ಬೆಂಗಳೂರು, ಮೇ 08: ಜಿಬಿಎ ಚುನಾವಣೆ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಮೀಟಿಂಗ್ ಬಳಿಕ ಮಾತನಾಡಿದ ಆಯುಕ್ತ ಸಂಗ್ರೇಶಿ, ಚುನಾವಣೆ ಸಂಬಂಧ ದಿನಾಂಕ ನಿಗದಿ ಮಾತ್ರ ಬಾಕಿ ಉಳಿದಿದೆ. ಉಳಿದೆಲ್ಲಾ ಪ್ರಕ್ರಿಯೆ ಮುಗಿಸಿದ್ದೇವೆ. ಮಳೆಗಾಲ, ಶಾಲಾ ಕಾಲೇಜು, ಸೆನ್ಸನ್ ಇವೆಲ್ಲಾ ಗಮನಿಸಿ ದಿನಾಂಕ ನಿಗದಿ ಆಗಬೇಕು. ಜೂನ್ 30ರ ಒಳಗಾಗಿ GBA ಚುನಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ನಿಗದಿತ ಕಾಲಮಿತಿಯಲ್ಲಿ ಚುನಾವಣೆ ಮುಗಿಸಿ ಸುಪ್ರೀಂಕೋರ್ಟ್ಗೆ ನಾವು ವರದಿ ಕೊಡಬೇಕು . ಜೂನ್ 14 ರಿಂದ ಜೂನ್ 24ರ ಒಳಗಾಗಿ ಒಂದು ಡೇಟ್ ಹೇಳಿ ಎಂದು ಸೂಚನೆ ಕೊಟ್ಟಿದ್ದೇನೆ. ಕೆಲವೇ ದಿನಗಳಲ್ಲಿ ಅಂತಿಮ ದಿನಾಂಕವನ್ನು ನಿಮ್ಮೆಲ್ಲರಿಗೂ ಹೇಳುತ್ತೇವೆ. ಚುನಾವಣೆ ಮುಂದೂಡಿಕೆ ಮಾಡುವ ಅಧಿಕಾರ ಸುಪ್ರೀಂಕೋರ್ಟ್ಗೆ ಮಾತ್ರ ಇರೋದು ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
