‘ಗೂಗ್ಲಿ’ಯಲ್ಲಿ ಯಶ್​​ಗೆ ಬರೆದ ಡೈಲಾಗ್ ನಿಜವಾಯ್ತು; ಜಾಗತಿಕ ಮಟ್ಟದಲ್ಲಿ ‘ಟಾಕ್ಸಿಕ್’ ಹವಾ – Kannada News | From Googly to Toxic: Yash Global Success Proves Pavan Wadeyar Dialogue Right

ರಾಕಿಂಗ್ ಸ್ಟಾರ್ ಯಶ್ ಅವರ ‘ಕೆಜಿಎಫ್’ ಸರಣಿಯ ಯಶಸ್ಸಿನ ನಂತರ, ಅವರ ಪ್ರತಿಯೊಂದು ಸಿನಿಮಾ ಕೂಡ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಾಲಿಗೆ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic Movie) ಸೇರ್ಪಡೆಯಾಗಿದೆ . ಚಿತ್ರದ ಗ್ಲೋಬಲ್ ಮಟ್ಟದ ಕ್ರೇಜ್ ನೋಡಿದ ‘ಗೂಗ್ಲಿ’ ಚಿತ್ರದ ನಿರ್ದೇಶಕ ಪವನ್ ಒಡೆಯರ್, ಅಂದು ತಾವು ಸಿನಿಮಾಗಾಗಿ ಬರೆದಿದ್ದ ಡೈಲಾಗ್‌ ಒಂದನ್ನು ನೆನಪಿಸಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.

‘ಗೂಗ್ಲಿ’ಯ ಆ ಒಂದು ಮಾತು ಇಂದು ಅಕ್ಷರಶಃ ಸತ್ಯ

ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಪವನ್ ಒಡೆಯರ್, ‘ಗೂಗ್ಲಿ ಸಿನಿಮಾ ನೋಡಿದವರಿಗೆ ಖಂಡಿತ ಆ ಡೈಲಾಗ್ ನೆನಪಿರುತ್ತದೆ. ಹಿರಿಯ ನಟ ಅನಂತ್ ನಾಗ್ ಅವರ ಪಾತ್ರದ ಮೂಲಕ, ‘ನಮ್ಮ ಭವಿಷ್ಯ ಬಿಡು, ನನ್ನ ಮಗನ ಭವಿಷ್ಯ ಸ್ಟಡಿ ಮಾಡಿಕೊಂಡು ಬಂದಿದ್ದೀನಿ, ಇಡೀ ಪ್ರಪಂಚವೇ ಕೊಂಡಾಡುವ ಹಾಗೆ ಆಗ್ತಾನೆ ಅವನು’ ಎಂದು ಹೇಳಿಸಿದ್ದೆವು’ ಎಂಬುದಾಗಿ ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ.

‘ಅದು ಯಾವ ಗಳಿಗೆಯಲ್ಲಿ ಬರೆದಿದ್ದೆವೋ ಗೊತ್ತಿಲ್ಲ, ಆದರೆ ಇಂದು ಯಶ್ ಬೆಳೆದಿರುವ ಎತ್ತರ ಮತ್ತು ಟಾಕ್ಸಿಕ್ ಸಿನಿಮಾ ಜಾಗತಿಕ ಮಟ್ಟಕ್ಕೆ ತಲುಪಿರುವುದನ್ನು ನೋಡಿದರೆ ಆ ಮಾತು ಅಕ್ಷರಶಃ ನಿಜವಾಗಿದೆ’ ಎಂದು ಮೆಲಕು ಹಾಕಿದ್ದಾರೆ.

ಪ್ರಪಂಚವೇ ಕೊಂಡಾಡುವಂತೆ ಕಂಬ್ಯಾಕ್ ಮಾಡುತ್ತಿದ್ದಾರೆ ಯಶ್

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಳ್ಳುತ್ತಿದ್ದು, ಹಾಲಿವುಡ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಅತ್ಯಂತ ಅದ್ದೂರಿಯಾಗಿ ತಯಾರಾಗುತ್ತಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಂತಹ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಯಶ್ ‘ಟಾಕ್ಸಿಕ್’ ಪ್ರಚಾರ ನಡೆಸಿ ವಿಶ್ವಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ಗಾಗಿ ರವಿ ಬಸ್ರೂರು ಪ್ಲ್ಯಾನ್; 100 ಮಂದಿಯ ಆರ್ಕೆಸ್ಟ್ರಾ ಕಣಕ್ಕಿಳಿಸಿದ ಸಂಗೀತ ನಿರ್ದೇಶಕ

ಅಂದು ‘ಗೂಗ್ಲಿ’ ಚಿತ್ರದ ಶರತ್ ಆಗಿ ತೆರೆಮೇಲೆ ಮೆರೆದಿದ್ದ ಯಶ್, ಇಂದು ನಿಜ ಜೀವನದಲ್ಲೂ ಭಾರತೀಯ ಚಿತ್ರರಂಗದ ಗಡಿಯನ್ನು ದಾಟಿ ಜಾಗತಿಕ ಮಟ್ಟದ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿರುವುದು ಇಡೀ ಸ್ಯಾಂಡಲ್‌ವುಡ್ ಹೆಮ್ಮೆಪಡುವಂತೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *