ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ, ಎನ್‌ಡಿಎ ಹೊಸ ಸಂಸದರು ಹಾಗೂ ಬಂಡಾಯ ನಾಯಕರಿಗೆ ಪ್ರಧಾನಿ ಮೋದಿ ಅಭಯ – Kannada News | Modi Assures NDA MPs: Don’t Worry, I am With You, Unity Amidst Parliament Standoff

ನವದೆಹಲಿ, ಆಗಸ್ಟ್​ 07: ಸಂಸತ್ತಿನ ಕಲಾಪಗಳಲ್ಲಿ ಗದ್ದಲ ಮತ್ತು ಅಡೆತಡೆಗಳು ಉಂಟಾಗುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಹೊಸದಾಗಿ ಆಯ್ಕೆಯಾದ ಎನ್‌ಡಿಎ (NDA) ಲೋಕಸಭಾ ಸಂಸದರೊಂದಿಗೆ ಉಪಾಹಾರ ಸಭೆ ನಡೆಸಿದ್ದಾರೆ.ತೃಣಮೂಲ ಕಾಂಗ್ರೇಸ್‌ನ ಬಂಡುಕೋರ ನಾಯಕರು ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ ಮಾಜಿ ಉದ್ಧವ್ ನಾಯಕರಿಗೆ ಭರವಸೆ ನೀಡಿದ ಪ್ರಧಾನಿ, ಎನ್‌ಡಿಎ ಒಂದು ಕುಟುಂಬ. ಪ್ರತಿಯೊಬ್ಬ ಸಂಸದನೊಂದಿಗೂ ನಾನು ನಿಲ್ಲುತ್ತೇನೆ, ನೀವು ಯಾವುದಕ್ಕೂ ಚಿಂತಿಸಬೇಕಾಗಿಲ್ಲ ಎಂದು ಅಭಯ ನೀಡಿದ್ದಾರೆ.

ಗದ್ದಲಕ್ಕೆ ಕಳವಳ: ಸಂಸತ್ತಿನ ನಿರಂತರ ಕಲಾಪ ತಡೆ ಮತ್ತು ಗದ್ದಲದಿಂದಾಗಿ ಹೊಸ ಸಂಸದರಿಗೆ ಮಾತನಾಡಲು ಅವಕಾಶ ಸಿಗದಿರುವುದಕ್ಕೆ ಪ್ರಧಾನಿ ಬೇಸರ ವ್ಯಕ್ತಪಡಿಸಿದರು. ಸಂಸತ್ತು ಸುಗಮವಾಗಿ ನಡೆಯುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಅತ್ಯಗತ್ಯ ಎಂದರು.
ಸಂಸದರು ಸಂಸತ್ತಿನ ಇತಿಹಾಸವನ್ನು ಓದಿ, ಸಂಶೋಧಿಸಿ ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಂಸತ್ತಿನಲ್ಲಿರುವ ಅಪಾರ ಐತಿಹಾಸಿಕ ಮಾಹಿತಿಯನ್ನು ಭಾಷಣ ಸಿದ್ಧಪಡಿಸಲು ಬಳಸಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟು ಮತ್ತು ಅಭಿವೃದ್ಧಿ
ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಡೆತಡೆ ಬಂದರೂ ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯವನ್ನು (PMO) ಸಂಪರ್ಕಿಸುವಂತೆ ಸಂಸದರಿಗೆ ಸೂಚಿಸಲಾಯಿತು.ಬಡ ಕಾರ್ಮಿಕರು, ರೈತರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಆಲಿಸುವಂತೆ ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

ಮತ್ತಷ್ಟು ಓದಿ:ಪ್ರಧಾನಿ ಮೋದಿಗೆ ಕರೆ ಮಾಡಿದ ನೆತನ್ಯಾಹು; ಪಶ್ಚಿಮ ಏಷ್ಯಾ ಸಂಘರ್ಷ, ಭಾರತ-ಇಸ್ರೇಲ್ ಸಂಬಂಧದ ಕುರಿತು ಚರ್ಚೆ

ದೆಹಲಿಯ ರಾಜಕೀಯ ಜಾಲದಲ್ಲಿ ಸಿಲುಕಿಕೊಳ್ಳಬೇಡಿ, ವಿರೋಧ ಪಕ್ಷದ ನಾಯಕರೊಂದಿಗೂ ಸೌಹಾರ್ದಯುತ ಬಾಂಧವ್ಯ ಕಾಯ್ದುಕೊಳ್ಳಿ ಎಂದು ಸಂಸದರಿಗೆ ನಗೆಚಟಾಕಿ ಹಾರಿಸಿದರು. ಈ ಉಪಾಹಾರ ಸಭೆಯಲ್ಲಿ ಶಿವಸೇನೆಯ 7, ಎನ್‌ಸಿಪಿ (ಅಜಿತ್ ಪವಾರ್) ಗುಂಪಿನ ಇಬ್ಬರು ಹಾಗೂ ಎನ್‌ಸಿಪಿಐ (NCPI) ನ 20 ಸಂಸದರು ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಎನ್‌ಡಿಎ ಸಂಸದರು ಭಾಗವಹಿಸಿದ್ದರು. ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇತ್ತೀಚೆಗೆ 37 ಬಿಜೆಪಿ ಸಂಸದರಿಗೆ ಭೋಜನಕೂಟ ಆಯೋಜಿಸಿದ್ದರು. ಎನ್‌ಡಿಎ ಮೈತ್ರಿಕೂಟದ ಆಡಳಿತಾರೂಢ ಪಕ್ಷಗಳ ನಡುವೆ ಉತ್ತಮ ಸೌಹಾರ್ದತೆ ಮತ್ತು ಕಾರ್ಯತಂತ್ರ ರೂಪಿಸಲು ಇಂತಹ ಅನೌಪಚಾರಿಕ ಭೇಟಿಗಳನ್ನು ಒಂದೊಂದಾಗಿ ನಡೆಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *