ಚಿಕನ್ ಫೆರಿ ಫೆರಿಯಲ್ಲಿ ಕೆಟ್ಟ ವಾಸನೆ: ದಾಳಿ ವೇಳೆ ಮಂಗಳೂರಿನ KFCಯಲ್ಲಿ ಹಳೇ ಮಾಂಸ ಪತ್ತೆ! – Kannada News | Food Safety Raid at Mangaluru KFC: Expired Meat and Reused Oil Seized; Outlet Ordered to Close

ಮಂಗಳೂರಿನ KFC ಔಟ್​​ಲೆಟ್​​ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿImage Credit source: Tv9 Kannada

ಮಂಗಳೂರು, ಆಗಸ್ಟ್​​ 16: ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್​​ಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸುತ್ತಿರುವ ನಡುವೆ ಆರೋಗ್ಯ ಸಚಿವ ಯು.ಟಿ. ಖಾದರ್​​ ಅವರ ತವರು ಜಿಲ್ಲೆ ಮಂಗಳೂರಲ್ಲಿಯೂ (Mangaluru) ಇದೇ ಮಾದರಿಯ ತಪಾಸಣೆ ನಡೆದಿದೆ. ಮಂಗಳೂರಿನ ಸಿಟಿ ಸೆಂಟರ್ ಮಾಲ್​​ನಲ್ಲಿರುವ ಕೆಎಫ್​​ಸಿ ಔಟ್​​ಲೆಟ್​​ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸ್ಟೋರೇಜ್​​ನಲ್ಲಿ ಹಳೇ ಮಾಂಸ, ಅವಧಿ ಮೀರಿದ ಎಣ್ಣೆ ಪತ್ತೆಯಾಗಿದೆ. ಗ್ರಾಹಕರೊಬ್ಬರು ಇಲ್ಲಿಂದ ಚಿಕನ್ ಫೆರಿ ಫೆರಿ ತರಿಸಿದ್ದರು. ಬಂದ ಫುಡ್​​ನಿಂದ ವಿಪರೀತ ದುರ್ವಾಸನೆ ಬರುತ್ತಿದ್ದ ಕಾರಣ ಅವರು ಆರೋಗ್ಯ ಇಲಾಖೆಗೆ ಈ ಬಗ್ಗೆ ದೂರು ನೀಡಿದ್ದರು ಎನ್ನಲಾಗಿದೆ.

ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಶಾಕ್​​

ಕೆಎಫ್​​ಸಿ ಔಟ್​​ಲೆಟ್​​ನಲ್ಲಿ ಪರಿಶೀಲನೆ ವೇಳೆ ಸುಮಾರು 4-8 ತಿಂಗಳ ಮಾಂಸವನ್ನು ದಾಸ್ತಾನಿಟ್ಟಿರೋದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಸ್ಟೋರೆಜ್ ರೂಂ ಪ್ರವೇಶಿಸುತ್ತಿದ್ದಾಗಲೇ ಗಬ್ಬು ವಾಸನೆ ಬಂದಿದ್ದು, ಔಟ್‌ಲೆಟ್‌ಗೆ ಬೆಂಗಳೂರಿನಿಂದ ಕೋಳಿ ಮಾಂಸ ರವಾನೆಯಾಗುತ್ತಿದೆ ಎಂಬುದು ಗೊತ್ತಾಗಿದೆ. ಸ್ಟೊರೇಜ್‌ನಲ್ಲಿ ಚಿಲ್ಲ್ ಚಿಕನ್, ಪ್ರೊಝನ್ ಚಿಕನ್ ಸೇರಿದಂತೆ 3 ಮಾದರಿಯ ಚಿಕನ್‌ಗಳನ್ನು ದಾಸ್ತಾನು ಮಾಡಲಾಗಿದ್ದು, 3 ದಿನಗಳಿಂದ ಒಂದೇ ಎಣ್ಣೆಯನ್ನು ಬಳಕೆ ಮಾಡುತ್ತಿರುವ ಮಾಹಿತಿ ಸಿಕ್ಕಿದೆ. ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದ್ದ ಕಾರಣ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ಪಡೆದಿದ್ದಾರೆ.

ಇದನ್ನೂ ಓದಿ:  ಆಹಾರ ಸುರಕ್ಷತಾ ತಪಾಸಣೆ: ಹೋಂ ಬೇಕರ್ಸ್‌, ಟಿಫಿನ್ ಸೇವೆಗಳು, ಕ್ಲೌಡ್ ಕಿಚನ್‌ಗಳ ಮೇಲೂ ಕಣ್ಣಿಟ್ಟ FDA

ಔಟ್​​ಲೆಟ್​​ ಕ್ಲೋಸ್​​

ತಪಾಸಣೆ ವೇಳೆ ಕಳಪೆ ಗುಣಮಟ್ಟದ ಆಹಾರಗಳು ಪತ್ತೆಯಾಗಿರುವ ಹಿನ್ನೆಲ ಸದ್ಯ ಮಳಿಗೆಯನ್ನು ಅಧಿಕಾರಿಗಳು ಬಂದ್​​ ಮಾಡಿಸಿದ್ದಾರೆ. ಕೋಳಿ ಮಾಂಸ ಮತ್ತು ಎಣ್ಣೆಯ ಮಾದರಿಯನ್ನು ಔಟ್​​ಲೆಟ್​​ನಿಂದ ಸಂಗ್ರಹಿಸಲಾಗಿದ್ದು, ಈ ಸ್ಯಾಂಪಲ್​​ಗಳನ್ನು ಮೈಸೂರಿನ ಲ್ಯಾಬ್​​ಗೆ ರವಾನಿಸಲಾಗಿದೆ. ಅಲ್ಲಿಂದ ಅಂತಿಮ ವರದಿ ಬಂದ ಬಳಿಕ ಇನ್ನಷ್ಟು ಅಸಲಿಯತ್ತು ಬಯಲಾಗಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *