ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು; ಆಘಾತಕಾರಿ ವಿಡಿಯೋ ಇಲ್ಲಿದೆ – Kannada News | Coimbatore 66 year old woman lost life after falling from a moving bus

ಕೊಯಮತ್ತೂರು, ಏಪ್ರಿಲ್ 14: ರಸ್ತೆಯಲ್ಲಿ ಹೋಗುವಾಗ ವಾಹನಗಳು ಡಿಕ್ಕಿಯಾಗಿ ಹೊಡೆದು ಅಪಘಾತವಾಗುವುದು (Bus Accident) ಸಾಮಾನ್ಯ. ಆದರೆ, ಬಸ್​ನೊಳಗಿದ್ದರೂ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಬಸ್​​ನೊಳಗೆ ಕುಳಿತು ಪ್ರಯಾಣಿಸುತ್ತಿದ್ದ 66 ವರ್ಷದ ಮಹಿಳೆ ತನ್ನ ಸ್ಟಾಪ್ ಬಂದಿತೆಂದು ಎದ್ದು ನಿಲ್ಲುವಷ್ಟರಲ್ಲಿ ಚಾಲಕ ಬ್ರೇಕ್ ಒತ್ತಿದ್ದಾನೆ. ಆಗ ಆ ಮಹಿಳೆ ಬ್ಯಾಲೆನ್ಸ್ ತಪ್ಪಿ ಬಸ್​​ನ ಮೆಟ್ಟಿಲುಗಳ ಮೇಲೆ ಬಿದ್ದು ಹೊರಗೆ ಬಿದ್ದಿದ್ದಾರೆ. ಚಲಿಸುವ ಬಸ್​​ನಿಂದ ಬಿದ್ದ ಕಾರಣದಿಂದ ಆ ಮಹಿಳೆಗೆ ತೀವ್ರವಾಗಿ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಆಕೆ ಮೃತಪಟ್ಟಿದ್ದಾರೆ. ಮಾರ್ಚ್ 29ರಂದು ಕೋವೈಪುದೂರಿನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ 66 ವರ್ಷದ ಜಿ. ಕಾಮಚ್ಚಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆ ಬಸ್​​ನೊಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *