Headlines

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟ ಆಂಧ್ರದ ಯುವಕ: ಕಾರಣ ನಿಗೂಢ – Kannada News | Horrific Incident: Andhra Youth Dies Under Moving Train in Bengaluru; Severed Head Found 400m Away

ಬೆಂಗಳೂರು, ಜುಲೈ 29: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮೃತನನ್ನು ಆಂಧ್ರ ಮೂಲದ ವಿಶ್ವನಾಥ್(28) ಎಂದು ಗುರುತಿಸಲಾಗಿದ್ದು, ತಲೆಯಿಲ್ಲದ ದೇಹ ಮಾತ್ರ ನಿನ್ನೆ ಪತ್ತೆಯಾಗಿತ್ತು. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ರೈಲ್ವೇ ಪೊಲೀಸರು ಘಟನೆ ಸಂಬಂಧ ಯುಡಿಆರ್​​ ದಾಖಲಿಸಿಕೊಂಡಿದ್ದರು. ಆದರೆ ಇಂದು ರುಂಡವೂ ಪತ್ತೆಯಾಗಿದ್ದು, ಘಟನೆಯ ಬಗ್ಗೆ ಪೊಲೀಸರಿಗೆ ಸ್ಪಷ್ಟತೆ ಸಿಕ್ಕಿದೆ.

ರುಂಡವನ್ನು ಎಳೆದು ತಂದಿದ್ದ ನಾಯಿಗಳು

ರೈಲಿಗೆ ತಲೆಕೊಟ್ಟು ವಿಶ್ವನಾಥ್​​ ಆತ್ಮಹತ್ಯೆಯ ವೇಳೆ ರುಂಡ ಮತ್ತು ದೇಹ ಎರಡೂ ಬೇರೆ ಬೇರೆ ಆಗಿತ್ತು. 400 ಮೀಟರ್​ನಷ್ಟು ದೂರಕ್ಕೆ ತಲೆಯನ್ನು ನಾಯಿಗಳು ಎಳಲೆದು ತಂದಿದ್ದು, ಇಂದು ಮೈದಾನದಲ್ಲಿ ಅದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ಸಿಕ್ಕಿರುವ ರುಂಡವನ್ನು ವರ್ತೂರು ಪೊಲೀಸರು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.

ಇದನ್ನೂ ಓದಿ: ಮದುವೆಯಾದರೂ ಪರ ಪುರುಷನ ಜೊತೆ ಅನೈತಿಕ ಸಂಬಂಧ: ಪತಿಯಿಂದಲೇ ಪತ್ನಿಯ ಭೀಕರ ಕೊಲೆ

ಆತ್ಮಹತ್ಯೆಗೂ ಮುನ್ನ ಗರ್ಲ್​ಫ್ರೆಂಡ್​ಗೆ ಕರೆ

ಇನ್ನು ಆತ್ಮಹತ್ಯೆಗೂ ಮುನ್ನ ಗರ್ಲ್​ಫ್ರೆಂಡ್​ಗೆ ವಿಶ್ವನಾಥ್ ಕರೆ ಮಾಡಿದ್ದರು ಎಂಬ ವಿಚಾರವೂ ತನಿಖೆ ವೇಳೆ ಗೊತ್ತಾಗಿದೆ. ಪ್ರೇಯಸಿ ಜೊತೆ ಮಾತನಾಡಿದ ಬಳಿಕವೇ ಅವರು ಚಲಿಸುತ್ತಿರುವ ರೈಲಿಗೆ ತಲೆ ಕೊಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:02 pm, Wed, 29 July 26

Source link

Leave a Reply

Your email address will not be published. Required fields are marked *