ರವಿಯು ಮೇಷ ರಾಶಿಯಲ್ಲಿದ್ದು ಈ ಕೆಳಗಿನ ವಿಭಾಗಗಳಲ್ಲಿದ್ದಾನೆ. ಇಲ್ಲಿ ರವಿ ಬಲಿಷ್ಠ. ಕುಜ ದ್ರೇಕ್ಕಾಣದಲ್ಲಿದ್ಸದು ಇದು ಸತ್ವ ಮತ್ತು ಸಾಹಸವನ್ನು ಸೂಚಿಸುತ್ತದೆ. ಚಂದ್ರ ಹೋರೆಯು ಸೌಮ್ಯತೆ ಮತ್ತು ಮಾನಸಿಕ ಬಲವನ್ನು ನೀಡುತ್ತದೆ. ಬುಧನ ನವಾಂಶವು ರವಿ ಸ್ವಲ್ಪ ಬೌದ್ಧಿಕ ಚತುರತೆಯನ್ನು ಪಡೆಯುತ್ತಾನೆ. ಬುಧನ ತ್ರಿಂಶಾಂಶದಿಂದವ್ಯವಹಾರ ಜ್ಞಾನ ಮತ್ತು ಸಂವಹನ ಕೌಶಲಕ್ಕೆ ಒತ್ತು ನೀಡುತ್ತದೆ. ಕುಜ ದ್ವಾದಶಾಂಶದಲ್ಲಿ ಅಧಿಕಾರ ಮತ್ತು ಶಕ್ತಿಯನ್ನು ಪುನರುಚ್ಚರಿಸುತ್ತದೆ.
ರಾಶಿಗಳ ಮೇಲೆ ಸಾಮಾನ್ಯ ಪರಿಣಾಮಗಳು
ರವಿಯು ಮೇಷದಲ್ಲಿ ಬಲಿಷ್ಠನಾಗಿರುವುದರಿಂದ ಮತ್ತು ವರ್ಗಗಳಲ್ಲಿ ಮಂಗಳ ಹಾಗೂ ಬುಧನ ಪ್ರಭಾವ ಹೆಚ್ಚಿರುವುದರಿಂದ ಈ ಕೆಳಗಿನ ಫಲಗಳನ್ನು ನಿರೀಕ್ಷಿಸಬಹುದು.
ಮೇಷ, ಸಿಂಹ, ಧನು ರಾಶಿಯಲ್ಲಿ ಇದ್ದರೆ ಅದ್ಭುತ ಆತ್ಮವಿಶ್ವಾಸ, ಆಡಳಿತಾತ್ಮಕ ಜಯ ಮತ್ತು ಸಮಾಜದಲ್ಲಿ ಗೌರವ ಪ್ರಾಪ್ತಿ. ಮಿಥುನ, ತುಲಾ, ಕುಂಭದಲ್ಲಿ ರವಿ ಇದ್ದರೆ ಹೊಸ ಯೋಜನೆಗಳ ಆರಂಭ, ಉತ್ತಮ ಸಂವಹನ ಮತ್ತು ಬೌದ್ಧಿಕ ಕೆಲಸಗಳಲ್ಲಿ ಯಶಸ್ಸು. ವೃಷಭ, ಕನ್ಯಾ, ಮಕರದಲ್ಲಿ ರವಿ ಇದ್ದರೆ ವೃತ್ತಿಯಲ್ಲಿ ಪ್ರಗತಿ, ಆದರೆ ಕೆಲಸದ ಒತ್ತಡ ಮತ್ತು ಪಿತ್ತ ಸಂಬಂಧಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ.ಕರ್ಕಾಟಕ, ವೃಶ್ಚಿಕ, ಮೀನದಲ್ಲಿ ರವಿ ಇದ್ದರೆ ಮಿಶ್ರಫಲ. ಆಸ್ತಿ ವಿಚಾರದಲ್ಲಿ ಲಾಭವಾದರೂ, ಮಾನಸಿಕ ಅಶಾಂತಿ ಅಥವಾ ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು.
ರವಿ ದಶೆಯ ಶುಭ-ಅಶುಭ ಫಲಗಳು
ರವಿಯ ದಶೆಯು ವ್ಯಕ್ತಿಯ ಜಾತಕದಲ್ಲಿ ರವಿಯ ಸ್ಥಾನ ಮತ್ತು ಲಗ್ನದ ಆಧಾರದ ಮೇಲೆ ನಿರ್ಧಾರವಾಗುತ್ತದೆ.
ಶುಭ ಫಲ :
ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ, ಧನು ಮತ್ತು ಮೀನ ಲಗ್ನದವರಿಗೆ ರವಿ ದಶೆಯು ಸಾಮಾನ್ಯವಾಗಿ ಶುಭ ಫಲ ನೀಡುತ್ತದೆ. ಸರ್ಕಾರಿ ಉದ್ಯೋಗ, ರಾಜಕೀಯ ಲಾಭ, ತಂದೆಯಿಂದ ಆಸ್ತಿ ಅಥವಾ ಸಹಾಯ, ಮತ್ತು ಸಮಾಜದಲ್ಲಿ ಉನ್ನತ ಪದವಿ ಸಿಗುತ್ತದೆ.
ಅಶುಭ ಫಲ :
ವೃಷಭ, ಕನ್ಯಾ, ತುಲಾ, ಮಕರ ಮತ್ತು ಕುಂಭ ಲಗ್ನದವರಿಗೆ ರವಿ ದಶೆಯು ಸವಾಲುಗಳನ್ನು ತರಬಹುದು. ಕಣ್ಣಿನ ಸಮಸ್ಯೆ, ಉಷ್ಣ ಸಂಬಂಧಿ ಕಾಯಿಲೆಗಳು, ಮೇಲಧಿಕಾರಿಗಳೊಂದಿಗೆ ಸಂಘರ್ಷ ಅಥವಾ ಅನಗತ್ಯ ಅಲೆದಾಟ ಉಂಟಾಗಬಹುದು.
ಇದನ್ನೂ ಓದಿ: ಹೂಡಿಕೆಯನ್ನು ಪ್ರತಿಷ್ಠೆಯಾಗಿ ಈ ತಿಂಗಳಲ್ಲಿ ಕಾಣುವುದು ಬೇಡ
ಮಿಶ್ರ ಫಲ :
ಮಿಥುನ ಲಗ್ನದವರಿಗೆ ರವಿ ದಶೆಯು ಪ್ರಯತ್ನಕ್ಕೆ ತಕ್ಕ ಪ್ರತಿಫಲ ನೀಡುತ್ತದೆ. ಸಣ್ಣಪುಟ್ಟ ಅಡೆತಡೆಗಳ ನಂತರ ಯಶಸ್ಸು ಸಿಗುತ್ತದೆ.
ಜಾತಕದಲ್ಲಿ ರವಿಯು 6, 8 ಅಥವಾ 12ನೇ ಮನೆಯಲ್ಲಿದ್ದರೆ ಅಥವಾ ಶನಿಯ ದೃಷ್ಟಿಯಲ್ಲಿದ್ದರೆ, ಶುಭ ಲಗ್ನವಾಗಿದ್ದರೂ ಮಿಶ್ರ ಫಲಗಳನ್ನೇ ನಿರೀಕ್ಷಿಸಬೇಕಾಗುತ್ತದೆ.
ಸೂರ್ಯನು ಇಲ್ಲಿ ಬುಧನ ನವಾಂಶ ಮತ್ತು ತ್ರಿಂಶಾಂಶದಲ್ಲಿರುವುದರಿಂದ, ಈ ದಶೆಯಲ್ಲಿ ವ್ಯಕ್ತಿಯು ಕೇವಲ ದೈಹಿಕ ಬಲಕ್ಕಿಂತ ಹೆಚ್ಚಾಗಿ ತನ್ನ ಬುದ್ಧಿವಂತಿಕೆಯನ್ನು ಬಳಸಿ ಕಾರ್ಯಸಿದ್ಧಿ ಮಾಡಿಕೊಳ್ಳುತ್ತಾನೆ.
– ಲೋಹಿತ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:56 pm, Tue, 5 May 26