ಇತ್ತೀಚೆಗೆ ಗೋವಾದಲ್ಲಿ ‘ಗೋವಾ ಸ್ಟ್ರೀಟ್ ರೇಸ್ 2026’ ನಡೆಯಿತು. ಇದರಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಎರಡನೇ ಸ್ಥಾನ ಪಡೆದುಕೊಂಡಿದೆ. ಇದು ಸುದೀಪ್ ಅವರಿಗೆ ಖುಷಿ ನೀಡಿದೆ. ಸುದೀಪ್ ನಟನೆಯ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಕ್ರಿಕೆಟ್ ಎಂದರೆ ಅವರಿಗೆ ಬಲು ಇಷ್ಟ. ಇತ್ತೀಚೆಗೆ ಸಿಸಿಎಲ್ನಲ್ಲಿ ಅವರ ತಂಡ ಗೆಲುವು ಸಾಧಿಸಿತು. ಅವರು ಈಗ ರೇಸಿಂಗ್ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಮಾಲೀಕತ್ವ ಅವರ ಬಳಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
