ಬೆಂಗಳೂರು, ಜುಲೈ 24: ಗೂಗಲ್ ತನ್ನ ಬಳಕೆದಾರರಿಗಾಗಿ ‘ಸೆಲ್ಫಿ ವೀಡಿಯೊ’ (Selfie Video) ಮೂಲಕ ಖಾತೆಗೆ ಸೈನ್-ಇನ್ (Sign-in) ಹಾಗೂ ಖಾತೆ ಮರುಪಡೆಯುವ (Account Recovery) ಹೊಸ ಫೀಚರ್ ಅನ್ನು ಪರಿಚಯಿಸಿದೆ. ಪಾಸ್‌ವರ್ಡ್ ಮರೆತಾಗ ಅಥವಾ ರಿಕವರಿ ಫೋನ್ ಸಂಖ್ಯೆ/ಇಮೇಲ್ ಲಭ್ಯವಿಲ್ಲದಿದ್ದಾಗ ಬಳಕೆದಾರರು ತಮ್ಮ ಖಾತೆಯನ್ನು ಸುಲಭವಾಗಿ ಮರಳಿ ಪಡೆಯಲು ಇದು ನೆರವಾಗುತ್ತದೆ. ಇದು ಕೇವಲ ಐಚ್ಛಿಕವಾಗಿರುತ್ತದೆ. ಅಕೌಂಟ್ ರಿಕವರಿಗೆ ಈಗಿರುವ ಪಾಸ್ಕೀ, ಒಟಿಪಿ ವಿಧಾನಗಳೂ ಇರುತ್ತವೆ. ಈಗ ಹೆಚ್ಚುವರಿ ಆಯ್ಕೆಯಾಗಿ ಸೆಲ್ಫಿ ವಿಡಿಯೋ ಫೀಚರ್ ಬಿಡುಗಡೆ ಮಾಡಲಾಗಿದೆ.
ಸೆಲ್ಫಿ ವಿಡಿಯೋ ಸೆಟಪ್ ಮಾಡುವ ಕ್ರಮ
- ನಿಮ್ಮ ಗೂಗಲ್ ಖಾತೆಯ Security & Sign-in ವಿಭಾಗಕ್ಕೆ ಹೋಗಿ ‘Selfie Video’ ಆಯ್ಕೆಯನ್ನು ಆರಿಸಿಕೊಳ್ಳಿ.
- ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಕ್ಯಾಮೆರಾವನ್ನು ನೋಡಿ, ಪರದೆಯ ಮೇಲಿನ ಸೂಚನೆಯಂತೆ ತಲೆಯನ್ನು ಬೇರೆ ಬೇರೆ ಕೋನಗಳಲ್ಲಿ ತಿರುಗಿಸಿ (Guided Head Movements).
- ಇದು ನಿಮ್ಮ ಮುಖದ ವಿವರಗಳನ್ನು ಸುರಕ್ಷಿತವಾಗಿ ದಾಖಲಿಸಿ ‘ರೆಫರೆನ್ಸ್ ವೀಡಿಯೊ’ ಆಗಿ ಸಂಗ್ರಹಿಸಿಟ್ಟುಕೊಳ್ಳುತ್ತದೆ.
ಇದನ್ನೂ ಓದಿ: ಯುಪಿಐ ಬಳಕೆದಾರರ ಆ್ಯಪ್ ಆಯ್ಕೆಗಳ ಮೇಲೆ ಪ್ರಭಾವ ಬೀರುತ್ತಿವೆಯಾ ರಿವಾರ್ಡ್ಸ್, ಕ್ಯಾಷ್ಬ್ಯಾಕ್ ಆಫರ್ಗಳು?
ಖಾತೆಗೆ ಲಾಗಿನ್ ಅಥವಾ ರಿಕವರಿಗೆ ಸೆಲ್ಫಿ ವಿಡಿಯೋ ಬಳಸುವ ಕ್ರಮ
- ಲಾಗಿನ್ ಆಗಲು ತೊಂದರೆಯಾದಾಗ “Sign in with Selfie Video” ಆಯ್ಕೆಯನ್ನು ಬಳಸಿ.
- ಗೂಗಲ್ ಸೂಚಿಸಿದಂತೆ ಕ್ಯಾಮೆರಾ ಮುಂದೆ ಲೈವ್ ಆಗಿ ಮುಖ ತೋರಿಸಿ ತಲೆ ತಿರುಗಿಸಬೇಕು.
- ಗೂಗಲ್ ತನ್ನ ಸಿಸ್ಟಮ್‌ನಲ್ಲಿ ಸಂಗ್ರಹವಾಗಿರುವ ಹಳೆಯ ವೀಡಿಯೊಗೆ ಹೊಸ ವೀಡಿಯೊವನ್ನು ಹೋಲಿಸಿ, ನೀವೇ ನಿಜವಾದ ಬಳಕೆದಾರರೆಂದು ಖಚಿತಪಡಿಸಿಕೊಂಡು ಲಾಗಿನ್ ಮಾಡಲು ಅನುಮತಿ ನೀಡುತ್ತದೆ.
ಇದನ್ನೂ ಓದಿ: ಇಸ್ರೇಲ್ಗೆ ಶೇ 12.5, ಭಾರತಕ್ಕೆ ಶೇ. 10 ಸುಂಕ; ಅಮೆರಿಕದ ಪರಮಮಿತ್ರ ದೇಶಕ್ಕೆ ಹೆಚ್ಚಿನ ಟ್ಯಾರಿಫ್ ಯಾಕೆ?
ಸುರಕ್ಷತೆ ಮತ್ತು ಗೌಪ್ಯತೆ (Privacy & Security)
- ಈ ವೀಡಿಯೊವನ್ನು ಎನ್‌ಕ್ರಿಪ್ಟ್ ಮಾಡಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ.
- ಬಳಕೆದಾರರು ಬಯಸಿದಾಗ ತಮ್ಮ ಗೂಗಲ್ ಸೆಟ್ಟಿಂಗ್ಸ್‌ನಿಂದ ಈ ವೀಡಿಯೊವನ್ನು ಸಂಪೂರ್ಣವಾಗಿ ಅಳಿಸಿಹಾಕಬಹುದು.
- ಎಐ (AI) ಫೋಟೋಗಳು ಅಥವಾ ನಕಲಿ ವೀಡಿಯೊಗಳನ್ನು (Deepfake) ಬಳಸಿ ಖಾತೆ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ‘ಲೈವ್ ಮೂವ್‌ಮೆಂಟ್ಸ್’ (ಚಲನೆಗಳು) ಕಡ್ಡಾಯಗೊಳಿಸಲಾಗಿದೆ.
ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, Workspace ಖಾತೆಗಳು, ಮಕ್ಕಳ ಖಾತೆಗಳು (Child Accounts) ಮತ್ತು ಅಡ್ವಾನ್ಸ್ಡ್ ಪ್ರೊಟೆಕ್ಷನ್ ಪ್ರೋಗ್ರಾಂನಲ್ಲಿರುವ ಖಾತೆಗಳಿಗೆ ಈ ಸೌಲಭ್ಯ ಲಭ್ಯವಿರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
