ಚಿಕ್ಕಮಗಳೂರು, ಫೆಬ್ರವರಿ 28: ಗೋಣಿಬೀಡು ಸಮೀಪದ ಕಾಫಿ ತೋಟದ ಪ್ರದೇಶದಲ್ಲಿ ಕಾಡಾನೆ ಭೀಮ ಕಳೆದ ನಾಲ್ಕು ದಿನಗಳಿಂದ ಬೀಡುಬಿಟ್ಟಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹಾಸನದ ಬೇಲೂರಿನಿಂದ ಬಂದ ಸುಮಾರು 30 ಕಾಡಾನೆಗಳ ಹಿಂಡು ಈ ಪ್ರದೇಶದಲ್ಲಿ ನೆಲೆಸಿದ್ದು, ಈ ಹಿಂಡಿನಿಂದ ಬೇರ್ಪಟ್ಟಿರುವ ಭೀಮ ಜನವಸತಿ ಪ್ರದೇಶಗಳು ಮತ್ತು ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿದೆ. ಈ ಹಿನ್ನೆಲೆ ಅರಣ್ಯ ಇಲಾಖೆಯು ಸ್ಥಳೀಯರಿಗೆ ಮಹತ್ವದ ಮುಂಜಾಗ್ರತಾ ಸೂಚನೆಯನ್ನು ನೀಡಿದ್ದು, ಕಾಫಿ ತೋಟದ ಕೆಲಸಕ್ಕೆ ಹೋಗದಂತೆ ತಿಳಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
