ಚಿಕ್ಕಮಗಳೂರು, ಜುಲೈ 05: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ವಾತಾವರಣ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಸಿರು ರಾಶಿಯ ಮೇಲೆ ದಟ್ಟ ಮಂಜು ಚಿತ್ತಾರ ಬಿಡಿಸಿದೆ. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಈ ಘಾಟಿಯಲ್ಲಿ ಒಮ್ಮೆ ದಟ್ಟ ಮಂಜು ಕವಿದರೆ, ಮತ್ತೊಂದು ಕ್ಷಣದಲ್ಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಲೆಯಮಾರುತಗಳ ಈ ಮೋಡಿ ವಾಹನ ಸವಾರರಿಗೆ ಸವಾಲಾಗಿದ್ದರೂ, ಪ್ರವಾಸಿಗರನ್ನು ಮಾತ್ರ ಮಂತ್ರಮುಗ್ಧರನ್ನಾಗಿಸಿದೆ. ಪ್ರಕೃತಿಯ ಈ ಅದ್ಭುತ ಸೌಂದರ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ಫುಲ್ ಖುಷಿಯಿಂದ ಸೆರೆಹಿಡಿದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
