
ಮಂಗಳೂರು, (ಮಾರ್ಚ್ 26): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಹಿನ್ನೆಲೆಯಲ್ಲಿ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದ್ದು, ಹಲವು ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಇದರ ಮಧ್ಯೆ ಕತಾರ್ನಿಂದ ಎಲ್ಪಿಜಿ ಹೊತ್ತ ಹಡಗು ನವಮಂಗಳೂರು ಬಂದರಿಗೆ (New Mangalore Port) ಆಗಮಿಸಿದೆ. 17 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ (LPG) ಇರುವ ಅಪೋಲೋ ಓಷನ್(Apollo Ocean) ಹೆಸರಿನ ಹಡಗು ಮಂಗಳೂರಿಗೆ ಆಗಮಿಸಿದೆ. ಇದರಿಂದ ಗ್ಯಾಸ್ ಸಿಲಿಂಡರ್ ಕೊರತೆ ನೀಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.