಕ ಆರಂಭಿಸಿವೆ. ತೈವಾನ್​ನ ಪಿಎಸ್​ಎಂಸಿ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಮೊದಲಾದ ಸಂಸ್ಥೆಗಳಿಂದಲೂ ಸೆಮಿಕಂಡಕ್ಟರ್ ಘಟಕಗಳು ಶುರುವಾಗಲಿವೆ. ಅನುಮೋದನೆಗೊಂಡಿರುವ ಐದು ಸೆಮಿಕಂಡಕ್ಟರ್ ಘಟಕಗಳು ಇಂತಿವೆ:

  1. ಮೈಕ್ರಾನ್ ಟೆಕ್ನಾಲಜಿ: ಗುಜರಾತ್​ನ ಸಾನಂದ್​ನಲ್ಲಿ
  2. ಕೇನ್ಸ್ ಸೆಮಿಕಾನ್: ಗುಜರಾತ್​ನ ಸಾನಂದ್​ನಲ್ಲಿ
  3. ಟಿಎಸ್​ಎಟಿ (ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್) ಘಟಕ: ಅಸ್ಸಾಮ್​ನಲ್ಲಿ
  4. ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈ ಲಿ (ಟಿಇಪಿಎಲ್) ಫ್ಯಾಬ್ ಘಟಕ: ಗುಜರಾತ್​ನ ಧುಲೆರಾದಲ್ಲಿ
  5. ಸಿಜಿ ಪವರ್ ರೆನಿಸಾಸ್ ಘಟಕ: ಗುಜರಾತ್​ನಲ್ಲಿ

ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ಇಲ್ಲಿ ಸಿಜಿ ಪವರ್ ರೆನಿಸಾಸ್ ಘಟಕವು ಭಾರತ, ಜಪಾನ್ ಮತ್ತು ಥಾಯ್ಲೆಂಡ್ ಕಂಪನಿಗಳ ಜಂಟಿ ಯೋಜನೆಯಾಗಿದೆ. ಜಪಾನ್​ನ ರೆನಿಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್, ಥಾಯ್ಲೆಂಡ್​ನ ಸ್ಟಾರ್ಸ್ ಮೈಕ್ರೋಎಲೆಕ್ಟ್ರಾನಿಕ್ಸ್ ಮತ್ತು ಭಾರತದ ಸಿಜಿ ಪವರ್ ಸಂಸ್ಥೆಗಳು ಸೇರಿ ಸಿಜಿ ಪವರ್ ರೆನಿಸಾಸ್ ಘಟಕವನ್ನು ನಿರ್ಮಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *