Headlines

ಗ್ಯಾಸ್ಟ್ರಿಕ್, ಅಸಿಡಿಟಿಯಿಂದ ದಿನಪೂರ್ತಿ ಹಿಂಸೆ ಪಡುತ್ತಿದ್ದೀರಾ? ಹಾಗಿದ್ರೆ ತಪ್ಪದೆ ಈ ಅಭ್ಯಾಸಗಳನ್ನು ಮಾಡಿ – Kannada News | Reduce Bloating And Acidity Naturally: Ayurvedic Home Remedies To Try Every Morning

ಇತ್ತೀಚಿನ ದಿನಗಳಲ್ಲಿ ಅಸಮರ್ಪಕ ಆಹಾರ ಪದ್ಧತಿ ಮತ್ತು ಅಸ್ತವ್ಯಸ್ತ ಜೀವನಶೈಲಿಯಿಂದ ಗ್ಯಾಸ್ಟ್ರಿಕ್, ಅಸಿಡಿಟಿ (Acidity), ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಸಮಸ್ಯೆಗಳು ಸಾಮಾನ್ಯವಾಗಿವೆ. ಬೆಳಿಗ್ಗೆ ಎದ್ದ ಕ್ಷಣದಿಂದಲೇ ಹೊಟ್ಟೆಯಲ್ಲಿ ಉರಿಯೂತ, ಗ್ಯಾಸ್ ಮತ್ತು ಹೊಟ್ಟೆ ಭಾರವಾದ ಅನುಭವದಿಂದ ಹಲವರು ದಿನವಿಡೀ ಅಸ್ವಸ್ಥರಾಗಿರುತ್ತಾರೆ. ಇದರಿಂದ ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾಗುವುದು ಮಾತ್ರವಲ್ಲದೆ, ಆಹಾರ ಸೇವಿಸುವ ಆಸಕ್ತಿಯೂ ಕುಗ್ಗುತ್ತದೆ. ಆಯುರ್ವೇದ ತಜ್ಞೆ ಡಾ. ಚಂಚಲ್ ಶರ್ಮಾ ಅವರು ಹೇಳುವ ಪ್ರಕಾರ, ಬೆಳಿಗ್ಗೆ ಕೆಲವು ಸರಳ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸಿದರೆ ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಸಮಸ್ಯೆಯನ್ನು ನಿಯಂತ್ರಿಸಬಹುದು. ವಿಶೇಷವಾಗಿ ದಿನದ ಆರಂಭವೇ ಆರೋಗ್ಯಕರವಾಗಿದ್ದರೆ ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ. ಹಾಗಾದರೆ ಹಾಗಾದರೆ ಗ್ಯಾಸ್, ಅಸಿಡಿಟಿಯಿಂದ ಮುಕ್ತಿ ಪಡೆಯಲು ಬೆಳಿಗ್ಗೆ ಎದ್ದು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಳಿಗ್ಗೆ ಎದ್ದು ಏನು ಮಾಡಬೇಕು?

ಬೆಚ್ಚಗಿನ ನೀರು ಕುಡಿಯಿರಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗಲು ಸಹಾಯವಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಅಸಿಡಿಟಿ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಯೋಗಾಭ್ಯಾಸ ಮಾಡಿ

ವಜ್ರಾಸನ, ಪವನಮುಖ್ತಾಸನ ಮತ್ತು ಬಾಲಾಸನದಂತಹ ಯೋಗಾಸನಗಳು ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ಜೊತೆಗೆ ದೇಹ ಮತ್ತು ಮನಸ್ಸಿಗೂ ಶಾಂತಿ ನೀಡುತ್ತವೆ.

ಇದನ್ನೂ ಓದಿ: ಊಟ ಕಡಿಮೆ ಮಾಡಿದ್ರೂ ಅಸಿಡಿಟಿಯಾಗುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ?

ಹರ್ಬಲ್ ಪಾನೀಯಗಳನ್ನು ಸೇವಿಸಿ

ಜೀರಿಗೆ ನೀರು, ಅಜ್ವೈನ್ ಚಹಾ ಮತ್ತು ಧನಿಯಾ ನೀರಿನಂತಹ ಹರ್ಬಲ್ ಡ್ರಿಂಕ್ಸ್ ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತ. ಇವು ಹೊಟ್ಟೆಯ ಉರಿಯೂತ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತಗ್ಗಿಸಲು ಸಹಾಯ ಮಾಡುತ್ತವೆ. ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಜೀರ್ಣಕ್ರಿಯೆ ಸುಧಾರಿಸಲು ಏನು ಮಾಡಬೇಕು?

ತಜ್ಞರ ಪ್ರಕಾರ, ನಿಯಮಿತ ಸಮಯಕ್ಕೆ ಸಮತೋಲನಯುತ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು, ದಿನನಿತ್ಯ ವ್ಯಾಯಾಮ ಮತ್ತು 8 ಗಂಟೆಗಳ ಸಮರ್ಪಕ ನಿದ್ರೆ ಜೀರ್ಣಕ್ರಿಯೆ ಉತ್ತಮವಾಗಿಡಲು ಮುಖ್ಯವಾಗಿದೆ. ಗ್ಯಾಸ್ಟ್ರಿಕ್ ಅಥವಾ ಆಸಿಡಿಟಿ ಸಮಸ್ಯೆ ನಿರಂತರವಾಗಿ ಕಾಣಿಸಿಕೊಂಡರೆ ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *